My first post

My first post

ನನ್ನ ಪ್ರಥಮ ಲೇಖನ ಸ್ವಲ್ಪ different ಆಗಿ ಇರಲೆಂದು ಈ ರೀತಿ ಬರೆಯುತ್ತಿದ್ದೇನೆ. ಇತ್ತೀಚಿಗೆ ನೆಲ್ಲೀಕೆರೆ ವಿಜಯಕುಮಾರ ಅವರ "ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ" ಪುಸ್ತಕ ಓದುತ್ತ ಇದ್ದೆ. ಲೇಖಕರು ಕನ್ನಡದ ಬಹುತೇಕ ಶಬ್ದಗಳ ಅರ್ಥವನ್ನು "ಅಶಿಸ್ತು" ಎಂಬ ಶಬ್ಧದ ಅರ್ಥಕ್ಕೆ ಸಮನಾಗಿ ಬಳಸುತ್ತಿರುವಂತೆ ಭಾಸವಾಗುತ್ತಿತ್ತು. ಉದಾ: ಆತುರ, ಉದಾಸೀನ, ಅಜಾಗರೂಕತೆ , ಉಡಾಫೆ , ನಿರ್ಲಕ್ಷ್ಯ, ತಾತ್ಸಾರ ....ಇತ್ಯಾದಿ ಎಲ್ಲವನ್ನೂ ಅಶಿಸ್ತು ಎಂದೇ ಪರಿಗಣಿಸಲಾಗಿದೆ. ಆಂಗ್ಲ ಭಾಷೆಯ ಕನ್ನಡೀಕರಣದ ಸಮಸ್ಯೆ ಇದೆನಬಹುದೇ? ಆಂಗ್ಲಭಾಷೆಯಲ್ಲಿ ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಕಕ್ಕಿ, ಎಲ್ಲರಿಗೂ "aunt " ಶಬ್ದ ಬಳಕೆಯಾದಂತೆ. ಏನೇ ಆಗಲಿ ಆಂಗ್ಲ ಭಾಷೆ ಕನ್ನಡದಷ್ಟು ಶ್ರೀಮಂತವೂ ಅಲ್ಲ, ಪುರಾತನವೂ ಅಲ್ಲ.

ಕೊನೆ ಮಾತು: ಇಂಥ ಶ್ರೀಮಂತ ಭಾಷೆಯ ಸಮ್ಮೇಳನಕ್ಕೆ ಊಟಕ್ಕೆ ಆಗುವಷ್ಟು ಜನ ಗೋಷ್ಠಿಗೆ ಬರುವುದಿಲ್ಲ.

Comments