ಒಮ್ಮೆ ನಕ್ಕು ಬಿಡಿ _ ೧೨

ಒಮ್ಮೆ ನಕ್ಕು ಬಿಡಿ _ ೧೨

ಅರವತ್ತರ ದಶಕದ ಕಾಲದ ಕಮ್ಯೂನಿಸಂ ವಿಡಂಭನೆ

ಒಮ್ಮೆ ಚೀನದ ಹಳ್ಳಿಗೆ ಸರಕಾರಿ ಅಧಿಕಾರಿಯೊಬ್ಬ ಬೇಟಿ ನೀಡಿದ, ಹಾಗೆ ಹಳ್ಳಿಯ ರೈತ ಪ್ರಮುಖನ ಮನೆಗೆ ಬಂದು ಅಲ್ಲಿ ಅವನು ಸೊಂಪಾಗಿ ಸಾಕಿದ್ದ ಹಂದಿಗಳನ್ನು ನೋಡಿ ಕೇಳಿದ
"ತಿನ್ನಲು ಏನು ಹಾಕಿ ಸಾಕಿದ್ದೀಯ ಸೊಂಪಾಗಿ ಬೆಳೆದಿದೆ?"
"ಗೋದಿ ಹಾಕುತ್ತಿದೆ ಸ್ವಾಮಿ ಅದಕ್ಕೆ ಹಾಗೆ ಮೈತುಂಬಿ ಬೆಳೆದಿವೆ" ರೈತ ಹೆಮ್ಮ ಹಾಗು ಸಂತೋಷದಿಂದ ನುಡಿದ
"ಏನು ಮನುಷ್ಯರ ಅಹಾರ ಅವಕ್ಕೆ ಹಾಕಿ ಬೆಳೆಸಿದ್ದೀಯ ಇದು ರಾಷ್ಟ್ರ ದ್ರೋಹ ನಿನಗೆ ೧೦೦೦ ಯಾನ್ ದಂಡ ಹಾಕುತ್ತಿದ್ದೇನೆ " ಅಂದ , ಬಂದಿದ್ದ ಅದಿಕಾರಿ ಅಹಾರ ಖಾತೆಯವನು ಪಾಪ ರೈತ ಅರಿಯ. ಮತ್ತೇನು ಅವನು ಹೇಳಿದ ದಂಡ ಕಟ್ಟಿದ. ಗೋದಿ ಹಾಕುವುದನ್ನು ಬಿಟ್ಟ , ಹಂದಿಗಳೆಲ್ಲ ಸೊರಗಿದ್ದವು ಸ್ವಲ್ಪ ಕಾಲ ಕಳೆಯಿತು , ಮತ್ತಾರೊ ಇನ್ನೊಬ್ಬ ಸರಕಾರಿ ಅದಿಕಾರಿ ಅವನಲ್ಲಿಗೆ ಬೇಟಿ ನೀಡಿದ.
"ಹಂದಿಗಳಿಗೇನು ತಿನ್ನಲು ಹಾಕುತ್ತೀಯ?" ಎಂದು ಪ್ರಶ್ನಿಸಿದ,
"ಏನು ಹಾಕಲ್ಲ ಅವೆ ಏನು ಕಸ ಕಡ್ಡಿ ತಿಂದು ಬದುಕುತ್ತವೆ " ರೈತ ನಿರ್ಲಕ್ಷದಿಂದ ನುಡಿದ
"ಏನು ಹಾಕದೆ ಅವನ್ನು ಗೊಳಾಡಿಸುತ್ತೀಯ ನಿನಗೆ ೧೦೦೦ ಯಾನ್ ದಂಡ ಹಾಕಿದ್ದೇನೆ" , ಈಬಾರಿ ಬಂದ ಅದಿಕಾರಿ ಪಶುಸಂಗೋಪನ ಇಲಾಖೆಯವನು ಅಲ್ಲದೆ ಪ್ರಾಣಿ ದಯಾಸಂಘದ ಅಧ್ಯಕ್ಷ ಪಾಪ ರೈತ ಅದನ್ನು ತಿಳಿಯ.
ಮತ್ತೆರಡು ತಿಂಗಳು ಕಳೆಯಿತು ರೈತನ ಗ್ರಹಚಾರ ಮತ್ತೊಬ್ಬ ಸರಕಾರಿ ಅದಿಕಾರಿ ರೈತನ ಮನೆಗೆ ಬೇಟಿ ನೀಡಿದ್ದ , ಹಂದಿಗಳನ್ನು ನೋಡಿ ಪ್ರಶ್ನಿಸಿದ
"ನಿನ್ನ ಹಂದಿಗಳಿಗೆ ತಿನ್ನಲು ಏನು ಹಾಕುತ್ತೀಯ",  ಈ ಬಾರಿ ರೈತ ಎಚ್ಚೆತ್ತಿದ್ದ , ಅವನು ಯೋಚಿಸಿ ನುಡಿದ
"ನನಗೆ ತಿಳಿಯದು ಸ್ವಾಮಿ ದಿನ ಬೆಳಗ್ಗೆ ಒಂದೊಂದು ಹಂದಿಗು ಹತ್ತು ಯಾನ್ ಕೊಡುತ್ತೇನೆ ಅವು ಹೊರಗೆ ಹೋಗಿ ಏನು ತಿಂದು ಬರುತ್ತವೋ ನನಗೆ ತಿಳಿಯದು"



(ಓದಿದ್ದು)

 

Rating
No votes yet

Comments