ಮೆಲುಕು
ಗಂಟಲೊಳಗೆ ಇಳಿಯದಿದ್ದ ಕೆಲವು
ಇತಿಹಾಸದ ಬೇರುಗಳನ್ನು
ನಿನ್ನೆ ಮೊನ್ನೆಗಳ ಆಗು ಹೋಗುಗಳೊಂದಿಗೆ
ಬೆರೆಸಿ ಜಗಿಯಲೆತ್ನಿಸುತ್ತಿದ್ದೇನೆ
ಹಿಟ್ಲರ್ ಮುಸಲೋನಿಯ ನರಮೇಧದೊಂದಿಗೆ
ಗದ್ದಾಫಿಯ ಉಡಾಫೆ ಬೆರೆತಂತಿದೆ
ಬಿದ್ದ ಸದ್ದಾಂ ಪ್ರತಿಮೆ
ಅದರೊಂದಿಗೆ ಹೊಸ್ನಿ ಸಂಪತ್ತು
ಜಗಿದಂತೆ ನಾಲಗೆ ಕಹಿ ಕಹಿ
ಸೋವಿಯತ್ ಒಕ್ಕೂಟದ ಕಟ್ಟೆಯೊಡೆಯಲು
ಅಮೇರಿಕಾ ಹುಟ್ಟು ಹಾಕಿದ್ದ ತಾಲಿಬಾನ್
ಗೋಧ್ರಾ-ಅಕ್ಷರಧಾಮದ ಕಹಿಯೊಂದಿಗೆ
ಉಚಿತ ಕೊಡುಗೆಯಾಗಿ ಸಾಧ್ವಿ-ಮುಜಾಹಿದೀನ್;
ಒಬಾಮಾ-ಒಸಾಮಾ
ಸಾಮ್ಯತೆ ಅಕ್ಷರಗಳಿಗೂ ಮೀರಿದ್ದಿರಬಹುದೇ?
ಜಗಿಯದೇ ನುಂಗಲು ಈ ಒರಟು ಬೇರುಗಳನ್ನು
ಅರೆ! ಈ ಪಾನಕದ ಬಣ್ಣವೂ ಕೆಂಪು ಕೆಂಪು
ದಾರಿಯ ಇಕ್ಕೆಲಗಳಲ್ಲಿ ಮರ ಬೆಳೆಸಿದ್ದ ಆ ರಾಜ
ಕಾಣದ ತಂತ್ರಜ್ಞಾನ ಕಬಳಿಸಿದ ಈ(ಎ) ರಾಜ;
ಗಂಟಲಿನಿಂದಿಳಿಸಿದರೂ ಬೆರೆಯಲೊಪ್ಪುತ್ತಿಲ್ಲ;
ಕಿಡ್ನಿ ಬಿಕರಿಯಿಂದ ಕಟ್ಟಿಸಿದ
ಕ್ಲಿನಿಕ್ಕಿನೊಳಗೆ ಆ ವೈದ್ಯ ನೀಡಿದ
ಅಜೀರ್ಣದ ಗುಳಿಗೆಯಲ್ಲಿ
ಕಲಬೆರಕೆ ಇರಬಹುದೇ?
-ಶಫಿ ಸಲಾಂ
ಆದಿಉಡುಪಿ
Rating
Comments
ಉ: ಮೆಲುಕು
ಉ: ಮೆಲುಕು
In reply to ಉ: ಮೆಲುಕು by nagarathnavina…
ಉ: ಮೆಲುಕು
ಉ: ಮೆಲುಕು
ಉ: ಮೆಲುಕು
In reply to ಉ: ಮೆಲುಕು by kamath_kumble
ಉ: ಮೆಲುಕು
In reply to ಉ: ಮೆಲುಕು by partha1059
ಉ: ಮೆಲುಕು
ಉ: ಮೆಲುಕು
ಉ: ಮೆಲುಕು
ಉ: ಮೆಲುಕು