ಡೊಂಕ ನಾಗಪ್ಪನ ಪುರಾಣ
ನಮ್ಮ ಟೀಮ್ ಎಲ್ಲಾ ನಿಂಗನ ಚಾ ಅಂಗಡಿ ಮುಂದೆ ಹೋಗೋ ಬರೋ ಹುಡಗೀರನ್ನ ರೇಗಿಸ್ತಾ ಕುಂತಿದ್ವಿ. ನಿಂಗನ ಹೆಂಡರು ನಿಮ್ಮ ಜಲ್ಮಕ್ಕೆ ಬೆಂಕಿ ಹಾಕ ಅಂತಿತ್ತು. ಅಟೊತ್ತಿಗೆ ಒಬ್ಬ ಡೊಂಕು ದೇಹದ ವ್ಯಕ್ತಿಯೊಬ್ಬ ಬಂದ. ಯಾವನೋ ಭಿಕ್ಸುಕ ಅಂತ ನಿಂಗ ಎಂಟಾಣೆ ಹಾಕ್ದ. ಏ ಥೂ, ಯಾವನಿಗಲಾ ಬೇಕು ನಿನ್ನ ಭಿಕ್ಸೆ, ತಗೋಳಲಾ ಅಂತ ನೂರು ರೂಪಾಯಿ ನೋಟು ಕೊಟ್ಟ, ನಾನು ಯಾರು ಗೊತ್ತೇನಲಾ ನಿಮ್ಮೂರು ಗೌಡಪ್ಪನ ದೊಡ್ಡಪ್ಪನ ಮಗ ಕಲಾ. ಅಂತಿದ್ದಾಗೆನೇ ನಿಂಗ, ತಪ್ಪಾಯ್ತು ಸಿವಾ ಗೌಡಪ್ಪಂಗೆ ಹೇಳಬೇಡಿ ಅಂದು ಕಾಲಿಗೆ ಬಿದ್ದಿದ್ದೇ ಬಿದ್ದಿದ್ದು, ಆಮ್ಯಾಕೆ ಬಾಯಿ ತೊಳಕೊಂಡ, ಯಾಕಲಾ ಅಂದ ಸುಬ್ಬ, ಮಗನ ಕಾಲ್ನಾಗೆ ಹುಳಕಡ್ಡಿ ಆಗೈತೆ ಕಲಾ ಅಂದ ನಿಂಗ. ಏ ಥೂ.
ಅಟೊತ್ತಿಗೆ ಗೌಡಪ್ಪ ಬಂದೋನೆ, ಲೇ ಇವನು ಯಾರು ಗೊತ್ತೇನ್ರಲಾ, ನನ್ನ ಅಣ್ಣ ಡೊಂಕ ನಾಗ ಅಂತ, ಅವರ ಹಳ್ಳಿ ಚಪ್ಪರದ ಅವರ್ಯಾಗೆ ಸಾನೇ ಫೇಮಸ್ ಕನ್ರಲಾ ಅಂದ. ಹೌದು ಇವರಿಗೆ ಡೊಂಕ ನಾಗಪ್ಪ ಅಂತ ಯಾಕೆ ಕರೀತಾರೆ ಅಂದ ದೊನ್ನೆ ಸೀನ. ನೋಡ್ರಲಾ ಇವನು ಸಣ್ಣ ಹುಡುಗ ಇದ್ದಾಗ ಲೈಟ್ ಕಂಬ, ಕೊಟ್ಟಿಗೆ ಕಂಬ ಎಲ್ಲೇ ಕಂಡ್ರು ಕಾಲು ಎತ್ತೋನು. ಒಂದು ಕಿತ ಅವರಪ್ಪ ಸಾನ ಮುಗಿಸ್ಕಂಡು ಬಂದ್ರೆ ಕಾಲನ್ನೇ ಕಂಬ ಅನ್ಕಂಡು ಮಾಡಿದ್ದ, ಆವಾಗ ಅವರಪ್ಪ ಕೋಲ್ನಾಗೆ ಸೊಂಟಕ್ಕೆ ನಾಕು ಬಿಟ್ಟ, ಅವಾಗಿಂದ ಇವನ ಸೊಂಟ 45ಡಿಗ್ರಿಗೆ ಬಗ್ಗೈತೆ, ಅದಕ್ಕೆ ಡೊಂಕ ನಾಗಪ್ಪ ಅಂತ ಕರೀತಾರೆ ಅಂದ ಗೌಡಪ್ಪ.
ನಾವೆಲ್ಲೋ ಮೈಕೆಲ್ ಜಾಕ್ಸನ್ ಡಾನ್ಸ್ ಮಾಡಕ್ಕೆ ಹೋಗಿ ಹಿಂಗಾಗೈತೆ ಅಂತ ಅಂದ್ಕಂಡಿದ್ವಿ ಅಂದ ಸೀತು. ಅನ್ಕಂತೀರಪ್ಪಾ ನೀವು. ಯಾಕೆ ಪ್ರಭುದೇವ ಬೇಡವಾ ಅಂದ ಗೌಡಪ್ಪ.
ಸರಿ ಎಲ್ಲರೂ ಡೊಂಕ ನಾಗಪ್ಪನ ಪರಿಚಯ ಮಾಡ್ಕಂಡ್ವಿ, ಮಗ ನಾಗಪ್ಪ ಏನೇ ಅಂದ್ರು ನಮ್ಮೂರ್ನಾಗೂ ಐತೆ ಅನ್ನೋನು, ಅಂಗೇ ನಾನು ಮಾಡಿದೀನಿ ಅನ್ನೋನು. ಸುಬ್ಬ ನಾನು ಮಾವಿನ ಹಣ್ಣು ಮಾರಿದೀನಿ ಅಂದ,. ಅದಕ್ಕೆ ನಾನು ಮಾರಿದೀನಿ ಅಂದ ನಾಗಪ್ಪ, ನಮ್ಮೂರು ಗೌಡಪ್ಪ ಇಬ್ಬರು ಹೆಂಡರನ್ನು ಮದುವೆ ಆಗವ್ನೆ ಅಂದ ಸುಬ್ಬ, ನಾನು ಐದು ಜನ ಮದುವೆ ಆಗಿದೀನಿ ಕಲಾ ಅಂದ ಡೊಂಕ. ಲೇ ಇವನು ಪಂಚ ಪಾಂಡವಿಯರು ಅಂದ ಕಿಸ್ನ, ನೋಡ್ರಲಾ ಈಗ ಮಾಡ್ತೀನಿ ಅಂದು, ನಾನು ಬಸ್ಟಾಂಡಲ್ಲಿ ಮೆಟ್ಟು ಹೊಲಿದಿದೀನಿ ಅಂದ ಸುಬ್ಬ, ಅವಾಗ ನಾನು ಹೊಲಿದಿಲ್ಲ ಅಂದ ಡೊಂಕ ನಾಗ, ಯಾಕೆ ಹೊಲಿದಿಲ್ಲ. ನಾನು ಮೆಟ್ಟೇ ಹಾಕಕ್ಕಿಲ್ಲ. ಥೂ ನಿಮ್ಮ ಜಲ್ಮಕ್ಕೆ ಬೆಂಕಿ ಹಾಕ ಅಂದ ಸುಬ್ಬ .
ಸರಿ ನಾನು ನಿಮ್ಮೂರು ಗೌಡಪ್ಪನಗಿಂತ ಸಾನೇ ಸ್ಟ್ರಾಂಗ್ ಅಂದ ಡೊಂಕ ನಾಗ, ಹೆಂಗೆ, ಅವನು ವರ್ಸಕ್ಕೆ ಒಂದು ಕಿತ ಸಾನ ಮಾಡಿದ್ರೆ, ನಾನು 5ವರ್ಸಕ್ಕೆ ಒಂದು ಕಿತ ಅಂದ ಡೊಂಕ, ಅಯ್ಯೋ ನಿನ್ನ ಮಕ್ಕೆ ಸಗಣಿ ಹುಯ್ಯಾ, ಅವಾಗಿನಿಂದ ಎಲ್ಲಪ್ಪಾ ಹಂದಿ ಸತ್ತ ವಾಸನೆ ಬತ್ತಾ ಇದೆ ಅಂತ ನೋಡ್ತಿದ್ದೆ, ಇಲ್ಲೇ ಅವ್ನೆ ನೋಡಲಾ ಬಡ್ಡೆ ಐದ ಅಂತ ಸಾನೇ ಉಗಿದ ಸುಬ್ಬ. ಸರಿ ಬೆಳಗ್ಗೆ ಗೌಡಪ್ಪನ ಮನೆ ತಾವ ಹೋದ್ರೆ, ಡೊಂಕ ನಾಗನ್ನ ಹೊರಕ್ಕೆ ಮಲಗಿಸಿದ್ರು, ಯಾಕ್ರೀ ಗೌಡ್ರೆ, ಲೇ ಈ ಬಡ್ಡೆ ಐದ ಮಂಚದ ಮ್ಯಾಕೆ ಮಕ್ಕಂಡ್ರೆ ಮುಖ ಒಂದು ಕಡೆ, ಕಾಲು ಒಂದು ಕಡೆ ಇರ್ತದೆ, ಕೆಳಗೆ ಮಕ್ಕಂಡು ಇರೋರು ಇವನ ಕೆಟ್ಟ ಕಾಲ ವಾಸನೆ ಕುಡಿ ಬೇಕು ಅದಕ್ಕೆ ಹೊರಕ್ಕೆ ಹಾಕಿದೀನಿ ಕಲಾ ಅಂದ,
ಮಗಾ ಡೊಂಕ ನಾಗಪ್ಪ ಓಡಾಡೋ ಬೇಕಾದ್ರೆ ಒಂದು ರವಂಡ್ ರುಬ್ಬುಕಲ್ಲು ತಿರುವಿದಂಗೆ ಆಗೋದು. ಅವನ ಊರ್ನಾಗೆ ಅನಸ್ತೀಸಿಯಾ ಖಾಲಿ ಆಗೈತೆ ಅಂದ್ರೆ ಇವನ ಒಳ ಉಡುಪು ಹಾಕಿದ್ರೆ ಸಾಕು ಕಲಾ ಮಗಾ ಪೇಸೇಂಟ್ ಒಂದು ವಾರ ಆದ್ ಮ್ಯಾಕೆ ಏಳ್ತಾನೆ ಕಲಾ. ನಂದು ಆದ್ರೆ ಆಪರೇಸನ್ ಆದ್ ಮ್ಯಾಕೆ ಎಚ್ಚರ ಆಯ್ತದೆ. ಇವನದೂ ಇನ್ನೂ ಸ್ಟ್ರಾಂಗ್ ಕಲಾ ಅಂದ ಗೌಡಪ್ಪ, ನಿಮ್ಮನ್ನ ಡಿಸ್ಕವರಿ ಚಾನಲ್ ನವರು ಇನ್ನೂ ನೋಡಿಲ್ಲಿಲಾ ಅದು ಹೇಳಿ ಅಂದ ಸುಬ್ಬ. ಪೆಸೆಲ್ ಪ್ರಾಣಿ ಅಂತ ಎತ್ತಾಕಂಡು ಹೋಗ್ತಾ ಇದ್ರು.
ಸರಿ ನಮ್ಮೂರ್ನಾಗೆ ಮಾರಮ್ಮನ ಜಾತ್ರೆ ಇತ್ತು, ಸರಿ ಡೊಂಕ ನಾಗಪ್ಪನ್ನೂ ಕರ್ಕಂಡು ಹೋದ್ವಿ. ನಡೆಯೋಬೇಕಾದ್ರೆ, ಮಗಂದು ಬಾಡಿ ಪೂರ್ವಕ್ಕೆ ಇದ್ದದ್ದು ಏಕ್ ಧಮ್ ಪಶ್ಚಿಮಕ್ಕೆ ಹೋಗೋದು. ಯಾರಾದರೂ ಹೆಣ್ಣು ಐಕ್ಳು ಹೋಗ್ತಾ ಇದ್ರೆ ಅಂಗೇ ಕಿಸ್ ಹೊಡೆಯೋನು. ಕಾಲು ಇಲ್ಲಿ ಇದ್ರೆ ದೇಹ ಮತ್ತೆ ಎಲ್ಲೋ ಇರೋದು. ಸರಿ ಊಟಕ್ಕೆ ಅಂತ ಕುಂತ್ವಿ. ಮಗ ಊಟಕ್ಕೆ ನಮ್ ಜೊತೆ ಕುಂತಿದ್ರೆ ದೇಹ ಹೆಣ್ಣು ಐಕ್ಲೂ ಸಾಲಲ್ಲಿ ಇತ್ತು. ಕುಸ್ತಿಗೆ ಅಂತ ಬಿಟ್ರೆ, ಇವನ ಕುತ್ತಿಗೆ ಹಿಡಿಯೋ ಹೊತ್ತಿಗೆ ಎದುರುಗಡೆ ಇದ್ದೋನು ಮಕ್ಕಂಡಿದ್ದ, ಲೇ ಇವನಿಗೆ ಏನಾದ್ರೂ ಮಾಡಬೇಕು ಕಲಾ ಅಂದ ಸೀನ. ಸರಿ ಹೆಂಗಿದ್ರೂ ಮಾರಿ ಜಾತ್ರೆ ಇತ್ತು, ನಿದ್ದೆ ಬರೋ ವಿಸೇಷ ಔಸಧಿ ಅಂತ ನಾಗನ ಬೆವರು ಒಂದು ಬಾಟಲ್ನಾಗೆ ತುಂಬಿಸಿ ಮಾರಿದ್ವಿ, ಮಗಂದು ಮೂಗು ಹತ್ತಿರ ತಗೊಂಡು ಹೋಗ್ತಿದ್ದಂಗೆನೇ ಜನ ಅಂಗೇ ಎಣ್ಣೆ ಹೊಡೆದಂಗೆ ನೆಲಕ್ಕೆ ಬೀಳೋರು. ಕಂಕಳು ವಾಸನೆ ತೋರಿಸಿದರೆ ಸ್ಪಾಟಲ್ಲೇ ಢಮಾರ್, ಇನ್ನು ಪಂಚೆ ಕೊಡವಿದ್ರೆ ಒಂದು ಲೈನಿಗೆ ಲೈನೇ ಬಿದ್ದು ಹೋಗೋದು, ಇದೇ ಚಾನ್ಸ್ ಅಂತ ಪಿಕ್ ಪಾಕೆಟ್ ಮಾಡೋರು ಜನ, ಏ ಥೂ.
ಗೌಡಪ್ಪನೂ ನಿದ್ದೆ ಬರಕ್ಕಿಲ್ಲ ಅಂತ ಒಂದು ಬಾಟಲ್ ಒಯ್ದಿದ್ದ, ವ್ಯಾ, ಲೇ ಏನಲಾ ಇದು ಅನ್ನೋನು ಕಿಸ್ನ, ಡೊಂಕನ ಎಫೆಕ್ಟ್ ಕಲಾ ಅನ್ನೋನು ಸುಬ್ಬ. ಸಾನೇ ಡಿಮ್ಯಾಂಡ್ ಸುರುವಾತು. ಬೆವರು ಇಲ್ಲ ಅಂದ್ರೆ, ನಾಗಪ್ಪಂಗೆ ವ್ಯಾಯಾಮ ಮಾಡ್ಸಿ ಬೆವರು ತೆಗೀತಾ ಇದ್ವಿ. ಕಬ್ಬಿನ ಹಾಲು ತೆಗೆದಂಗೆ. ಸೈಯನೈಡ್ ಇದ್ದಂಗೆ. ಲೇ ಕೈ ಕಾಲು ಹಿಡಿದೈತೆ ಅಂದ್ರು ಬಿಡ್ತಾ ಇರ್ಲಿಲ್ಲ. ಉಲ್ಟಾ ಪಲ್ಟಾ ವ್ಯಾಯಾಮ ಮಾಡ್ಸಿ ಬೆವರು ತೆಗೀತಾ ಇದ್ವಿ. ಸಾನೇ ಕಲೆಕ್ಸನ್. ಎಲ್ಲಾ ಟಿವಿಯೋರು ಇಂಟರ್ ವ್ಯೂ ಮಾಡಿದ್ದೇ ಮಾಡಿದ್ದು. ಜಾತ್ರೆ ಮರು ದಿನ ನೋಡ್ತೀವಿ ನಾಗ ಕಣ್ಮರೆ, ಎಲ್ಲಾ ಕಡೆ ಹುಡುಕಿದ್ರೂ ಇಲ್ಲ. ಕಡೆಗೆ ನೋಡಿದ್ರೆ, ಜಿಯಾಗ್ರಫಿ ಚಾನಲ್ ನವರು ವಿಸೇಸ ವ್ಯಕ್ತಿ ಅಂತ ಎತ್ತಾಂಕಂಡು ಹೋಗಿದ್ರು. ಹೋಗೋಬೇಕಾದ್ರೆ ಗರುಡ ಇದ್ದಂಗೆ ಇದ್ದ ನಾಗ, ಬರೋಬೇಕಾದ್ರೆ ಕಸಾಯಿ ಖಾನೆ ಹಸ ಆದಂಗೆ ಆಗಿದ್ದ. ಯಾಕಲಾ,ಹಾವಿಂದು ಇಸ ತೆಗೆದಂತೆ ಲೇ ಬಾಡಿಯಲ್ಲಿ ಇರೋ ನೀರೇಲ್ಲಾ ತೆಗೆದು ಬಿಟ್ಟಾವ್ರೆ ಅನ್ನೋನು.
Comments
ಉ: ಡೊಂಕ ನಾಗಪ್ಪನ ಪುರಾಣ
In reply to ಉ: ಡೊಂಕ ನಾಗಪ್ಪನ ಪುರಾಣ by kamath_kumble
ಉ: ಡೊಂಕ ನಾಗಪ್ಪನ ಪುರಾಣ
ಉ: ಡೊಂಕ ನಾಗಪ್ಪನ ಪುರಾಣ
ಉ: ಡೊಂಕ ನಾಗಪ್ಪನ ಪುರಾಣ
ಉ: ಡೊಂಕ ನಾಗಪ್ಪನ ಪುರಾಣ