ಕನ್ನಡ ಪ್ರಭದಲ್ಲಿ ಎಸ್. ಎಲ್. ಭೈರಪ್ಪನವರ ಅಂಕಣ

ಕನ್ನಡ ಪ್ರಭದಲ್ಲಿ ಎಸ್. ಎಲ್. ಭೈರಪ್ಪನವರ ಅಂಕಣ

 

ಕನ್ನಡ ಪ್ರಭದಲ್ಲಿ ಹೊಸ ಅಂಕಣ

 
ನಾಳೆ ಮಂಗಳವಾರದಿಂದ ಭೈರಪ್ಪನವರ ಹೊಸ ಅಂಕಣ ಕನ್ನಡ ಪ್ರಭದಲ್ಲಿ ಮೂಡಿ ಬರಲಿದೆ. ಬಹುಶ: ಮತಾಂತರದಂತಹ ಹಲವು ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ ಬರೆದದ್ದು ಬಿಟ್ಟರೆ ಅವರು ಯಾವುದೇ ಅಂಕಣವನ್ನು regular ಆಗಿ ಬರೆದಿರುವುದು ಅನುಮಾನ. ಅವರು regular ಆಗಿ ಅಂಕಣವನ್ನು ಬರೆಯುತ್ತಿರುವುದು ನಿಜಕ್ಕೂ ಸಂತೋಷಕರ ಸಂಗತಿ. ಭೈರಪ್ಪನವರ ಬರಹಗಳಲ್ಲಿ ಎದ್ದು ಕಾಣುವ ಅಂಶಗಳೆಂದರೆ ಅವರ ಆಳವಾದ ಅಧ್ಯಯನ ಮತ್ತು ಭಾಷೆಯನ್ನು ದುಡಿಸಿಕೊಳ್ಳುವ ಕಲೆ. ಭೈರಪ್ಪನವರ ವಿಚಾರಧಾರೆಗಳನ್ನು ಒಪ್ಪಿ ಯಾ ಬಿಡಿ ಅವರು ನಿಸ್ಸಂದೇಹವಾಗಿ ಕನ್ನಡದ ಉತ್ತಮ ಲೇಖಕರಲ್ಲೊಬ್ಬರು.
 
ಅಂಕಣದ ವಿಷಯವೇನು?
 
ಇದು ಇನ್ನೂ ಬಹಿರಂಗವಾಗಿಲ್ಲ. ಅವರು ಧರ್ಮದ ವಿಷಯಗಳನ್ನು ಕೈಬಿಟ್ಟು ಸಾಹಿತ್ಯದ ವಿಷಯವನ್ನು ಕೈ ಗೆತ್ತಿಕೊಂಡರೆ ಎಲ್ಲಾ ಓದುಗರಿಗೆ ಹಬ್ಬ (ಇಲ್ಲದಿದ್ದರೂ ಕೆಲವು ಓದುಗರಿಗೆ ಹಬ್ಬ). ಅವರ ಇತ್ತೀಚಿನ ಹಲವು ಬರಹಗಳನ್ನೂ ಕೃತಿಗಳನ್ನೂ ನೋಡಿದರೆ ಆ ಸಂಭವ ಕಡಿಮೆ. ಹಾಗೆ ನೋಡಿದರೆ ಅವರು ಸಾಹಿತ್ಯದ ಬಗ್ಗೆ ಬರೆದದ್ದೇ ಕಡಿಮೆ. ಪ್ರಸ್ತುತ ಸಾಹಿತ್ಯಾಸಕ್ತರು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಭೈರಪ್ಪನವರಂತಹ ಸಶಕ್ತ ಕನ್ನಡ ಲೇಖಕರು ಸಾಹಿತ್ಯದ ಬಗ್ಗೆ ಬರೆದರೆ ಕನ್ನಡ ಸಾಹಿತ್ಯ ದೃಷ್ಟಿಕೋನದಿಂದ ಬಹಳ ಒಳ್ಳೆಯದು. ನನ್ನ ಅನುಮಾನಗಳೆಲ್ಲಾ ಹುಸಿಯಾಗಿ, ಭೈರಪ್ಪನವರು ಸಾಹಿತ್ಯದ ಬಗ್ಗೆ ತಮ್ಮ ಅಂಕಣದಲ್ಲಿ ಬರೆಯಲು ಶುರುಮಾಡಿದರೆ .... ಭೈರಪ್ಪನವರ ಅಧ್ಯಯನ + ಅವರ ಭಾಷಾ ಪ್ರೌಡಿಮೆ + ಸಾಹಿತ್ಯದಂತಹ ವಿಷಯ, ನನ್ನಂತಹ ಸಾಹಿತ್ಯ ವಿದ್ಯಾರ್ಥಿಗಳಿಗೆ ಸುಗ್ಗಿ. ನನ್ನದು ತಿರುಕನ ಕನಸಾ? ನಾಳೆ ಗೊತ್ತಾಗುತ್ತೆ.
 

 

-ಮಾಕೆಂ

 

Rating
No votes yet

Comments