ಕಲಿಯುಗದ ಮಹಿಮೆ..?!
ಮುಖವಾಡ ಹೊತ್ತವರೂ ಶಾಸ್ತ್ರಗಳ ಬೋಧಿಸಿದೊಡೆ
ನಗ್ನರಾಗಿ ನಿಂತವರೂ ಪರರ ಹಳಿಯ ತೊಡಗಿದೊಡೆ
ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!
ಅಧರ್ಮಿಗಳ ಬೆಂಬಲಕೂ ನೂಕು ನುಗ್ಗಲು ಉಂಟಾದೊಡೆ
ಅನಾಚಾರಿಗಳ ಅಂಗಳದಲಿ ಜನ ಜಾತ್ರೆ ಸೇರಿ ಇರ್ದೊಡೆ
ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!
ಲಂಗು ಲಗಾಮಿಲ್ಲದೇ ಸ್ವೇಚ್ಛಾಚಾರ ಮೆರೆಯುತ್ತ ಇರ್ದೊಡೆ
ಸ್ವಂತದಲಿ ನೈತಿಕತೆ, ಹಿರಿಯರಲಿ ಭಯ ಭಕುತಿ ಇಲ್ಲದೊಡೆ
ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!
ನೈತಿಕತೆ ಅನೈತಿಕತೆಯ ಅಂತರ ಕಾಣೆಯಾಗತೊಡಗಿದೊಡೆ
ಹೆತ್ತಬ್ಬೆಯ ಅತ್ಯಾಚಾರಕ್ಕೆ ಮಗನೇ ಮನ ಮಾಡಿ ನಿಂದೊಡೆ
ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!!
***
Rating
Comments
ಉ: ಕಲಿಯುಗದ ಮಹಿಮೆ..?!
In reply to ಉ: ಕಲಿಯುಗದ ಮಹಿಮೆ..?! by partha1059
ಉ: ಕಲಿಯುಗದ ಮಹಿಮೆ..?!
ಉ: ಕಲಿಯುಗದ ಮಹಿಮೆ..?!
In reply to ಉ: ಕಲಿಯುಗದ ಮಹಿಮೆ..?! by raghumuliya
ಉ: ಕಲಿಯುಗದ ಮಹಿಮೆ..?!
ಉ: ಕಲಿಯುಗದ ಮಹಿಮೆ..?!
In reply to ಉ: ಕಲಿಯುಗದ ಮಹಿಮೆ..?! by manju787
ಉ: ಕಲಿಯುಗದ ಮಹಿಮೆ..?!
ಉ: ಕಲಿಯುಗದ ಮಹಿಮೆ..?!
In reply to ಉ: ಕಲಿಯುಗದ ಮಹಿಮೆ..?! by vani shetty
ಉ: ಕಲಿಯುಗದ ಮಹಿಮೆ..?!
ಉ: ಕಲಿಯುಗದ ಮಹಿಮೆ..?!
In reply to ಉ: ಕಲಿಯುಗದ ಮಹಿಮೆ..?! by kavinagaraj
ಉ: ಕಲಿಯುಗದ ಮಹಿಮೆ..?!