ಮನೆ-ಮನ

ಮನೆ-ಮನ

ಕವನ

ಹುಡುಗಿಗೆ ಮನೆ ತೋರಿಸಿ
ಹುಡುಗನೆಂದ
ಬರಿ ಕಟ್ಟಡವಾಗಿಹುದು
ಮರಳು ಇಟ್ಟಿಗೆ ಸಿಮೆಂಟಿನಿಂದ
ಮನೆಯನ್ನಾಗಿಸುವುದು
ನಿನ್ನ ಜವಾಬ್ದಾರಿ ಎಂದ

ಹುಡುಗನಿಗೆ ಮನ ತೋರಿಸಿ
ಹೇಳಿದಳು ಹುಡುಗಿ
ಇಹುದೀಗ ಮನ
ಚಂದದ ಮನೆಯಾಗಿ
ಮಾಡದಿರು ಮುಂದೆ ನೀ ಅದ
ಬರಿ ಕಟ್ಟಡವಾಗಿ.

Comments