ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!
ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಪರಮ ಪೂಜ್ಯರು!
ನಡೆಯಲರಿಯದವರ ಕೈಹಿಡಿದುಕೊಂಡು
ನಡೆಯ ಕಲಿಸಿ, ಎಲ್ಲರಿಗೂ ಸದಾ ನೀತಿ ಪಾಠ ಮಾಡುತ್ತಿದ್ದರೂ
ಅವರ ಮುಂದೆಯೇ ಬೋರಲಾಗಿ ಬಿದ್ದು, ಗೌರವಕ್ಕೇ ಅಪಾತ್ರರೆನಿಸಿಕೊಂಡರು
ಮನದ ತುಂಬೆಲ್ಲಾ ತುಂಬಿಕೊಂಡು
ಅಭಿಮಾನದಿಂದ ತಲೆಯ ಮೇಲೆತ್ತಿಕೊಂಡು ಸುತ್ತಾಡಿದರೂ
ಕೊನೆಗೆ ತಮ್ಮೆಲ್ಲಾ ಅನಾಚಾರಗಳಿಂದಾಗಿ ನಮ್ಮ ಕಣ್ಮುಂದೆಯೇ ಬೆತ್ತಲಾದರು
ಸಾರ್ವಜನಿಕವಾಗಿ ಮೇಲೇರಿಕೊಂಡು
ತಾನೆಷ್ಟೇ ಸಾಚಾ ಎಂದು ಜಗದ ಮುಂದೆಲ್ಲಾ ತಾ ಮೆರೆದರೂ
ತನ್ನ ಒಳಉಡುಪುಗಳನ್ನೆಲ್ಲಾ ನಡುಬೀದಿಯಲಿ ಒಗೆದು ನಗೆಪಾಟಲಿಗೀಡಾದರು
ಗೌರವ ಸ್ಥಾನಗಳನ್ನು ಸ್ವೀಕರಿಸಿಕೊಂಡು
ಸಾಗುತ್ತಿರುವಾಗ ನಾವು ಅದೆಷ್ಟೇ ದೊಡ್ಡ ಸೌಧವನು ಕಟ್ಟಿದರೂ
ಸೌಧದ ಕಿಟಕಿ ಬಾಗಿಲುಗಳು ಸದಾ ತೆರೆದುಕೊಂಡಿರುವುದೆಂಬುದನೇ ಮರೆತರು
ತಾನು ನುಡಿದಂತೆ ನಡೆಯಿರಿಸಿಕೊಂಡು
ಬಾಳುವುದು ನಿಜದಿ ಬಹು ಸುಲಭಸಾಧ್ಯವಲ್ಲವೆಂದು ಅರಿತಿದ್ದರೂ
ತನ್ನ ನುಡಿಯಂತೆ ನಡೆಯಿರಿಸಿಕೊಂಡು ಬಾಳಿದವರೇ ನಿಜದೀ ಜಗದಿ ಆದರಣೀಯರು!
*****************************************
Rating
Comments
ಉ: ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಪರಮ ಪೂಜ್ಯರು!
In reply to ಉ: ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಪರಮ ಪೂಜ್ಯರು! by nagarathnavina…
ಉ: ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!
ಉ: ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!
In reply to ಉ: ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು! by ksraghavendranavada
ಉ: ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!
ಉ: ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!
In reply to ಉ: ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು! by RAMAMOHANA
ಉ: ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!
ಉ: ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!
ಉ: ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!
ಉ: ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!