ಮಗುವೊಂದು ಬೇಕು
ಮಗುವೊಂದು ಬೇಕು
ಮಗುವೂಂದು ಬೇಕು, ನಮಗೆ
ಮನೆ ಬೆಳಕಾಗಲು, ಮನಕೆ ಮುದ ನೀಡಲು,
ಮಗುವೂಂದು ಬೇಕು, ಹೆಣ್ಣಿಗೆ
ತಾಯತನಕ್ಕೆ, ವ್ರದ್ಯಾಪ್ಯಕ್ಕೆ.ವಂಶೋದ್ದಾರಕ್ಕೆ
ಮಗುವೂಂದು ಬೇಕು, ಮುದ್ದಾಡಲು,
ಬೆಳೆಸಲು, ಬೆಳೆದು ನೆರವಾಗಲು
ಮದುವೆಯಾಗಬೇಕು, ಮಗುವಾಗಬೇಕು
ಆಗಲು, ಆ ಕಾಲನ ಕ್ರಪೆ ಇರಬೇಕು!
ನಾವೆಣಿಸುವುದೂಂದು, ಆಗುವುದೂಂದು
ಅಗಲಿಲ್ಲ ಮಗು, ಬಿಡುವುದಿಲ್ಲ ಬಿಗು
ದೇವ ದೇವ ಜಗನ್ನಾಥ, ಮೂರೆಯಿಡುವನಾತ
ಧನ್ವಂತರಿ, ದಯಾನಿಧಿ, ಕರುಣಿಸುವವನಾತ
ಹೋಮ, ಹವನಗಳೇನು, ಜಪ, ತಪಗಳೇನು,
ವ್ರತ ನಿಯಮಗಳೇನು, ಪೂಜೆ ನಮಸ್ಕಾರಗಳೇನು
ತೀರ್ಥಯಾತ್ರೆಗಳೇನು, ಪುರಾಣ, ಪುಣ್ಯಕಥೆಗಳೇನು,
ಪುನಶ್ಛರಣೆಗಳೇನು,ಹರಕೆಗಳದೇನು, ಗುರು ಉಪದೇಶಗಳೇನು
ಹೇಳಲಿಲ್ಲ ಯಾರು, ನಿಜವದೇನೆಂದು,
ಪ್ರಕ್ರತಿ ನಿಯಮವದು, ಸರಿಯಿರಬೇಕೆಂದು
ಪುರೋಹಿತರು ಹೇರಿದರು ದಾನ ಶುಲ್ಕವೆಂದು,
ವ್ಯೆದ್ಯರು ಹೀರಿದರು ನಾವು ಸರಿಪಡಿಸುವೆವೆಂದು
ಜಾತಕ ನೋಡಿದರು, ಶಾಂತಿ ಮಾಡಿಸಿದರು,
ಮನುಜನಿವನು, ನಂಬಿದನು ಎಲ್ಲರನು
ಮಾಡಿದನು ಎಲ್ಲಾ ಪ್ರಯತ್ನವನು.
ಛಲ ಬಿಡದ ತ್ರಿವಿಕ್ರಮನಿವನು
ಕರಗಲಿಲ್ಲ , ಕನಿಕರವಿಲ್ಲ, ವರವದಾಗಲಿಲ್ಲ
ಜಗದೊಡಯನ ನಿಯಮದಲ್ಲಿ, ಇದರ ಫಲ ಇವನಿಗಿಲ್ಲ
ಇದಾವುದೂ ಇವನ ಧ್ರುತಿಗೆಡಿಸಲ್ಲಿಲ್ಲ,
ನಿಲ್ಲಲಿಲ್ಲ ಇವನ ಸಂಸಾರದ ನಗು, ಆಗದಿದ್ದರೊ ಮಗು.
ಕನಸು ನನಸಾಗಲಿಲ್ಲ, ಕನಸ ಕಾಣುವುದು ನಿಲ್ಲಲಿಲ್ಲ
ಬದುಕು ಬರಡಾಗಲಿಲ್ಲ, ಬದುಕು ಸಾಕ್ಷಾತ್ಕಾರದ ಕಡೆ ಹೊರೆಟಿತಲ್ಲ.
- ಮಧ್ವೇಶ್.
Comments
ಉ: ಮಗುವೊಂದು ಬೇಕು
In reply to ಉ: ಮಗುವೊಂದು ಬೇಕು by bhalle
ಉ: ಮಗುವೊಂದು ಬೇಕು
ಉ: ಮಗುವೊಂದು ಬೇಕು
In reply to ಉ: ಮಗುವೊಂದು ಬೇಕು by savithru
ಉ: ಮಗುವೊಂದು ಬೇಕು