ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
ಸೂರ,ಸೂರ್ಯ,ಆದಿತ್ಯ,ದಿವಾಕರ,ಭಾಸ್ಕರ,ಪ್ರಭಾಕರ,ಭಾಸ್ವಾನ್,ವಿವಸ್ವಾನ್,ಸಪ್ತಾಶ್ವ,ಉಷ್ಣರಶ್ಮಿ
ದ್ಯುಮಣಿ,ತರಣಿ,ಮಿತ್ರ,ಬಾನು,ರವಿ,ಖಗ,ಹಿರಣ್ಯಗರ್ಭ ಹೀಗೆ ನೂರಾರು ಹೆಸರುಗಳಿಂದ ವಿಖ್ಯಾತನಾದ ನಮ್ಮ ದಿನಮಣಿಯ ಉದಯದ ಸೊಬಗು ಎಲ್ಲ ಕವಿಗಳಿಗೊಂದು ಕವಿತಾ ವಸ್ತು.ಸೂರ್ಯೋದಯದ ರಮಣೀಯ ಸನ್ನಿವೇಶಗಳನ್ನು ಮೋಹಕವಾಗಿ,ಮಾರ್ಮಿಕವಾಗಿ.ಅರ್ಥಯುತವಾಗಿ,ಚಿತ್ರಿಸಿದ ಕವಿಗಳ ಕವಿತೆಗಳನ್ನಾಸ್ವಾದಿಸುವದೇ ರಸಿಕ ಕವಿಹೃದಯಿಗಳಿಗೆ ರಸದೌತಣ.ನೀಲಾಗಸದಂಚಿನ ವರ್ಣರಂಜಿತ ತೆರೆಯನ್ನು ನಿಧಾನವಾಗಿ ಸರಿಸುತ್ತ ಆ ಜಗಜ್ಜ್ಯೋತಿಯು ಉದಯಿಸುತ್ತಿರುವ ಸೊಬಗನ್ನು ಸವಿಯಲು ಕಣ್ಣೆರಡು ಸಾಲದು.ಉದಯ ರವಿಯ ಅನುಪಮ ಸೌಂದರ್ಯವನ್ನು ವರ್ಣಿಸುವ ಬಯಕೆ ಯಾವ ಕವಿಯಲ್ಲಿ ತಾನೇ ಇರಲಾರದು?ಸೂರ್ಯೋದಯವನ್ನು ಸ್ವಾಗತಿಸಲು ಪ್ರಕೃತಿಯೇ ಸಿದ್ಧವಾಗಿರುತ್ತದೆ.ಹಕ್ಕಿಗಳು ಚಿಲಿಪಿಲಿಯೊಂದಿಗೆ,ಭ್ರಮರಗಳು ಝೇಂಕಾರದೊಂದಿಗೆ,ಮೊಗ್ಗುಗಳುಬಿರಿಯುವ ಅದಮ್ಯ ಬಯಕೆಯೊಂದಿಗೆ,ತರಣಿಯ ಬರವನ್ನೇ ಇದಿರುನೋಡುತ್ತಿದ್ದರೆ,ಕವಿಗಳು ಕಲ್ಪನೆಯ ಕುಂಚವನ್ನು ಹಿಡಿದು ಹಿರಣ್ಯಗರ್ಭನ ಆಗಮನದ ಸ್ವರ್ಣವರ್ಣ ರಂಜಿತ ಚಿತ್ರವನ್ನು ಪದಗಳೆಂಬ ವಿಧವಿಧ ಬಣ್ಣಗಳಿಂದ ನವಿರಾಗಿ ಸೊಗಸಾಗಿ ಚಿತ್ರಿಸುತ್ತಾರೆ. ಸೂರ್ಯೋದಯದ ಸೊಬಗನ್ನು ತಮ್ಮಕಲ್ಪನೆಗಳಿಂದ ಜನಮನದಲ್ಲಿ ಬಿಂಬಿಸಿದ ಕೀರ್ತಿ ಕವಿಗಳಿಗೆ ತಾನೇ ಸಲ್ಲಬೇಕು?ಸೌಂದರ್ಯವನ್ನು ನೋಡುವ ಕಣ್ಣು,ಚಿತ್ರಿಸುವ,ಕಲ್ಪಿಸುವ ಮನ,ವರ್ಣಿಸುವ ಉತ್ಸಾಹಗಳಿಂದ ಅಭಿವ್ಯಕ್ತಿಯ ರಸಋಷಿ ಪ್ರಪಂಚಕ್ಕೂ ಹಾಗೂ ಭಾಸ್ಕರನಿಗೂ ರಸಮಯ ಮಾಧ್ಯಮವಾಗಿ ಪರಿಣಮಿಸುತ್ತಾನೆ.
ರಾಷ್ಟ್ರಕವಿ ಕುವೆಂಪುರವರ "ಭಾದ್ರಪದ ಸುಪ್ರಭಾತ" ಎಂಬ ಕವನದಲ್ಲಿ
ದಿಗುತಟದಲಿ ತೆರೆಯುತಿತ್ತು ಹಗಲಿನಕ್ಷಿ
ಮುಗಿಲ ಗರಿಯ ಕಾಯಿಸಿತ್ತು ಗಗನ ಪಕ್ಷಿ
ಹಗಲಿನಕ್ಷಿ ದಿಗಂತದಲ್ಲಿ ತೆರೆದಾಗ ಗಗನವೆಂಬ ಪಕ್ಷಿ ತನ್ನ ಮುಗಿಲೆಂಬ ಗರಿಯನ್ನು ಕಾಯಿಸಿತ್ತು ಎನ್ನುವ ಭಾವ ಇದು ಕವಿಹೃದಯದ ಕಲ್ಪನೆಗೆ ಮಾತ್ರ ಸೀಮಿತವಲ್ಲವೇ?ಇಂತಹ ಅಧ್ಭುತ ಕವನಗಳನ್ನು ಓದಿದಾಗ ಮೈ ನವಿರೇಳುತ್ತದೆ.
ದ ರಾ ಬೇಂದ್ರೆ ಯವರ ಈ ಕೆಳಕಂಡ ಕವನ ಅದೆಷ್ಟು ಮನಮೋಹಕ
ಮೂಡಲ ಮನೆಯ ಮುತ್ತಿನ ನೀರಿನ
ಎರಕವಾ ಹೊಯ್ದಾ ನುಣ್ಣನೆ ಎರಕವಾ ಹೊಯ್ದಾ
ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲಾ ತೊಯ್ದಾ ದೇವನು ಜಗವೆಲ್ಲಾ ತೊಯ್ದಾ
ಭಾರತೀಯರು ನಾವು ಭಾಗ್ಯಶಾಲಿಗಳು. ಸೂರ್ಯೋದಯದ ಸೊಬಗನ್ನು ವರ್ಷದ ಮುಕ್ಕಾಲುಪಾಲಿಗಿಂತಲೂಹೆಚ್ಚು ದಿನಗಳು ವೀಕ್ಷಿಸುವ ಅವಕಾಶ ಹಾಗೂ ಸೌಭಾಗ್ಯ ನಮ್ಮದು.ಮಂಜು ಕವಿದ ಅನೇಕ ದೇಶಗಳಲ್ಲಿ ಸೂರ್ಯೋದಯದ ಸೊಬಗನ್ನು ಕಾಣಲು ವಸಂತ ಕಾಲವನ್ನೇ ನಿರೀಕ್ಷಿಸಬೇಕಲ್ಲವೇ?
ವಸಂತ ಕಾಲದಲ್ಲಿ ಸಿಗುವ ಅಪರೂಪದ ಅಪೂರ್ವ ಸೂರ್ಯೋದಯದ ಸೊಬಗನ್ನು
ಆಂಗ್ಲಕವಿ "ಹೆನ್ರಿ ವ್ಯಾಡ್ಸ್ ವರ್ತ್ ಲಾಂಗ್ ಫೆಲೊ" ರವರ "ಸನ್ ರೈಸ್ ಆನ್ ದ ಹಿಲ್ಸ್" ಎಂಬ ಸುಂದರ ಕವನದಲ್ಲಿ ನಾವು ಕಾಣ ಬಹುದು
ಗುಡ್ಡವೊಂದರ ಮೇಲೆ ನಿಂತು ವಸಂತ ಋತುವಿನ ವಿಶೇಷ ಸೂರ್ಯೋದಯವನ್ನು ವೀಕ್ಷಿಸಿದ ಕವಿಹೃದಯದ ನುಡಿಗಳು ಈ ಕೆಳಕಂಡಂತಿವೆ.
I stood upon the hills, when heaven's wide arch
Was glorious with the sun's returning march,
And woods were brightened, and soft gales
Went forth to kiss the sun-clad vales.
ಸ್ವರ್ಗದ ಅಗಲವಾದ ಕಮಾನು ವಸಂತಕಾಲದಲ್ಲಿ ಹಿಂದಿರುಗಿದ ಸೂರ್ಯನಿಂದ ವೈಭವೋಪೇತವಾಗಿದೆ.ಮರಗಿದಗಳ ಕಾಂತಿಯು ಸೂರ್ಯರಶ್ಮಿಗಳಿಂದ ಇನ್ನಷ್ಟು ಪ್ರಭೆಯಿನ್ದ ಕಂಗೊಳಿಸಿದ್ದಾವೆ.ಸೂರ್ಯನಿಂದ ಆಚ್ಛಾದಿತವಾದ ಕಣಿವೆಗಳನ್ನು ಮುತ್ತಿಕ್ಕಿ ಕಚಗುಳಿಯಿಡಲು ಕುಳಿರ್ಗಾಳಿಯು ತೆರಳಿತು.
ಈ ರೀತಿ ದೇಶಭಾಶೆಗಳ ಪರಿಧಿಯನ್ನು ಮೀರಿ ಕವಿಹೃದಯ ರವಿಯುದಯದ ಸೊಬಗನ್ನು ಚಿತ್ರಿಸಿದ್ದನ್ನು ಕಂಡಾಗ "ರವಿ ಕಾಣದ್ದನ್ನು ಕವಿಕಂಡ ನೆಂಬ ನುಡಿ" ಅದೆಷ್ಟು ಅರ್ಥಪೂರ್ಣವೆನಿಸುತ್ತದೆಯಲ್ಲವೇ?
.......................ಮುಂದುವರಿಯುವುದು
Comments
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by raghumuliya
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by asuhegde

In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by nagarathnavina…

In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by ambika
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by nagarathnavina…
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by partha1059
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by ರಾಮಕುಮಾರ್

In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by sada samartha
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by nagarathnavina…
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by manju787
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by Tejaswi_ac

In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by gvmt
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by chethukallali
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by nagarathnavina…
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by narabhangi
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by karthik kote
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ
In reply to ಉ: ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ by gopinatha