ವ್ಯಾಲಂಟೈನ್ ಡೇ ಆಚರಣೆ ಬೇಕೇ?

ವ್ಯಾಲಂಟೈನ್ ಡೇ ಆಚರಣೆ ಬೇಕೇ?

Comments

ಬರಹ

ಫೆಬ್ರವರಿ ೧೪ ಬಂತೆಂದರೆ ಪ್ರೇಮಿಗಳಿಗೆ ಅದೆಂತದೋ ಸಂಭ್ರಮ. ಎಲ್ಲೆಲ್ಲಿ ನೋಡಿದರು ಕೆಂಪು ಕೆಂಪು  ಹೃದಯ ಮಾದರಿ ಬಲೂನ್ ಗಳು, ವಿಶೇಷ ರಿಯಾಯಿತಿಗಳು, ವಿಶೇಷ ಪಾರ್ಟಿಗಳು, ಉಡುಗೊರೆಗಳು, ಗುಲಾಬಿ ಹೂವುಗಳು. ಅಂದು ಪ್ರೇಮಿಗಳು ತಮ್ಮ ತಮ್ಮ ಪ್ರೇಮಿಗಳಿಗೆ ತಮ್ಮ ಪ್ರೇಮ ನಿ"ವೇದನೆ" ಮಾಡಿಕೊಳ್ಳುವ ದಿನ. ಎಷ್ಟೋ ದಿನದಿಂದ ಹುಡುಗ/ಹುಡುಗಿಯ ಹಿಂದೆ ಬಿದ್ದಿದ್ದವರು ಅಂದು ಅದೇನೋ ಮುಹೂರ್ತ ಇಟ್ಟಂತೆ ಆ ದಿನಕ್ಕೋಸ್ಕರ ಕಾದು ಒಂದು ಉಡುಗೊರೆ ಕೊಟ್ಟು ತಮ್ಮ ಪ್ರೇಮವನ್ನು ಹೇಳಿಕೊಳ್ಳುತ್ತಾರೆ. ಆದಿನ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ.

ಎಲ್ಲ ಸರಿ..ಆದರೆ ಈ ಆಚರಣೆ ಬೇಕೇ?. ಎಷ್ಟು ವರ್ಷಗಳಿಂದ ಭಾರತೀಯರು ಈ ಆಚರಣೆ ಅನುಕರಿಸುತ್ತಿದ್ದಾರೆ?.

ಪ್ರೇಮವೆಂಬುದು ವರ್ಷದಲ್ಲಿ ಒಂದು ದಿನ ಮಾತ್ರ ಬಂದು ಹೋಗುವಂತಹುದು ಅಲ್ಲ ಅಲ್ಲವೇ, ನಿಜವಾದ ಪ್ರೇಮಕ್ಕೆ ಕಾಲಮಿತಿ ಎಂಬುದು ಇಲ್ಲ ಅಲ್ಲವೇ..ಅಂಥಹುದರಲ್ಲಿ ಫೆಬ್ರವರಿ ೧೪ ರಂದು ಮಾತ್ರ ಪ್ರೇಮಿಗಳ ದಿನಾಚರಣೆ ಮಾಡುವ ಉದ್ದೇಶ ಏನು? ನಮಗೇಕೆ ಬೇಕು ಈ ಪಾಶ್ಚಾತ್ಯರ ಅಂಧಾನುಕರಣೆ? ಇಂಥಹ ಆಚರಣೆಗಳಿಂದ ನಮ್ಮ ಸಂಸ್ಕೃತಿಯನ್ನು ನಾವೇ ನಾಶಪಡಿಸಬೇಕೆ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet