ಅರ್ಥವಿಲ್ಲದ ಮೊಬೈಲ್ ಸಂದೇಶ.

ಅರ್ಥವಿಲ್ಲದ ಮೊಬೈಲ್ ಸಂದೇಶ.

ಇಂದು ಬೆಳ್ಳಂ ಬೆಳಿಗ್ಗೆ ನನ್ನ ಮೊಬೈಲ್ ಗೆ ಒಂದು ಸಂದೇಶ ಬಂತು. ಅದನ್ನು ಓದಿದ ಕೂಡಲೇ ಒಂದು ಕಡೆ ಸಂತೋಷ ಒಂದು ಕಡೆ ಬೇಸರ ಆಯಿತು. ಏಕೆಂದರೆ ಆ ಸಂದೇಶದ ಸಾರಾಂಶ ಹೀಗಿತ್ತು " ೧೪/೨/೧೯೩೧ ಈ ದಿನದಂದು ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಅವರನ್ನು ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಹೀಗಿರುವಾಗ ನಾವು ಈ ದಿನ ಶೋಕಾಚರಣೆ ಮಾಡುವುದನ್ನು ಬಿಟ್ಟು "Valentine Day " ಆಚರಿಸುವುದು ಎಷ್ಟು ಸರಿ?, ಇದನ್ನು ಎಷ್ಟು ಮಂದಿಗೆ ಸಾಧ್ಯವೋ ಅಷ್ಟು ಮಂದಿಗೆ ಕಳುಹಿಸಿ" ಎಂದಿತ್ತು. "Valentine  Day " ಮಾಡಬಾರದು ಎಂಬ ಉದ್ದೇಶ ಸಂತೋಷ ಕೊಟ್ಟಿತಾದರೂ ಭಗತ್ ಅವರ ಮರಣದ ದಿನಾಂಕವನ್ನು ತಪ್ಪಾಗಿ ತಿಲಿದುಕೊಂಡಿರುವುದರ ಕುರಿತಾಗಿ ಬೇಸರವಾಯಿತು.

ಕೂಡಲೇ ನನಗೆ ಸಂದೇಶ ಕಳುಹಿಸಿದ ವ್ಯಕ್ತಿಗೆ ಕರೆ ಮಾಡಿ ಯಾರು ನಿನಗೆ ಹೇಳಿದ್ದು ಈ ದಿನ ಭಗತ್ ಹಾಗೂ ಸಂಗಡಿಗರನ್ನು ಗಲ್ಲಿಗೇರಿಸಲಾಯಿತು ಎಂದು ಕೇಳಿದ್ದಕ್ಕೆ ಆತ ನನಗೆ ಸರಿಯಾಗಿ ಗೊತ್ತಿಲ್ಲ ನನಗೆ ಯಾರೋ ಕಳುಹಿಸಿದರು ನಾನು ಅದನ್ನೇ ನಿನಗೆ ಕಳುಹಿಸಿದೆ ಎಂದ. ನನಗೆ ಬಹಳ ಬೇಸರವಾಗಿ ಭಗತ್ ಹಾಗೂ ಸಂಗಡಿಗರನ್ನು ಗಲ್ಲಿಗೆರಿಸಿದ್ದು ೨೩ ಮಾರ್ಚ್ ೧೯೩೧ ರಂದು ಇಂದಲ್ಲ ಎಂದು ಆತನಿಗೆ ತಿಳಿಹೇಳಿ ಇನ್ನು ಮುಂದೆ ಹೀಗೆ ಸುಮ್ಮನೆ ಯಾರೋ ಕಳುಹಿಸಿದ ಸಂದೇಶವನ್ನು ಅವಲೋಕಿಸದೆ ಕಳುಹಿಸಬೇಡ ಎಂದು ಹೇಳಿದೆ.

ಅಸಲಿಗೆ ಇಂಥಹ ಸಂದೇಶಗಳನ್ನು ಕಳುಹಿಸಲು ಶುರು ಮಾಡುವುದು ಯಾರು? ಈ ದಿನ ಸಾಯಿ ಬಾಬ ಹುಟ್ಟಿದ ದಿನ, ಆ ಬಾಬ ಹುಟ್ಟಿದ ದಿನ, ಇದನ್ನು ಹತ್ತು ಜನರಿಗೆ ಕಳುಹಿಸಿದರೆ ನಿಮಗೆ ಒಂದು ದಿನದಲ್ಲಿ ಅದೃಷ್ಟ ಕೂಡಿಬರುತ್ತದೆ, ಇದನ್ನು 'ಡಿಲೀಟ್' ಮಾಡಿದರೆ ನಿಮಗೆ ದುರಾದೃಷ್ಟ ಉಂಟಾಗುತ್ತದೆ, ಇದೆ ರೀತಿಯ ಹತ್ತು ಹಲವು ಅರ್ಥವಿಲ್ಲದ ಸಂದೇಶಗಳು ದಿನಕ್ಕೊಮ್ಮೆಯಾದರೂ ಬರುತ್ತದೆ. ಕಳುಹಿಸಿದ ವ್ಯಕ್ತಿಯನ್ನು ಕೇಳಿದರೆ ಗೊತ್ತಿಲ್ಲ ನನಗೆ ಬಂದಿದ್ದನ್ನು ಹಾಗೆ ಕಳುಹಿಸಿದೆ ಎಂಬ ಉತ್ತರ. ನನ್ನ ಅಂದಾಜಿನ ಪ್ರಕಾರ ಈ ರೀತಿ ಸಂದೇಶಗಳನ್ನು ಹುಟ್ಟು ಹಾಕುವುದು ಈ ಮೊಬೈಲ್ ನೆಟ್ವರ್ಕ್ ಕಂಪನಿ ಗಳೇ ಎಂಬ ಅನುಮಾನ. ಯಾಕೆಂದರೆ ಈ ರೀತಿ ಸಂದೇಶಗಳು ಲೆಕ್ಕವಿಲ್ಲದಷ್ಟು ಹರಿದಾಡಿದರೆ ಆಯಾ ಕಂಪನಿ ಗಳಿಗೆ ಆಗುವ ಲಾಭವೆಷ್ಟು.

ಇದು ಕೇವಲ ನನ್ನ ಅನಿಸಿಕೆ. ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು
Rating
No votes yet

Comments