ನಗು ಬಂದ್ರೆ ನಕ್ಕು ಬಿಡಿ

ನಗು ಬಂದ್ರೆ ನಕ್ಕು ಬಿಡಿ

 

ಶಾಸ್ತ್ರಿಗಳ ಮನೆಯ ಮುಂದೆ ಕತ್ತೆಯೊಂದು ಸತ್ತು ಬಿದ್ದಿತ್ತು.

ದಿನವೆಲ್ಲ ಕಳೆದ್ರೂ ಮುನ್ಸಿಪಾಲ್ಟಿಯವರಾರೂ ಬರಲೇ ಇಲ್ಲ

ಶಾಸ್ತ್ರಿಗಳಿಗೋ ಬಲು ಸಿಟ್ಟು ಬಂತು.
ಮುನ್ಸಿಪಾಲ್ಟಿಯವರಿಗೆ ಫೋನಿಸಿದರು.
ಹಲೋ ನಾನು ಆನಂದನಗರದಿಂದ ಶಾಸ್ತ್ರಿ ಮಾತಡ್ತಾ ಇದ್ದೀನಿ ನಮ್ಮ ಮನೆಯ ಎದುರು ಕತ್ತೆಯೊಂದು ಸತ್ತು ಬಿದ್ದಿದೆ ಅಂದ್ರು
 
ಆಕಡೆಯಿಂದ ಲೇವಡಿಯ ಸ್ವರವೊಂದು ಕೇಳಿ ಬಂತು.
ಶಾಸ್ತ್ರಿಗಳೇ ನೀವೇಕೆ ಕತ್ತೆಯ ಅಂತ್ಯಕ್ರಿಯೆ ಮಾಡಬಾರದು ಹೇಗಿದ್ದರೂ ತಾವೇ ಶಾಸ್ತ್ರಿಗಳಲ್ಲವೇ?
 
ಶಾಸ್ತ್ರಿಗಳ ಸಿಟ್ಟು ನೆತ್ತಿಗೇರಿತು.
 
ಹೌದು ಸ್ವಾಮಿ ಅಂತ್ಯಕ್ರಿಯೆ ನಾನೇ ಮಾಡುತ್ತೇನೆ ಆದರೆ ಮಾಡುವ ಮೊದಲು 
ಆ ಕತ್ತೆಯ ಸಂಬಂಧಿಕರಿಗೆ ತಿಳಿಸ ಬೇಕಲ್ಲ ಅದಕ್ಕೇ ತಮಗೆ ತಿಳಿಸಿದೆ ಅಷ್ಟೇ ಎಂದು ಫೋನನ್ನು ಕುಕ್ಕಿದರು.
Rating
No votes yet

Comments