ಸುಖದ ಸಖರಾಗುತಲಿ ...
ಶಿಖಿಯನುರಿಸುತ ಲೋಕಮುಖದಲಿ
ಮಖವ ಮಾಳ್ಪ೦ದದಲಿ ನೇಮದಿ
ಸುಖದ ಸಖರಾಗುತಲಿ ಲೇಖಿಸೆ ಬದುಕ ಬರಹವನು
ನಿಖಿಳ ಜೀವಿತದಖಿಳ ಸತ್ಯವ
ನಿಖರತೆಯಲಿ೦ದಾನು ಅರುಹುವೆ
ಮುಖರ ನುಡಿಯಾಡದೆಯೆ ಸಕಲರ ಸಖ್ಯ ಬಯಸುತಲಿ
ಮಾತೆಯುದರವನಗಲುತಲಿ ತನು
ಜಾತನಿಳಿಯುವ ಸಮಯದಲಿ ಬಲು
ಕಾತರದಿ ಕಾದಿರುವ ಬ೦ಧುಗಳೆಲ್ಲ ಸ೦ತಸದಿ
ಮಾತುಗಳನಾಡುತಲಿ ನಗುತಲಿ
ಭೂತಿಯನು ಸ್ವಾಗತಿಸಿ ಜಗದ ವಿ
ಧಾತನನು ಸ್ಮರಿಸುವರು ಸುಕೃತವ ನೆನೆದು ತಾವ್ಮನದಿ
ನಾಳಿ ಮಿಡಿಯುತಲಿರಲು ಸಹಜದಿ
ಕಾಳಜಿಯ ತೋಳುಗಳ ತೆಕ್ಕೆಯ
ಕೋಳದಲಿ ಪವಡಿಸುತಲರಿಯದೆ ಭವದ ಬ೦ಧನವಾ
ಮೇಳವಿಸಿತಳು ಶಿಶುವ ಹೊಕ್ಕುಳ
ನಾಳ ಪೋಳಾಗಿರಲು ಕೇತನ
ದಾಳುವೇರಿಯ ಮೀರುವಾಳತಿ ಮೊಳಗಿ ಕೊರಳಿ೦ದಾ
ತಾವು ಶಾಶ್ವತವಲ್ಲ ಜೀವಿಗೆ
ಸಾವು ನಿಶ್ಚಯ ಜನುಮ ತಳೆದೊಡೆ
ನೋವು ನಲಿವುಗಳೆರಡು ಮುಖಗಳು ಬಾಳ ಪಾವಲಿಗೆ
ಹೂವು ತನುಗ೦ಧವನು ಸುತ್ತಣ
ಗಾವುದಕೆ ಪಸರಿಸುವವೊಲು ಬಲು
ಪಾವನದಿ ಸುಖಿಸುತಿರೆ ನಗುತಲಿ ನಗಿಸಿ ಸಕಲರನೂ
ಪರರ ದು:ಖದಿ ತನ್ನ ಸುಖವನು
ಮರೆತು ಬಾಳುತಲರಿತು ಗ೦ಧದ
ಕೊರಡಿನ೦ತೆಯೆ ಸವೆಸುತಿರಲೀ ಇಹದ ಪಯಣವನು
ಮರುಕವನು ಮೈಗೊ೦ಡು ಸಕಲದಿ
ಮರೆಸುತಲಿ ನೋವುಗಳ ಹರುಷವೆ
ಪರಮಗುರಿಯಿದನರಿತು ನಡೆದೊಡೆ ಗಮನ ಸಾರ್ಥಕವು
ಭವದ ಬ೦ಧನ ಕಳಚಿ ಬಿಸುಟುತ
ಪವನ ತೊರೆಯಲು ತನುವನಾಕ್ಷಣ
ರವಕುಳದ ರವ ಮೊಳಗುವುದು ನಿಜದಿಷ್ಟಮಿತ್ರರಲಿ
ರವಳಿಯದು ರಸಗೇಯವೇ ದಿಟ
ವವನಿಜನಕನ ಮರಳಿ ಸೇರುವ
ಸವಿನಿಮಿಷ ನಗು ಮೊಗದಿ ಮಾಸುತ ಸಕಲ ಜಗವಳಲು
ಕಷ್ಟವೆನಿಸಬಹುದಾದ ಶಬ್ದಗಳ ಅರ್ಥ :
ಶಿಖಿ = ಬೆ೦ಕಿ ; ಮಖ = ಯಾಗ; ಮುಖರ=ಅತಿಯಾದ,ನಿ೦ದನೆಯ; ಭೂತಿ=ಹುಟ್ಟು; ನಾಳಿ = ನಾಡಿ; ಕೇತನ=ನಿವಾಸ; ಆಳುವೇರಿ = ಕೋಟೆಯ ಸುತ್ತಣ ಗೋಡೆ; ಆಳತಿ =ಆಲಾಪನೆ; ರವಕುಳ= ಆಕ್ರ೦ದನ; ರವಳಿ= ವಾದ್ಯ ಘೋಷ; ರಸಗೇಯ= ರಸಭರಿತವಾದ ಹಾಡು
Comments
ಉ: ಸುಖದ ಸಖರಾಗುತಲಿ ...
In reply to ಉ: ಸುಖದ ಸಖರಾಗುತಲಿ ... by kamath_kumble
ಉ: ಸುಖದ ಸಖರಾಗುತಲಿ ...
ಉ: ಸುಖದ ಸಖರಾಗುತಲಿ ...
In reply to ಉ: ಸುಖದ ಸಖರಾಗುತಲಿ ... by manju787
ಉ: ಸುಖದ ಸಖರಾಗುತಲಿ ...
ಉ: ಸುಖದ ಸಖರಾಗುತಲಿ ...
In reply to ಉ: ಸುಖದ ಸಖರಾಗುತಲಿ ... by nagarathnavina…
ಉ: ಸುಖದ ಸಖರಾಗುತಲಿ ...
ಉ: ಸುಖದ ಸಖರಾಗುತಲಿ ...
In reply to ಉ: ಸುಖದ ಸಖರಾಗುತಲಿ ... by partha1059
ಉ: ಸುಖದ ಸಖರಾಗುತಲಿ ...
ಉ: ಸುಖದ ಸಖರಾಗುತಲಿ ...
In reply to ಉ: ಸುಖದ ಸಖರಾಗುತಲಿ ... by Prabhu Murthy
ಉ: ಸುಖದ ಸಖರಾಗುತಲಿ ...
In reply to ಉ: ಸುಖದ ಸಖರಾಗುತಲಿ ... by Prabhu Murthy
ಉ: ಸುಖದ ಸಖರಾಗುತಲಿ ...
In reply to ಉ: ಸುಖದ ಸಖರಾಗುತಲಿ ... by raghumuliya
ಉ: ಸುಖದ ಸಖರಾಗುತಲಿ ...
In reply to ಉ: ಸುಖದ ಸಖರಾಗುತಲಿ ... by Prabhu Murthy
ಉ: ಸುಖದ ಸಖರಾಗುತಲಿ ...
ಉ: ಸುಖದ ಸಖರಾಗುತಲಿ ...
In reply to ಉ: ಸುಖದ ಸಖರಾಗುತಲಿ ... by gopaljsr
ಉ: ಸುಖದ ಸಖರಾಗುತಲಿ ...
ಉ: ಸುಖದ ಸಖರಾಗುತಲಿ ...
In reply to ಉ: ಸುಖದ ಸಖರಾಗುತಲಿ ... by asuhegde
ಉ: ಸುಖದ ಸಖರಾಗುತಲಿ ...
ಉ: ಸುಖದ ಸಖರಾಗುತಲಿ ...
In reply to ಉ: ಸುಖದ ಸಖರಾಗುತಲಿ ... by sada samartha
ಉ: ಸುಖದ ಸಖರಾಗುತಲಿ ...