ಅವಶ್ಯಕತೆಯಿರುವಷ್ಟು ಚಿಂತಿಸುವುದಿಲ್ಲವೆಂಬುದರ ಬಗ್ಗೆ ಚಿಂತಿಸಿಃ ಗಾದೆಗೊಂದು ಗುದ್ದು-೬೬
(೩೩೬) ನಾವು ಅವಶ್ಯಕತೆಯಿರುವಷ್ಟು ಆಳವಾಗಿ ಚಿಂತಿಸುವುದಿಲ್ಲವೆಂಬ ವಿಷಯವನ್ನು ಆಳವಾಗಿ ಚಿಂತಿಸಿ ನೋಡಿ.
(೩೩೭) ಸಾವಿನ ಎರಡು ವಿಭಿನ್ನ ಅಧ್ಯಾಯಗಳ ನಡುವಣ ವಿರಾಮವೇ ಜೀವನ.
(೩೩೮) ನೀವು ತ್ರಿಕಾಲಜ್ಞಾನಿಗಳೆಂಬ ವಿಷಯ ನಿಮಗೆ ತಿಳಿದಿಲ್ಲ. ಈಗ ನೀವು ಮಾಡಲಿರುವಂತೆ, ಈ ವಿಷಯ ತಿಳಿದ ಕೂಡಲೆ ನೀವು ಅದನ್ನು ಸಾರಾಸಗಟಾಗಿ ನಿರಾಕರಿಸಿಬಿಡುತ್ತೀರಿ.
(೩೩೯) ಅಸ್ತಿತ್ವದಲ್ಲಿಲ್ಲದ ಸಮಸ್ಯೆಗೆ ಅನೌಪಚಾರಿಕವಾಗಿ ಸಮಾಧಾನ ಕಂಡುಕೊಳ್ಳುವುದೇ ಧೂಮಪಾನದ ಮೂಲೋದ್ದೇಶ.
(೩೪೦) ಇಂದೆಂಬುದು ನಾಳೆಯ ಅತ್ಯುತ್ತಮ ಬಿತ್ತನೆ. ಅದೇ ಇಂದೆಂಬುದು ನೆನ್ನೆಯ ಅತ್ಯುತ್ತಮ ಫಸಲೂ ಸಹ.
Rating
Comments
ಉ: ಅವಶ್ಯಕತೆಯಿರುವಷ್ಟು ಚಿಂತಿಸುವುದಿಲ್ಲವೆಂಬುದರ ಬಗ್ಗೆ ಚಿಂತಿಸಿಃ ...