ಶಿವಮೊಗ್ಗ
ಕವನ
ಮಲೆನಾಡ ನಗರಿ ಶಿವಮೊಗ್ಗ
ತುಂಬಿಹುದು ಸು೦ದರ ನಿಸರ್ಗ
ಇಲ್ಲಿಹುದು ತು೦ಗೆಯ ಸಿರಿ
ಹೊಳಪನು ಬೀರುವ ಝರಿ
ಜಗದ್ವಿಖ್ಯಾತ ಜಲಪಾತ ಜೋಗ
ಮೂಡಿಸುವುದು ಜನರಲ್ಲಿ ಸೋಜಿಗ
ಶರವತಿಯ ವಿದ್ಯುತ್ ಸ್ಥಾವರ
ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ
ಇಲ್ಲಿಯ ಮಂಡಗದ್ದೆ ಧಾಮ
ಇದಾಗಿದೆ ಹಕ್ಕಿಗಳಿಗೆ ಸುಖಧಾಮ
ತಾವರೆಕೊಪ್ಪದ ಸಿಂಹಧಾಮ
ವಿವಿಧ ಪ್ರಾಣಿಗಳ ಸಮಾಗಮ
ಸು೦ದರ ಆಗು೦ಬೆಯ ನೋಟ
ನೋಡುಗರ ಮನದಲ್ಲಿ ರಸದೂಟ
ಸೂರ್ಯೋದಯ ಸೂರ್ಯಾಸ್ತಗಳ ಸೊಬಗು
ನೀಗುವುದು ಮನಸಿನ ಕೊರಗು
Comments
ಉ: ಶಿವಮೊಗ್ಗ
ಉ: ಶಿವಮೊಗ್ಗ
In reply to ಉ: ಶಿವಮೊಗ್ಗ by shashi kiran
ಉ: ಶಿವಮೊಗ್ಗ