ಮೈಸೂರು ಅನಂತಸ್ವಾಮಿ, ಡಾಕ್ಟರ್ ಡ್ರೇ, ಸ್ಲೇಯರ್

ಮೈಸೂರು ಅನಂತಸ್ವಾಮಿ, ಡಾಕ್ಟರ್ ಡ್ರೇ, ಸ್ಲೇಯರ್

ಕೆಲವೊಮ್ಮೆ ಸಂಗೀತದಲ್ಲಿ ರಚನೆಯಾಗುವ ಹೊಸ ಕೃತಿಗಳು‌ ಹೊಸದೊಂದು ಸಂಗೀತದ ಶೈಲಿಯನ್ನೇ ಹುಟ್ಟು ಹಾಕುತ್ತವೆ ಅಥವ ಇರುವಂತಹ ವಿಧಾನಕ್ಕೇ ಹೊಸ ಅರ್ಥವನ್ನು ಕೊಡುತ್ತವೆ. ಅಂತಹ ರಚನಾಕಾರರು ಈ ಮೇಲಿನ ಮೂವರು.

ಅಷ್ಟನ್ನು ಬಿಟ್ಟರೆ ಮತ್ಯಾವ ಸ್ವಾಮ್ಯವೂ ಇಲ್ಲ ಇವರ ನಡುವೆ. ಅನಂತಸ್ವಾಮಿ ಕನ್ನಡ ಭಾವಗೀತೆಗಳ ಜಗತ್ತಿನಲ್ಲಿ ಸುಪ್ರಸಿದ್ಧರು, ಡಾಕ್ಟರ್ ಡ್ರೇ ಪಾಶ್ಚಿಮಾತ್ಯರಲ್ಲಿ ಅತ್ಯಂತ ಕುಪ್ರಸಿದ್ಧವಾದ gangsta rap ಎಂಬ ಹೊಸ ಶೈಲಿಯನ್ನು ಹುಟ್ಟುಹಾಕಿ ಬ್ಲಾಕ್ ಜನರಿಗೆ ಹೊಸ ದಾರಿ ಹಿಡಸಿದ ಗುರು. ಸ್ಲೇಯರ್ heavy metal ಸಂಗೀತಕ್ಕೆ ಹೊಸ ತಿರುವು ಕೊಟ್ಟು thrash metal ಎಂಬ ಹೊಸ ಶೈಲಿಗೆ ನಾಂದಿ ಇಟ್ಟ ವಾದ್ಯವೃಂದ.

ಆಶ್ಚರ್ಯದ ಸಂಗತಿಯೇನೆಂದರೆ ಇವರಲ್ಲಿ ಯಾರ ಹೆಸರು ಬಂದರೂ ಸಾಕು, ಅವರವರ ಭವ್ಯಕೃತಿಗಳು ತಟ್ಟನೆ ಮನಸ್ಸಿಗೆ ಬರುತ್ತವೆ. ಮೈಸೂರು ಅನಂತಸ್ವಾಮಿಯವರ ಮೈಸೂರು ಮಲ್ಲಿಗೆ ಸಂಕಲನ, ಡಾಕ್ಟರ್ ಡ್ರೇ ನ Chronic ಮತ್ತು ಸ್ಲೇಯರ್ ಬಾಂಡಿನ Reign in Blood ಇಂದಿಗೂ ಆಯಾ ಸಂಗೀತಶೈಲಿಗಳಲ್ಲಿ ಮೈಲಿಗಲ್ಲುಗಳು.

ಮೈಸೂರು ಮಲ್ಲಿಗೆಯ ಮಧುರಭಾವ, ಕ್ರಾನಿಕ್ ನ ಮನಸೆಳೆಯುವ ಲಯ, ಕೊಳಕು ಸಾಹಿತ್ಯ ;-) ಮತ್ತು Reign in Blood ನ ಕಿವಿಗಡಚಿಕ್ಕುವ ಕಠೋರತೆ ಅಪ್ರತಿಮವಾದರೂ‌ ಒಂದಕ್ಕೊಂದನ್ನು ಹೋಲಿಸುವುದೇನು, ಒಟ್ಟಿಗೆ ನೆನೆಸಿಕೊಳಳಲೂ ಕೂಡ ಅಸಾಧ್ಯವಿನ್ನುವಷ್ಟರ ಮಟ್ಟಿಗೆ ವ್ಯತ್ಯಾಸ... ಆದರೆ ಪ್ರತೀ ರಚನೆಗೂ ಒಂದೇ ಬಗೆಯ ಹೆಗ್ಗಳಿಕೆಯಿರುವುದು ಸೋಜಿಗದ ವಿಷಯವೇ ಸರಿ!

Rating
No votes yet

Comments