ಯಮನೇಕೆ ಈ ಭಭ್ಭಾವಲ್ಲಿಯಲ್ಲಿ ಕುಳಿತಿರುವನೋ

ಯಮನೇಕೆ ಈ ಭಭ್ಭಾವಲ್ಲಿಯಲ್ಲಿ ಕುಳಿತಿರುವನೋ

 ರಾಜನೊಬ್ಬ ಕವಿಯೋರ್ವನಿಗೆ ಮರಣದಂಡನೆ ವಿಧಿಸಿದ

 
ನಿನ್ನ ಕೊನೆಯ ಆಸೆಯೇನು ಹೇಳೆಂದಾಗ ಆ ಕವಿ ಹೇಳಿದ ರಾಜನ್ ನನಗೆ ನಿನ್ನ ಮುಂದೆ ನನ್ನ ಶ್ಲೋಕವೊಂದನ್ನುಸುರುವ ಆಸೆ.
 
ಸರಿ ಹೇಳೆಂದ ರಾಜ
 
ಕವಿ ಹೇಳಿದ
 
ಭಟ್ಟಿರ್ನಷ್ಟೋ ಭಾರವಿಶ್ಚಾಪಿ ನಷ್ಟಃ
ಭಿಕ್ಷುರ್ನಷ್ಟೋ ಭೀಮಸೇನೋಪಿ ನಷ್ಟಃ 
ಭುಕ್ಕುಂಡೋಹಮ್ ಭೂಪತಿಸ್ತ್ವಂಚ ರಾಜನ್
ಭಭ್ಭಾವಲ್ಯಾಮ್ ಅಂತಕಃ ಸನ್ನಿವಿಷ್ಟಃ
 
ರಾಜನ್ ಹಿಂದೆ-
 
ಭಟ್ಟಿ        ಯೆಂಬುವವನಿದ್ದ ಅವನೂ ಸತ್ತು ಹೋದ
ಭಾರವಿ     ಯೆಂಬುವವನಿದ್ದ ಅವನೂ ಸತ್ತು ಹೋದ
ಭಿಕ್ಷು        ವೆಂಬುವವನಿದ್ದ ಅವನೂ ಸತ್ತು ಹೋದ
ಭೀಮಸೇನ ನೆಂಬುವವನಿದ್ದ ಅವನೂ ಸತ್ತು ಹೋದ
ಭುಕ್ಕುಂಡ   ನೆಂದು ನನ್ನ ಹೆಸರು ನಾನು ಈಗ ಸಾಯುತ್ತಿದ್ದೇನೆ ರಾಜನ್ ಅದರೆ ನನಗೆ 
             ನಿನ್ನದೇ ಚಿಂತೆ ಏಕೆಂದರೆ ಇನ್ನು ಮುಂದಿನ ಅಕ್ಷರ ನಿನ್ನನ್ನೇ ಸೂಚಿಸುತ್ತದೆ
ಭೂಪತಿ     ನೀನು ಭೂಪತಿ ಹಾಗಾಗಿ ಮುಂದಿನ ಸರದಿ ನಿನದೇ
 
             ಯಮನೇಕೆ ಈ ಭಭ್ಭಾವಲ್ಲಿಯಲ್ಲಿ ಕ್ರಮವಾಗಿ( ಭ ಭಾ ಭಿ ಭೀ ಭು ಭೂ.... ಗಳಲ್ಲಿ)
             ಹೊಕ್ಕು ಕುಳಿತಿರುವನೋ ತಿಳಿಯದಾಯ್ತೆಂದ.
 
             ನನ್ನನ್ನು ಮರಣದಂಡನೆಗೆ ಗುರಿಪಡಿಸಿದ್ದೀಯಲ್ಲ ನಿನ್ನ ಸರದಿಯೂ ಒಮ್ಮೆ ಬರುತ್ತದೆ 
             ಎಂದು ಅಂತರಾರ್ಥ
 
      ರಾಜನಿಗೆ ತನ್ನ ತಪ್ಪಿನ ಅರಿವಾಯಿತು.ಮರಣದಂಡನೆಯನ್ನು ಹಿಂತೆಗೆದುಕೊಂಡ
 
      ನಮ್ಮ ಉತ್ತಮವಾದ ಮಾತುಗಳಿಂದ ಎಂಥವರನ್ನೂ ಕರಗಿಸಬಹುದಲ್ಲವೇ?
 
 
Rating
No votes yet

Comments