ನಗು ಬಂದ್ರೆ ನಕ್ಕುಬಿಡಿ

ನಗು ಬಂದ್ರೆ ನಕ್ಕುಬಿಡಿ

 ಚಲನಚಿತ್ರ ಮಂದಿರದಲ್ಲಿ ಟಿಕೆಟ್ ಗಾಗಿ ದೊಡ್ಡ ಕ್ಯೂ ಇತ್ತು.

ಒಬ್ಬ ಸೊಣಕಲ ಮನುಷ್ಯನ ಹಿಂದೆ ಒಬ್ಬ ಡಡೂತಿ ಮನುಷ್ಯ ನಿಂತಿದ್ದ.
ಆ ಸೊಣಕಲ ಹಿಂತಿರುಗಿ ಡಡೂತಿ ಮನುಷ್ಯ ನಿಗೆ ಹೇಳಿದ.ಯಾಕ್ರೀ ನನ್ನ ದೂಡ್ತೀರಾ?
ಸರಿಯಾಗಿ ನಿಲ್ಲಬಾರದೇ?
ಆ ಮನುಷ್ಯ ಏನೂ ಹೇಳಲಿಲ್ಲ.
ಸೊಣಕಲ ಮತ್ತೊಮ್ಮೆ ಹಿಂತಿರುಗಿ ಹೇಳಿದ ಒಂದ್ಸಲ ಹೇಳಿದ್ರೆ ಗೊತ್ತಾಗಲ್ವೇನ್ರೀ ದೂಡಬೇಡಿ ಅಂತ.
ಹೀಗೆ ೫-೬ ಸಲ ಬೈದ
೭ ನೆ ಸಲ ಬೈದಾಗ ಆವ್ಯಕ್ತಿ ಶಾಂತವಾಗಿ ,.
ಅಯ್ಯೊ ಮಹರಾಯ ನಿನ್ನನ್ನು ನಾನು ದೂಡಬಾರದು ಸರಿ ಆದ್ರೆ
 
 ನಿನಗೋಸ್ಕರ ನಾನು ಉಸಿರಾಡುವುದನ್ನು ನಿಲ್ಲಿಸಲು ಸಾಧ್ಯವೆ ಎಂದ? 
 
( ಈ ಅಂಕಣ ಪಾರ್ಥಸಾರಥಿಯವರ ಪ್ರೇರಣೆಯಿಂದ)
 
Rating
No votes yet

Comments