ಹೇಗೆ ಹೇಳಲಿ?

ಹೇಗೆ ಹೇಳಲಿ?

ಕವನ

 
ಮನದ ಮುರುಕುಗಳಲಿ ಬಿರುಕೆಬ್ಬಿಸಿದ

ನೆನಪುಗಳಿಗೆ ಹೇಗೆ ವಿದಾಯ ಹೇಳಲಿ?

ಭಾವುಕತೆಯ ಪರಿಧಿಯಾಚೆ ಸರಿದರೆ

ನನ್ನ ನಾನೇ ಕಳೆದುಕೊಳ್ಳುವ ಭಯವಿದೆ.

ಎಲ್ಲರಂತಿರಲಾಗದೆ ಭಾವನೆಗಳಿಗೆ ಕಿವಿಯಾಗುವ

ಮೌನಿಯ ಮುಂದೆ ಹರವಿಟ್ಟರೆ ಹೇಗೆ?

ಶೃತಿ ಮಾಡಿಟ್ಟ ವೀಣೆಯಂತೆ ಆ ಮೌನಿಗೂ

ನನ್ನದೇ ಭಯಗಳಿರಬಹುದೇ?

ಅಥವಾ ಕೊರಡಾದ ಈ ಎದೆಗೆ ಯಾರದೂ

ಹಂಗು ಬೇಡವೆಂದು ನಾನೇ ಮೌನ ತಾಳಲೆ?

ದಾರಿ ತಿಳಿದ ಮೇಲೂ ಏಕೋ ಏನೋ

ಕಣ್ಣಂಚಲಿ ಹನಿಗೂಡಿ ನನ್ನ ಆತ್ಮ

ನಿಕಷದ ಹಾದಿಗೆ ಸ್ವಸ್ತಿ ಎನ್ನುವಂತಿದೆ.

ನಿರ್ಭಾವುಕ ಸ್ವಾರ್ಥ ಜಗದ ಮುಂದೆ

ಅದು ಹೇಗೆ ಆಗಿರಲಿ ನಿಶ್ಚಿಂತ?

ಪ್ರಶ್ನೆಗಳೇ ಇಲ್ಲದ ದಾರಿಯಲಿ

ಉತ್ತರಗಳಿಗೆ ಯಾವ ದಿಗಂತ?

 

 

 

Comments