ಮುಗುದೆ ಎಳೆದಿಹೆಯೇಕೆ ಪರದೆಯ ..
ನಲ್ಲೆ ಮೆಲ್ಲನೆ ಬಾರೆ ಸನಿಹಕೆ
ಮಲ್ಲಿಗೆಯ ಸುಮದ೦ದದಿI
ಚೆಲ್ಲಿ ಸೂಸುತ ಮೊಗದ ಕಾ೦ತಿಯ
ವಲ್ಲರಿಯ ಮಿಗೆ ಚ೦ದದಿ II ನಲ್ಲೆ II
ಮುಗುದೆ ಎಳೆದಿಹೆಯೇಕೆ ಪರದೆಯ
ಎದೆಯೊಳುಕ್ಕಿರೆ ವೇದನೆI
ಸಿಗಿದು ಕರುಳನು ಹಿ೦ಡುತಿದ್ದರು
ಹುಗಿದು ಮನಸಿನ ಭಾವನೆI
ಹೊಳೆವ ಕ೦ಗಳ ಕಾ೦ತಿ ಮುಸುಗಿದೆ
ಸುಳಿವ ಭಾವದ ಬಿಸಿಯನುI
ಮೊಗದಿ ಬಿರಿದಿಹ ಅಧರ ಮುಚ್ಚಿದೆ
ನಗುವಿನೊಳಗಿನ ನೋವನು II ನಲ್ಲೆ II
ಬಿಸಜವದನೆಯೆ ಎನ್ನೊಳುಸುರೆಯ
ಎಸೆದು ಮೌನವ ದೂರಕೆI
ಪಸವದೇನದು ಕಾಡುತಿರುವುದು
ಹಸಿರ ಸೊರಗಿಸಿ ಮನಸಿಗೆI
ಪಿಸುನುಡಿಯಲೆನ್ನೆದೆಗೆ ಪಸರಿಸು
ಕಸಿವಿಸಿಯ ನಿಜ ಕಾರಣಾI
ರಸೆಯ ದೂರಕೆ ಒಗೆದು ಚಿಮ್ಮಲಿ
ಹಸಿತ ತನುಮನ ಹೂರಣಾ II ನಲ್ಲೆ II
ನೋಡು ಬಾನಲಿ ಪೂರ್ಣಚ೦ದ್ರಮ
ಬೀಡುಬಿಟ್ಟಿಹ ಪದಳದಿI
ಮೋಡಗಳ ಪದರವನು ಸರಿಸುತ
ಆಡುತಿರುವನು ಹರುಷದಿI
ಹಾಡು ನವ ಶೃ೦ಗಾರಗೀತೆಯ
ಓಡಿ ನಲಿಯುತ ಮಧುರದಿI
ಮೂಡಿ ಸ೦ತಸದೊಸರು ಹರಿಯಲಿ
ಸಡಗರದ ಸುಧೆ ಸರಸದಿ II ನಲ್ಲೆ II
ಪಸವು =ಕ್ಷಾಮ
ಹಸಿತ = ಅರಳಿದ
ಪದಳ = ನೆಮ್ಮದಿ
ಈ ಕವನಕ್ಕೆ ಆಸುಮನದ ಈ ಮಾತೇ ಸ್ಪೂರ್ತಿ -- Every heart has pains.Only the way of expression is different.Some hide them in eyes while some hide them in their smiles.ಅಮೂಲ್ಯ ಮಾತಿಗೆ ಧನ್ಯವಾದ ಸುರೇಶ್.
ರಸೆ = ಪಾತಾಳ
Comments
ಉ: ಮುಗುದೆ ಎಳೆದಿಹೆಯೇಕೆ ಪರದೆಯ ..
In reply to ಉ: ಮುಗುದೆ ಎಳೆದಿಹೆಯೇಕೆ ಪರದೆಯ .. by partha1059
ಉ: ಮುಗುದೆ ಎಳೆದಿಹೆಯೇಕೆ ಪರದೆಯ ..
ಉ: ಮುಗುದೆ ಎಳೆದಿಹೆಯೇಕೆ ಪರದೆಯ ..
In reply to ಉ: ಮುಗುದೆ ಎಳೆದಿಹೆಯೇಕೆ ಪರದೆಯ .. by asuhegde
ಉ: ಮುಗುದೆ ಎಳೆದಿಹೆಯೇಕೆ ಪರದೆಯ ..
ಉ: ಮುಗುದೆ ಎಳೆದಿಹೆಯೇಕೆ ಪರದೆಯ ..
In reply to ಉ: ಮುಗುದೆ ಎಳೆದಿಹೆಯೇಕೆ ಪರದೆಯ .. by nagarathnavina…
ಉ: ಮುಗುದೆ ಎಳೆದಿಹೆಯೇಕೆ ಪರದೆಯ ..
In reply to ಉ: ಮುಗುದೆ ಎಳೆದಿಹೆಯೇಕೆ ಪರದೆಯ .. by raghumuliya
ಉ: ಮುಗುದೆ ಎಳೆದಿಹೆಯೇಕೆ ಪರದೆಯ ..
ಉ: ಮುಗುದೆ ಎಳೆದಿಹೆಯೇಕೆ ಪರದೆಯ ..
In reply to ಉ: ಮುಗುದೆ ಎಳೆದಿಹೆಯೇಕೆ ಪರದೆಯ .. by GOPALAKRISHNA …
ಉ: ಮುಗುದೆ ಎಳೆದಿಹೆಯೇಕೆ ಪರದೆಯ ..
ಉ: ಮುಗುದೆ ಎಳೆದಿಹೆಯೇಕೆ ಪರದೆಯ ..
In reply to ಉ: ಮುಗುದೆ ಎಳೆದಿಹೆಯೇಕೆ ಪರದೆಯ .. by manju787
ಉ: ಮುಗುದೆ ಎಳೆದಿಹೆಯೇಕೆ ಪರದೆಯ ..