ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ನನ್ನ ವೈಯಕ್ತಿಗ ಬ್ಲಾಗ್ ತಾಣ "ಆಸುಮನ" ನಿನ್ನೆ ಎರಡು ವರುಷಗಳನ್ನು ಪೂರೈಸಿ ಮೂರನೇ ವರುಷಕ್ಕೆ ಪಾದಾರ್ಪಣೆ ಮಾಡಿತು.
ನನ್ನ ಕಿವಿ ಕಣ್ಣುಗಳಿಗೆ ಆಹಾರವಾದ ವಿಷಯಗಳಿಗೆ ನನ್ನ ಮನ ಸ್ಪಂದಿಸಿದಾಗಲೆಲ್ಲಾ, ಆ ಸ್ಪಂದನಗಳು ಆಸುಮನದಲ್ಲಿ ಮಾತುಗಳಾಗಿ ಅಕ್ಷರಗಳ ರೂಪತಾಳುತ್ತಾ ಬಂದಿವೆ.
ಮೊದಲನೇ ವರುಷ ಆಸುಮನದ ಮಾತುಗಳ ೨೦೦ ಪುಟಗಳು ಪ್ರಕಟಗೊಂಡಿದ್ದರೆ ಎರಡನೇ ವರುಷ ೧೮೯ ಪುಟಗಳು ಪ್ರಕಟಗೊಂಡಿವೆ.
ಇದನ್ನು ಒಂದು ಸಾಧನೆಯೆಂದು ದಾಖಲಿಸಬೇಕೋ ಅಥವಾ ಒಂದು ಸಾಮಾನ್ಯ ವಿಷಯವೆಂದು ದಾಖಲಿಸಬೇಕೋ ಅರಿವಾಗುತ್ತಿಲ್ಲ.
ಇವು ಎಣಿಕೆಗಾಗಿ, ಮೂರನ್ನು ನೂರಾಗಿಸಿ, ನೂರನ್ನು ನಾಲ್ಕುನೂರಾಗಿಸಲಷ್ಟೇ ಬರೆದ ಮಾತುಗಳಲ್ಲ.
ನನ್ನ ಮನದ ಸ್ಪಂದನಗಳಿಗೆ ಅಕ್ಷರ ರೂಪಕೊಟ್ಟು, ದಾಖಲಿಸಿ, ತಮ್ಮೊಂದಿಗೆ ಹಂಚಿಕೊಳ್ಳುವುದೊಂದೇ ಈ ಮಾತುಗಳ ಪ್ರಕಟಣೆಯ ಹಿಂದಡಗಿರುವ ಉದ್ದೇಶ.
ಮನುಜ ಸದಾಕಾಲ ಕ್ರಿಯಾಶೀಲನಾಗಿರುತ್ತಾನೆ. ತಾನು ಕೇಳುವ ಮತ್ತು ನೋಡುವ ವಿಷಯಗಳಿಗೆ ಸದಾ ಸ್ಪಂದಿಸುತ್ತಿರುತ್ತಾನೆ.
ಆದರೆ, ಎಲ್ಲರೂ ಆ ಸ್ಪಂದನಗಳಿಗೆ ಅಕ್ಷರ ರೂಪಕೊಟ್ಟು ಬಹಿರಂಗ ಪಡಿಸಲಾರರು.
ನನ್ನ ಮನದೊಳಗಿನ ಸ್ಪಂದನಗಳಿಗೆಲ್ಲಾ ಅಕ್ಷರರೂಪಕೊಟ್ಟು ಬಹಿರಂಗಗೊಳಿಸುವ ಈ ಒಂದು ಹವ್ಯಾಸ ನನ್ನಲ್ಲಿ ರಕ್ತಗತವಾಗಿರುವುದಕ್ಕೆ ನಾನು ನನ್ನ ಅಜ್ಜಯ್ಯ ಮತ್ತು ಅಪ್ಪಯ್ಯನವರಿಗೆ ಸದಾ ಋಣಿಯಾಗಿದ್ದೇನೆ.
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನಮ್ಮ ಅಜ್ಜಯ್ಯ, ದಿ. ಮುದ್ರಾಡಿ ಕೃಷ್ಣಯ್ಯ ಶೆಟ್ಟಿಯವರು ಕವಿತೆಗಳನ್ನು ಮತ್ತು ನೀಳ್ಗತೆಳನ್ನು ಬರೆಯುತ್ತಿದ್ದವರು.
ಆಯುರ್ವೇದ ತಜ್ಞ, ಪ್ರವಚನಕಾರ, ರಂಗಭೂಮಿ ಕಲಾವಿದ ಹಾಗೂ ಪ್ರಶಸ್ತಿ ವಿಜೇತ ಕೃಷಿಕರೂ ಆಗಿದ್ದ ನನ್ನ ಅಪ್ಪಯ್ಯ ಡಾ. ಯು. ಚಂದ್ರಶೇಖರ್ ಅವರೂ ಕವನಗಳನ್ನು, ನುಡಿಮುತ್ತುಗಳನ್ನು ಮತ್ತು ಲೇಖನಗಳನ್ನು ಬರೆಯುತ್ತಿದ್ದವರು.
ಹಾಗಾಗಿ, ಈ ಹವ್ಯಾಸ ನನಗೆ ಅನುವಂಶೀಯವಾಗಿ ಬಂದಿದೆಯೆಂದೆನ್ನಬಹುದೇನೋ.
ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ, ಪ್ರತಿಯೊಂದು ಘಟನಾವಳಿಗೂ, ಆಯಾ ಸಂದರ್ಭಕ್ಕೆ ಸಂಬಂಧಿಸಿದ ಉಪಕತೆಗಳನ್ನು ಹೇಳಿ ಎಚ್ಚರಿಸುತ್ತಿದ್ದವರು ಮತ್ತು ಜೀವನದ ಪಾಠ ಮಾಡುತ್ತಿದ್ದವರು ನಮ್ಮ ಅಪ್ಪಯ್ಯನವರು.
ಹಾಸ್ಯ ಪ್ರಜ್ಞೆಯನ್ನು ತನ್ನ ಕೊನೆಯುಸಿರು ಇರುವವರೆಗೂ ಜೀವಂತ ಇರಿಸಿಕೊಂಡು ಬಾಳಿದವರು ಅವರು.
ಯಾವುದೇ ಗಂಭೀರ ಸನ್ನಿವೇಶಗಳಲ್ಲೂ ಹಾಸ್ಯಪ್ರಜ್ಞೆಯನ್ನು ಕಾಯ್ದುಕೊಳ್ಳುವ ಜಾಣ್ಮೆಯನ್ನು ಹಾಗೂ ಯಾವುದೇ ಅಪ್ರಮುಖ ಸನ್ನಿವೇಶಗಳಲ್ಲೂ ಗಂಭೀರವಾದ ಜೀವನ ಪಾಠವನ್ನು ಅರಿತುಕೊಳ್ಳುವ ಜಾಣ್ಮೆಯನ್ನೂ ನಮಗೆ ಕಲಿಸಿಕೊಟ್ಟವರು ಅವರು.
ಇಂದು ಆಸುಮನ ಎರಡು ವರುಷಗಳನ್ನು ಪೂರೈಸಿ ಮೂರನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿರುವಾಗ ಅವರೀರ್ವರನ್ನು ನೆನೆಯುತ್ತಾ ಮತ್ತು ಅವರೀರ್ವರ ಅಮರಾತ್ಮಗಳಿಗೂ ನಮಿಸಿ, ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಮುಂದುವರಿಯುತ್ತಿದ್ದೇನೆ.
ಅಲ್ಲದೇ, ಅಂತರ್ಜಾಲದಲ್ಲಿ ನಾನು ನನ್ನದೇ ಛಾಪು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದಕ್ಕೆ ಸಹಕಾರಿಯಾದ, ನಾನು ಎಡವಿದಾಗ ತಿದ್ದುವ, ಮಾತುಗಳು ಮೆಚ್ಚುಗೆಯಾದಾಗ ಬಾಯ್ಬಿಟ್ಟು ಪ್ರೋತ್ಸಾಹದ ಮಾತುಗಳನ್ನು ನುಡಿದು, ನನ್ನ ಬೆನ್ನುತಟ್ಟಿ ಸ್ಪೂರ್ತಿ ತುಂಬುವ, ಇನ್ನೆಲ್ಲೋ ಹೋಗಿ, ಇನ್ಯಾರದೋ ಮುಂದೆ, ಆಸುಮನದ ಬಗ್ಗೆ ಒಳ್ಳೆಯ ನಾಲ್ಕು ನಿಸ್ವಾರ್ಥ ಮಾತುಗಳನ್ನು ಆಡುವ ಹಾಗೂ ಸದಾ ನನ್ನ ಹುಮ್ಮಸ್ಸನ್ನು ಇಮ್ಮಡಿಗೊಳಿಸಿ ಮುನ್ನಡೆಸುವ, ನನ್ನ ಅಪಾರ ಓದುಗ ಬಳಗಕ್ಕೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಹಾಗೆಯೇ ಇನ್ನು ಮುಂದೆಯೂ ತಮ್ಮಿಂದ ಇದೇ ರೀತಿಯ ಪ್ರೋತ್ಸಾಹವನ್ನು ಸದಾ ನಿರೀಕ್ಷಿಸುತ್ತಾ ಇರುತ್ತೇನೆ.
***********
Comments
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by partha1059
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by sunilkgb
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by raghumuliya
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by manju787
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by Jayanth Ramachar
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by manju787
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by ambika
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by nagarathnavina…
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by mpneerkaje
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by kamalap09
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by vani shetty
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by gopaljsr
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by Chikku123
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
In reply to ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! by Prabhu Murthy
ಉ: ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!