ನಿನದೇನೆ ನೆನಪು !!!!

ನಿನದೇನೆ ನೆನಪು !!!!

ಕವನ

ನೂರೆಂಟು ಕನಸು ಸಾಲಾಗಿ ನಿಂತು

ಕರೆದಾಗ ನಿನದೇನೆ ನೆನಪು ,

ಕವಿಯಾಗಿ ನಾನು ಬರೆದ ಕವಿತೆಯ

ಪದಗಳಲಿ ನಿನದೇನೆ ಹೆಸರು .

 

ಏಕೋ ಏನೋ ಈ ಜೀವವಿಂದು

ಲಘುವಾಗಿ ಹೇಳಿದೆ,

ನಿನ್ನನ್ನು ನೋಡುವ ಬಯಕೆಯ ತಿಳಿಸಿದೆ

 

ಕನಸಲ್ಲಿ ನನ್ನ ನೆನಪನ್ನು ಕಲಕಿ,

ಸಿಹಿಯನ್ನು ಕೊಟ್ಟ ಬಗೆಯು,

ಮರೆತರು ಮರೆಯದ, ಬೇಡೆಂದರು ಬಿಡದ,

ಮರಿಚಿಕೆ ನಿನದೇನೆ ಕನಸು......

 

ಹೊನಲಂತೆ ಹರಡಿ, ಹೂವಂತೆ ನಕ್ಕು,

ಲತೆ ಬಳ್ಳಿಯಾಗಿ ಕನರಿ,

ಮುಂಜಾವಿನ ತಿಳಿ ಲಾಸ್ಯದ

ಘಳಿಗೆಗೆ ನಿನದೇನೆ ಕನವರಿಕೆ......

 

ಆ ಬಾನ ಹಾಗೆ, ನೀನ್ ಇರದ

ತಾಣವ ಸಿಗದೆ ಹೋಯಿತೀಗ,

ಅರಸುತ್ತ ಸಾಗುವ ದಿಗಂತದ

ನೆಸರನಿಗೆ ನಿನದೇನೆ ಬಣ್ಣ.

 

ಕಣ್ಣಲ್ಲೆ ಹೇಳುವ ಮಾತೆಲ್ಲಾ,

ಮೌನ ರಾಗ, ನುಡಿ ಈಗ ಕರಗಿತಲ್ಲ,

ಕೇಳುವ ಗೋಜಿಗೆ ಹೋಗದ

ಮೌನಕೆ ನಿನದೇನೆ ಸ್ವರ ರಾಗ..

Comments