ವಾಕ್ಪಟುಗಳು : ಮೊದಲ ಹೆಜ್ಜೆಗಳು
ಈ ಚರ್ಚೆಯಲ್ಲಿ‘ವಾಕ್ಪಟುಗಳು’ ಕೂಟದ ಬಗ್ಗೆ ವಿಚಾರವಿನಿಮಯವಾಗಿತ್ತು. ಅದಕ್ಕೆ ಇವತ್ತು ನಾನು ಸೇರಿಸಿದ ಪ್ರತಿಕ್ರಿಯೆಗೆ/ಸೂಚನೆಗೆ ಉತ್ತರವಾಗಿ ಬಂದ ಸಲಹೆಯ ಮೇರೆಗೆ ಪ್ರತ್ಯೇಕವಾಗಿ ಪ್ರಕಟಿಸುತ್ತಿದ್ದೇನೆ... ನಿಮ್ಮ ಅವಗಾಹನೆಗೆ.
==================================================================================================
ಸುಮಾರು ಎರಡು ತಿಂಗಳುಗಳ ಹಿಂದೆ ಆದ ಸಂಪದ ಸಮ್ಮೇಳನ ೪ರಲ್ಲಿ ಹಲವರು ವಾಕ್ಪಟುಗಳ ಕುರಿತು ಆಸಕ್ತಿಯನ್ನು ತೋರಿದ್ದಿರಿ.
ಅದರ ನಂತರವೂ ಅನೇಕರು ಪಾಲ್ಗೊಳ್ಳವ ಇಂಗಿತವನ್ನು ತೋರಿಕೊಂಡಿದ್ದಿರಿ.
ಇನ್ನು ಮುಂದುವರೆಯಲು ಅಡ್ಡಿಯಿಲ್ಲ ಅಂದುಕೊಂಡಿದ್ದೇನೆ.
ವಾಕ್ಪಟುಗಳಾಗಿ ಸೇರಿ ಚಟುವಟಿಕೆಗಳನ್ನು ನಿಯತವಾಗಿ ನಡೆಸಲು ಕಾರ್ಯಯೋಜನೆಯ ಮತ್ತು ಪೂರ್ವಸಿದ್ಧತೆಯ ಅಗತ್ಯವಿದೆ.
ಮುಖ್ಯವಾದ ಈ ಘಟ್ಟದಲ್ಲಿ ಉತ್ಸಾಹೀ ಮುಂದಾಳುಗಳು ಒಗ್ಗೂಡಿ ಮುಂದಿನ ಹೆಜ್ಜೆಗಳನ್ನು ನಿರ್ಧರಿಸೋಣ.
ಬೆಂಗಳೂರಿಗೆ ಹಳೆಯ "ಹೊಸಬ"ನಾದ ನನಗೆ ಈ ನಗರದ ಎಲ್ಲಿ, ಏನು, ಎತ್ತಗಳ ಪರಿಚಯವಿರುವ ನಿಮ್ಮ ಸಲಹೆಗಳು ಮತ್ತು ಸೂಚನೆಗಳು ಬಹಳ ಉಪಕಾರಿ!
ಆಸಕ್ತರೆಲ್ಲ ದಯವಿಟ್ಟು ಪ್ರತಿಕ್ರಿಯೆ ನೀಡಿ.
ನಿಮ್ಮವ,
ಪ್ರಭು ಮೂರ್ತಿ
ವಾಕ್ಪಟುಗಳ ಕಿರುಪರಿಚಯ:
‘ವಾಕ್ಪಟುಗಳು’ ಎಂಬ ಟೋಸ್ಟ್ಮಾಸ್ಟರ್ಸ್ ಗುಂಪು, ಕ್ಯಾಲಿಫೋರ್ನಿಯಾದ ಬೇ-ಏರಿಯಾದಲ್ಲಿ ಸಕ್ರಿಯವಾಗಿದೆ. ಗೂಗಲ್ನಲ್ಲಿ vakpatugalu ಅಂತ ಹುಡುಕಿ ಸ್ವಲ್ಪ ಮಾಹಿತಿ ಪಡೆಯಬಹುದು.
youtubeನಲ್ಲಿ ಆಗಷ್ಟ್ ೨೯, ೨೦೦೯ರಂದು ಜರುಗಿದ ಸಭೆಯ ಕೆಲವು ಕ್ಷಣಗಳನ್ನು ಸಂಘದ ಸದಸ್ಯರೊಬ್ಬರು ಹಾಕಿದ್ದಾರೆ. ನೋಡಿ. ಇದು (ಮಿಕ್ಕೆಲ್ಲಾ ಸಭೆಗಳಂತೆ) ನಡೆದಿದ್ದು ಸ್ಯಾನ್ ಹೊಸೆಯಲ್ಲಿರುವ Cisco Systems ಕಂಪನಿಯ ಬಿಲ್ಡಿಂಗ್ ಒಂದರಲ್ಲಿ. ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಐವತ್ತಕ್ಕೂ ಹೆಚ್ಚು ವಾಕ್ಪಟುಗಳ ಸಭೆಗಳು ನಿಯತವಾಗಿ ತಡೆಯಿಲ್ಲದೇ ಜರುಗಿವೆ.
ನೆನ್ನೆಯ ಸಮ್ಮಿಲನದಲ್ಲಿ ಒಳ್ಳೆಯ ಪ್ರತಿಕ್ರಿಯೆ ಹಾಕುವುದರ ಕುರಿತು ಚರ್ಚೆ ಆಯಿತು. ಆಗ ನನಗೆ ವಾಕ್ಪಟುಗಳಲ್ಲಿ ಮೈಗೂಡಿಸಿಕೊಂಡಿರುವ ವಿಮರ್ಶಾಕ್ರಮವನ್ನು ತಿಳಿಸಲು ಸಮಯಾಭಾವದಿಂದ ಆಗಲಿಲ್ಲ. ಆ ವಿಮರ್ಶಾಕ್ರಮವನ್ನು ‘ಸ್ಯಾಂಡ್ವಿಚ್’ ಕ್ರಮ ಎನ್ನುತ್ತಾರೆ. ವಿಮರ್ಶೆಯಲ್ಲಿ ಮೊದಲು ಉತ್ತಮ ಅಂಶಗಳನ್ನು, ಸಮ್ಮತಗಳನ್ನು ಹೇಳಿ, ನಂತರ ಕುಂದು-ಕೊರತೆಗಳನ್ನು ಒಪ್ಪದಿರುವುದನ್ನು ತಿಳಿಸಿ ಕೊನೆಯಲ್ಲಿ ಉತ್ತೇಜನಾತ್ಮಕವಾದ ಸೌಜನ್ಯದ ಮಾತುಗಳೊಂದಿಗೆ ಮುಗಿಸುವುದು. ಈ ಕ್ರಮವನ್ನು ವಾಕ್ಪಟುಗಳಲ್ಲಿ ಪ್ರಜ್ಞಾಪೂರ್ವಕವಾಗಿ ಮೈಗೂಡಿಸಿಕೊಳ್ಳಲು ಅವಕಾಶವಿರುತ್ತದೆ. ಇದನ್ನು ನಮ್ಮ ಜೀವನದ ಇತರೆಡೆಗಳಲ್ಲಿ ಸದುಪಯೋಗಪಡಿಸಿಕೊಳ್ಳಬಹುದು.
ಇಂತಹ ಸಂಘಗಳಿಂದ ಸಂಪದದ ಗುರಿಯಾದ ಸಮುದಾಯಸೃಷ್ಠಿಗೆ ಇಂಬು ದೊರೆಯುತ್ತದೆ. ವಾಕ್ಪಟುಗಳಲ್ಲಿ ಕೆಲವರು ತಮ್ಮ ಸಿದ್ಧಪಡಿಸಿದ ಭಾಷಣಗಳನ್ನು ಲೇಖನವಾಗಿಸಿ ಪ್ರಕಟಿಸಲು ತೊಡಗಿದ್ದಾರೆ. ಅಂತಹ ಬರಹಗಳು ಸಂಪದದಲ್ಲೂ ಪ್ರಕಟವಾದರೆ, ಇಂಟರ್ನೆಟ್ನಲ್ಲಿ ಕನ್ನಡದ ಕಂಪು ಇನ್ನೂ ಹೆಚ್ಚು ಪಸರಿಸಲು ಸಹಾಯವಾಗುತ್ತದೆ. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ಮತ್ತು ವಿಮರ್ಶೆಗಳನ್ನು ಹಾಕುವ ಸಂಸ್ಕೃತಿಯೂ ಬೆಳೆದು ಸಂಪದದ ಗುರಿಗೂ ಸಾಧಕ / ಪೂರಕವಾಗುತ್ತದೆ.
‘ವಾಕ್ಪಟುಗಳು’ ಪ್ರಯೋಗದಲ್ಲಿ ನೆನ್ನೆ ಅನೇಕರು ಆಸಕ್ತಿ ತೋರಿದ್ದು ತುಂಬಾ ಸಂತಸದ ಸಂಗತಿ. ಇಂತಹ ಪ್ರಯೋಗದಲ್ಲಿ ಭಾಗವಹಿಸಿ ಮಾತಿನ ಸಂಪರ್ಕಕೌಶಲ್ಯತೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಇತರರ ಭಾಷಣಗಳ ವಿಮರ್ಶೆಯನ್ನು ಮಾಡುವ ವಿಧಾನ, ಸಭೆಯ ರೀತಿ-ನೀತಿಗಳು, ಒಂದು ಸಂಘವನ್ನು ಉಳಿಸಿ ಬೆಳೆಸಲು ಬೇಕಾದ ನಾಯಕತ್ವದ ಗುಣಗಳು, ಸಮಯಪ್ರಜ್ಞೆ ಮತ್ತು ಸಮಯಪರಿಪಾಲನೆ... ಇತ್ಯಾದಿಗಳನ್ನು ಮೈಗೂಡಿಸಿಕೊಳ್ಳಲು ಅವಕಾಶವಿರುತ್ತದೆ.
Comments
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by raghusp
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by MADVESH K.S
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by Prabhu Murthy
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by raghusp
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by jokumar
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by sunilkgb
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by partha1059
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by ashyaa
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by MADVESH K.S
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by MADVESH K.S
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by manju787
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by raghusp
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by sunilkgb
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by MADVESH K.S
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by Prabhu Murthy
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by manju787
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by manju787
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by Prabhu Murthy
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by raghusp
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by Prabhu Murthy
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by aniljoshi
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು
In reply to ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು by Prabhu Murthy
ಉ: ವಾಕ್ಪಟುಗಳು : ಮೊದಲ ಹೆಜ್ಜೆಗಳು