ವಾರೆವ್ಹಾ ಕ್ರಿಸ್ಮಸ್ ಬಂತು

ವಾರೆವ್ಹಾ ಕ್ರಿಸ್ಮಸ್ ಬಂತು

ಮೈ ಜುಂ ಎನ್ನಿಸುವ ಕ್ರಿಸ್ಮಸ್ ಮತ್ತೆ ಬರುತ್ತಿದೆ. ಇದಕ್ಕಾಗಿಯೇ ವಿಶ್ವದಲ್ಲೆಡೆ ಕ್ರಿಸ್ಮಸ್ ಗಾಗಿನ ತಯಾರಿ ಭರ್ಜರಿ ನಡೆಯುತ್ತಿದೆ. ಗೋದಲಿ ನಿರ್ಮಾಣ, ಕ್ರಿಸ್ಮಸ್ ಟ್ರೀಗೆ ಬೇಕಾಗುವ ಅಲಂಕಾರಿಕ ವಸ್ತುಗಳ ಖರೀದಿ, ಕ್ರಿಸ್ಮಸ್ ಸಂದೇಶಗಳುಳ್ಳ ಸಂದೇಶಗಳ ರವಾನೆ, ಕ್ರಿಸ್ಮಸ್ ಸ್ನೇಹಿತರಿಗಾಗಿ ಉಡುಗೊರೆಯ ಖರೀದಿ, ನಕ್ಷತ್ರಗಳ ತಯಾರಿ ಗಡದ್ದಾಗಿಯೇ ನಡೆಯುತ್ತಿದೆ.

ಮಂಗಳೂರಿನಲ್ಲಂತೂ ಕ್ರಿಸ್ಮಸ್ ಗಾಗಿ ಕುಸ್ವಾರ್ ತಯಾರಿಸುತ್ತಾರೆ. ಕ್ರಿಸ್ಮಸ್ ತಿಂಡಿಯನ್ನು ಇಲ್ಲಿನ ಜನ ಪ್ರೀತಿಯಿಂದ ಕುಸ್ವಾರ್ ಎನ್ನುತ್ತಾರೆ. ಕ್ರಿಸ್ಮಸ್ ಕೇಕ್ ಕುಸ್ವಾರ್ ನ ಯಜಮಾನ. ಕುಸ್ವಾರ್ ನಲ್ಲಿ ಕೇಕ್ ಜೊತೆಗೆ ಕಿಡಿಯೊ, ಗುಳಿಯೊ, ಲಾಡು, ಚಕ್ಕುಲಿ, ಚಿಪ್ಸ್, ನಿವ್ರ್ಯೊ, ಚಕ್ಕುಲಿ... ಮುಂತಾದ ಇನ್ನೂ ಕೆಲವು ತಿಂಡಿಗಳಿರುತ್ತವೆ.

ಮಧ್ಯ ರಾತ್ರಿ ಕ್ರಿಸ್ಮಸ್ ಬಲಿಪೂಜೆಯ ಸಂಭ್ರದಲ್ಲಿ ಭಾಗವಾಹಿಸುವಾಗ ಆಗುವ ಅನುಭವವೇ ವಂಡರ್ ಫುಲ್. ಅಂದಹಾಗೆ ಕ್ರಿಸ್ಮಸ್ ಅಜ್ಜನೆಂದೇ ಕರೆಯಲ್ಪಡುವ ಸಾಂತಾ ಕ್ಲಾಸ್ ಜೊತೆಗೆ ಕ್ರಿಸ್ಮಸ್ ಕ್ಯಾರಲ್ಸ್ ಹಾಡಿ ಸಂಭ್ರಮಿಸಿದರೆ ವ್ಹಾರೆವ್ಹಾ....

ಕ್ರಿಸ್ಮಸ್ ಮತ್ತೆ ಬಂದಿದೆ. ಜಗಕ್ಕೆಲ್ಲಾ ಸಂತೋಷ ತಂದು. ಸಂಭ್ರಮಿಸೋಣ

Rating
No votes yet

Comments