ಪರಿಸರ ಮಿತ್ರ

ಪರಿಸರ ಮಿತ್ರ

ಕವನ

ಸೈಕಲ್ಲು ಬಲು ಒಳ್ಳೇದಣ್ಣ
ಹೆಚ್ಚು ಖರ್ಚಿಲ್ಲದೆ ಸಂಚಾರಕ್ಕೆ ಒದಗುವುದಣ್ಣ

ಬಡವರಿಗಾಧಾರವಣ್ಣ ಈ ಸೈಕಲ್ಲು
ಮಕ್ಕಳಿಗೆ ಪ್ರಾಣವಣ್ಣ
ಹೈಸ್ಕೂಲ್ ಮಕ್ಕಳ ಮಿತ್ರ
ಕಾಲೇಜ್ ಹುಡುಗರ ಶತ್ರು
ಲೈಸೆನ್ಸ್ ಇಲ್ಲದೆ ಬ್ಯಾಲೆನ್ಸಲ್ಲೋಡಿಸುವಾ
ಸೈಕಲ್ಲು ಬಲು ಒಳ್ಳೇದಣ್ಣ

ಆರೋಗ್ಯಕ್ಕೊಳ್ಳೇದು ತುಳಿಯೋದು ಸೈಕಲ್ಲು
ಡಯಟ್ ಮಾಡದೆ ತೂಕ ಇಳ್ಸಬಹುದು
ವಾಯುಮಾಲಿನ್ಯ ಮಾಡಲ್ಲ ಸೈಕಲ್ಲು
ಹೆಚ್ಚು ಜಾಗವೂ ಬೇಕೆಂಬುದಿಲ್ಲ
ಪೆಟ್ರೋಲು ಬಯಸದೆ ಗಾಳೀನೆ ಸಾಕೆನುವಾ
ಸೈಕಲ್ಲು ಬಲು ಒಳ್ಳೇದಣ್ಣ

(ಲಂಗೋಟಿ ಬಲು ಒಳ್ಳೇದಣ್ಣ ಸ್ಪೂರ್ತಿ)

Comments