ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
ಅಮೇರಿಕಾದ ಸಾಹಿತ್ಯ ಪ್ರಪಂಚದಲ್ಲಿ ಹೊಸ ಮೈಲಿಗಲ್ಲಾಗಿದ್ದ ಎಕೈಕ ಕವಯಿತ್ರಿ ಎಮಿಲಿ ಡಿಕಿನ್ಸನ್ ರವರ ಬಗ್ಗೆ ಸಂಪದದಲ್ಲಿ ಬರೆಯಲು ಹೆಮ್ಮೆಯೆನಿಸುತ್ತದೆ..ಇತಿಹಾಸದ ಪುಟಗಳಲ್ಲಿ ಡಿಸೆಂಬರ್ ೧೦ ೧೮೩೦ ಒಂದು ಮಹತ್ವದ ದಿನ.ಒಬ್ಬ ನ್ಯಾಯವಾದಿಯ ಮಗಳಾಗಿ ಇಡೀ ಜಗತ್ತಿನ ನ್ಯಾಯಾಧೀಶ ನಾದ ಭಗವಂತನ ಅಸ್ತಿತ್ವವನ್ನು ಅವನ ಸೃಷ್ಟಿಯಲ್ಲಿ ಕಾಣುತ್ತ ತನಗೆ ಸರಿಕಾಣದಾಗ ಅವನನ್ನೇ ಕಟಕಟೆಯಲ್ಲಿ ನಿಲಿಸುವ ಸಾಹಸ ಮಾಡಿದ ಮಹಾನ್ ಲೇಖಕಿಯ ಜನ್ಮದಿನ.
ಪ್ರಾಸಕ್ಕೆ ಹೆಚ್ಚು ಒತ್ತನ್ನು ಕೊಡದೇ ವಸ್ತುನಿಷ್ಠ ಅಭಿಪ್ರಾಯಗಳ ಶೃಂಖಲೆಯನ್ನು ಅರ್ಥಪೂರ್ಣವಾಗಿ ತನ್ನ ವೈಚಾರಿಕ ಹಾಗೂ ವಿಶಿಷ್ಟ ಕಾವ್ಯ ಶೈಲಿಯಿಂದ ಬಿಂಬಿಸುತ್ತ ಜನಮನದಲ್ಲಿ ಇವತ್ತಿಗೂ ಹೆಸರಾಗಿದ್ದಾರೆ ಎಮಿಲಿ ಡಿಕಿನ್ಸನ್.
ಎಮಿಲಿಯ ಸೃಜನಶೀಲ ಶೈಲಿ ಆಗಿನ ಸಾಂಪ್ರದಾಯಿಕ ಕಟ್ಟುನಿಟ್ಟಿನ ಸಾಹಿತ್ಯ ಪ್ರಪಂಚದಲ್ಲಿ ಗೊಂದಲವನ್ನೇ ಸೃಷ್ಟಿಸಿತು.ಕಾವ್ಯಸಾಹಿತ್ಯದ ನಿಯಮಗಳಿಗೆ ಬದ್ಧಳಾಗದೇ ತನ್ನದೇ ಆದ ಶೈಲಿಯಲ್ಲಿ ಅರ್ಥಕ್ಕೆ ಒತ್ತನ್ನು ಕೊಟ್ಟು ಹೃದಯಸ್ಪರ್ಶಿಯಾಗಿ ತನ್ನ ಮನದ ಭಾವನೆಗಳನ್ನು ಮೂಡಿಸಿದ ಇವಳಿಗೆ ತನ್ನ ಜೀವಿತಾವಧಿಯಲ್ಲಿ ಕವಯಿತ್ರಿಯಾಗಿ ಸಲ್ಲಬೇಕಾದ ಗೌರವ ಹಾಗೂ ಪ್ರಶಂಸೆ ಸಿಗಲೇ ಇಲ್ಲವೆಂಬುದು ವಿಧಿಯ ವಿಪರ್ಯಾಸ.ವಾಸ್ತವ ವಾಗಿ ಹೇಳಬೇಕೆಂದರೆ ಅವಳ ಉದಾತ್ತವಾದ, ಅರ್ಥಗರ್ಭಿತವಾದ, ಸುಂದರವಾದ, ಹಾರ್ದಿಕವಾದ ಮತ್ತು ವಿಚಾರಾತ್ಮಕವಾದ ಬರವಣಿಗೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಸ್ಪಂದಿಸುವ ಹೃದಯವಂತಿಕೆ ಮತ್ತು ಉದಾರತೆ ಸಾಂಪ್ರದಾಯಿಕ ಕಟ್ಟುಪಾಡುಗಳಿಗೆ ಒಳಗಾಗಿದ್ದ ಆಗಿನ ಸಮಾಜದಲ್ಲಿರಲಿಲ್ಲವೆಂಬುದು ನಿಜಕ್ಕೂ ದುಃಖದ ವಿಷಯ.
ವೈಜ್ಞಾನಿಕ,ವಿಮರ್ಶಾತ್ಮಕ,ಅತ್ಯಾಧುನಿಕ ಮನೋಭಾವನೆಯನ್ನು ಹೊಂದಿದ್ದ ಎಮಿಲಿಗೆ ಆಗಿನ ಸಮಾಜದಲ್ಲಿ ನಿಸ್ಸಂಕೋಚವಾಗಿ ಬೆರೆಯುವದು ಅಸಾಧ್ಯ ವಾಗಿರಬೇಕು.ಇವಳ ಕವಲೊಡೆದ ವಿಚಾರಧಾರೆಯನ್ನು ಜನ ಸ್ವೀಕರಿಸದಿದ್ದಾಗ ಸಹಜವಾಗಿಯೇ ಎಮಿಲಿಗೆ ಜನರೊಡನೆ ಬೆರೆಯುವ ಆಸಕ್ತಿ ಕುಂದಿರಬೇಕು.ಅದಕ್ಕೋ ಎನೋ ಸಾಮಾಜಿಕರೊದನೆ ವಿಶೇಷ ತಾಳಮೇಳಗಳಿಲ್ಲದೆ ತನ್ನೊಳಗಿನ ಅಂತಃಸತ್ವವನ್ನು ಹಾಳೆಗಳಲ್ಲಿ ಮೂಡಿಸುತ್ತ,ಪ್ರಪಂಚದ ಆಕರ್ಷಣೆಗೆ ಮನ ಸೋಲದೇ ಆಡಂಬರಕ್ಕೆ ಬೆಲೆಕೊಡದೆ ಏಕಾಂತನಗರಿಯಲ್ಲಿ ಚಿಂತನ ಮಂಥನಗಳ ನಡುವೆ ತನ್ನನ್ನು ತೊಡಗಿಸಿಕೊಂಡು ಅಭಿವ್ಯಕ್ತಿಯ ಅಭೂತಪೂರ್ವ ಇಚ್ಛಾಶಕ್ತಿಯಾಗಿ ರಸಋಷಿಯೋರ್ವಳು ಉಧ್ಭವಿಸಿದಳೆಂದರೆ ತಪ್ಪಾಗಲಾರದು.
ಇವಳ ಕಾವ್ಯಶೈಲಿಯನ್ನು ಟೀಕಿಸಿದವರೆಷ್ಟೋ ಜನ.ಆದರೆ ಕಾಲದ ವಿಡಂಬನೆಯನ್ನು ನೋಡಿ.ಇವಳನ್ನು ಟೀಕಿಸಿದ ಎಷ್ಟೋ ಟೀಕಾಕಾರರ ಹೆಸರು ಇವತ್ತು ಆಂಗ್ಲಸಾಹಿತ್ಯ ಪ್ರಪಂಚದಲ್ಲಿ ಉಳಿದಿದ್ದರೆ ಅದು ಇಂತಹ ಮಹಾನ್ ಲೇಖಕಿಯನ್ನು ಟೀಕಿಸಿದ್ದಕ್ಕಾಗಿ ಮಾತ್ರ ಎಂಬ ಕಟು ಸತ್ಯ ದೃಗ್ಗೋಚರವಾದಾಗ ಅಯ್ಯೊ ಪಾಪ ಎಂದೆನಿಸುವುದು ಮತ್ತು ಇಂತಹ ಅಸಾಮಾನ್ಯ ಲೇಖಕಿಯನ್ನು ಗುರುತಿಸದಂತಹ ಅವರ ಸೃಜನಶೀಲವಲ್ಲದ ಅಭಿರುಚಿ ನಿಜಕ್ಕೂ ಅನುಕಂಪನೀಯವಾಗಿದೆ.
ಎಮ್ಹರೆಸ್ಟ್ ಎಂಬ ಸಣ್ಣ ಗ್ರಾಮದಲ್ಲಿ ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದ ಎಮಿಲಿಗೆ ಅವಳ ಕುಟುಂಬದ ಸದಸ್ಯರಿಂದ ಯಾವುದೇರೀತಿಯ ಪ್ರೋತ್ಸಾಹ ಸಾಹಿತ್ಯ ಕ್ಷೇತ್ರದಲ್ಲಿ ಸಿಗಲಿಲ್ಲ.ಎಮಿಲಿಯ ಅಂತರ್ಮುಖ ಸ್ವಭಾವವೂ ಇದಕ್ಕೆ ಕಾರಣವಾಗಿತ್ತು. ಶ್ರೇಷ್ಠ ನ್ಯಾಯವಾದಿಯಾಗಿದ್ದ ಇವಳ ತಂದೆ ಎಡ್ವರ್ಡ್ ಡಿಕಿನ್ಸನ್ ಕಟ್ಟುನಿಟ್ಟಿನ ಹಾಗೂ ಶಿಸ್ತಿನ ಜೀವನವನ್ನು ರೂಢಿಸಿ ಕೊಂಡಿದ್ದನು.ಎಮಿಲಿಗೆ ಬೇಕಾದಂತಹ ಅನೇಕ ಪುಸ್ತಕಗಳನ್ನು ತಂದು ಕೊಟ್ಟರೂ ಸಹ ಅದನ್ನು ಅವಳು ಓದದೇ ಇದ್ದರೆ ಒಳ್ಳೆಯದು ಎಂಬ ಮನೋಭಾವನೆ ಅವರಿಗಿತ್ತು........" ತಂದೆ ಮಕ್ಕಳಲ್ಲಿರುವ ಮಾನಸಿಕ ಅಂತರವನ್ನು ಇದು ಸೂಚಿಸುತ್ತದೆ.ಆದರೆ ಇಬ್ಬರೂ ಒಬ್ಬರನ್ನೊಬ್ಬರು ಅಪಾರವಾಗಿ ಪ್ರೀತಿಸುತ್ತಿದ್ದರೆಂಬುದು ವಾಸ್ತವಿಕತೆ.ಎಮಿಲಿಯ ಆಣ್ಣ ಆಸ್ಟಿನ್ ಡಿಕಿನ್ಸನ್ ಹಾಗೂ ತಂಗಿ ಲ್ಯಾವಿನಿಯಾ ಡಿಕಿನ್ಸನ್ ಮತ್ತು ಅತ್ತಿಗೆ ಸೂಸನ್ ಡಿಕಿನ್ಸನ್ ರೊಂದಿಗೆ ಅಪಾರವಾದ ಆತ್ಮೀಯತೆ ಇದ್ದರೂ ಸಹ ಎಮಿಲಿಯಲ್ಲಿ ಸುಪ್ತವಾಗಿದ್ದ ಕವಿತಾ ಶಕ್ತಿಯನ್ನು ಗುರುತಿಸಲು ಇವರೂ ಅಸಮಥ೯ರಾಗಿದ್ದರು.ಎಮಿಲಿಯ ಮರಣಾ ನಂತರ ಅವಳ ಕೋಣೆಯ ಕಪಾಟನ್ನು ತೆರೆದಾಗ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಕವನಗಳ ಸ್ವಲಿಖಿತ ಕರಡು ಪ್ರತಿಗಳನ್ನು ಕಂಡು ನಿಬ್ಬೆರಗಾದಳು ಅವಳ ತಂಗಿ ಲ್ಯಾವೀನಿಯಾ..ಮುಂದೆ ಅವುಗಳನ್ನು ಸಮಾಜಕ್ಕೆ ದೇಣಿಗೆಯಾಗಿ ಕೊಟ್ಟ ಶ್ರೇಯ ಇವಳಿಗೇ ಸಲ್ಲಬೇಕಾದದ್ದು.
ಸ್ವತಂತ್ರ ಚಿಂತನೆ,ಇದ್ದುದನ್ನು ಇದ್ದ ಹಾಗೇ ಘಂಟಾಘೋಷ ವಾಗಿ ಹೇಳುವ ಮನೋಭಾವನೆ ಹಾಗೂ ಕವನಗಳಿಗೆ ಹೊಸ ಆಯಾಮ ಕೊಡುವ ನಿಟ್ಟಿನಲ್ಲಿ ಎಮಿಲಿ ಆಗಿನ ಸಮಾಜಕ್ಕೆ ರುಚಿಸಲಾಗದ ಕಗ್ಗಂಟಾಗಿದ್ದಳು.
ಸಾಹಿತ್ಯದ ನಿಯಮಗಳಿಗೆ ಬೆಲೆ ಕೊಡದ ಕಾರಣ ಇವಳ ಕೃತಿಗಳನ್ನು ಕವನಗಳೇ ಅಲ್ಲ ಎಂದು ಪರಿಗಣಿಸಿದಂತಹ ವಿಪರ್ಯಾಸಗಳನ್ನು ಕಂಡಾಗ ಬಹಳ ದುಃಖವೆನಿಸುತ್ತದೆ.ಎಮಿಲಿಯ ಜೀವನ ಕಾಲದಲ್ಲಿ ಅವಳ ಆರೇಳು ಕವಿತೆಗಳು ಮಾತ್ರ ಮುದ್ರಣ ಗೊಂಡಿದ್ದವು.
ಅವಳ ಮರಣಾನಂತರ ಅವಳ ಬಗ್ಗೆ ಹಾಗೂ ಆವಳ ಕವನಗಳ ಬಗ್ಗೆ ಸಾವಿರಾರು ಪುಸ್ತಕಗಳು ಬರೆಯಲ್ಪಟ್ಟಿವೆ. ಆಂಗ್ಲ ಸಾಹಿತ್ಯ ಪ್ರಪಂಚದಲ್ಲಿ ಅದರಲ್ಲೂ ವಿಶೇಷವಾಗಿ ಅಮೆರಿಕಾದ ಸಾಹಿತ್ಯ ಪ್ರಪಂಚದ ಧ್ರುವತಾರೆಯಾಗಿ ಮೆರೆಯುತ್ತಾ ಇಡೀ ವಿಶ್ವದಲ್ಲೇ ಪ್ರಸಿದ್ಧಿಯನ್ನು ಪಡೆದು ಜನಮನದಲ್ಲಿ ಇಂದಿಗೂ ಹಚ್ಚ ಹಸಿರಾಗಿದ್ದಾರೆ ಎಮಿಲಿ ಡಿಕಿನ್ಸನ್,
ಡಿಕಿನ್ಸನಳ ಕಲ್ಪನಾಶಕ್ತಿ ಇನ್ನೊಬ್ಬರ ಸೊತ್ತಾಗಿರಲಿಲ್ಲ. ಅರ್ಥಾತ್ ಆಂಗ್ಲ ಸಾಹಿತ್ಯದ ಅಧ್ಯಯನದಿಂದ ಬಂದ ದೇಣಿಗೆಯಾಗಿರಲಿಲ್ಲ.ಎಮರ್ಸನ್ ರ ವಿಚಾರಧಾರೆಗಳನ್ನು ಸ್ವಲ್ಪಮಟ್ಟಿಗೆ ಪರಿಗ್ರಹಿಸಿದರೂ ಕೂಡಾ ಅದನ್ನು ತನ್ನದಾಗಿಸಿಕೊಂಡು ತನ್ನ ಕವನಗಳ ಅಭಿವ್ಯಕ್ತಿಯಲ್ಲಿ ಪ್ರಭಾವ ಬೀರುವಂತೆ ಮಾಡುವುದು ಎಮಿಲಿಯ ಸ್ವಭಾವಕ್ಕೆ ವಿರುದ್ಧವಾಗಿತ್ತು ಅವಳ ಸ್ವತಂತ್ರ ವಿಚಾರಧಾರೆ ಇದಕ್ಕೆಲ್ಲ ಸಿದ್ಧವಾಗಿರಲಿಲ್ಲ .ಸ್ಪಷ್ಟವಾಗಿ ಹೇಳಬೇಕೆಂದರೆ ಅವಳ ಕಾಲ್ಪನಿಕ ಶಕ್ತಿ ದೈವದತ್ತ ದೇಣಿಗೆಯಾಗಿತ್ತು ಸ್ವಲ್ಪಮಟ್ಟಿಗೆ ನಮ್ಮ ಅಧ್ಯಯನವು ನಮ್ಮ ಕಾವ್ಯಶಕ್ತಿಗೆ ಪೂರಕವಾಗಿದ್ದರೂ ಕೂಡಾ ಸ್ವತಂತ್ರ ಚಿಂತನೆ ಹಾಗು ಒಳಗಿಂದ ಚಿಮ್ಮಿ ಬರುವಂತಹ ಸ್ಫೂರ್ತಿಯುತ ವಿಚಾರಧಾರೆಗಳು ಪ್ರತಿಯೊಬ್ಬರ ಮೇಧಾಶಕ್ತಿ ಹಾಗು ಬುದ್ಧಿಶಕ್ತಿಯನ್ನು ಅವಲಂಬಿಸಿದೆ ಎಂಬುದು ವಾಸ್ತವ. "ಬುದ್ಧಿರ್ಬುದ್ಧಿಮತಾಮಸ್ಮಿ "ಎಂದೇ ಗೀತಾಚಾರ್ಯ ಗೀತೆಯಲ್ಲಿ ಹೇಳಿದ್ದಾನೆ. ಆದ್ದರಿಂದ ರಸರುಷಿಗಳ ಕಾವ್ಯರಸದೌತಣದ ಹಿಂದೆ ದೈವೀಶಕ್ತಿ ಇರುವುದನ್ನು
ಅಲ್ಲಗಳೆಯಲಾಗದಲ್ಲವೇ?
ತಾನು ಕಂಡ ಪ್ರತಿಯೊಂದು ವಸ್ತುವಿನ ವಿಶಿಷ್ಟತೆಯನ್ನು ವಿಶಿಷ್ಟವಾಗಿ ಉಲ್ಲೇಖಿಸುವ ಶಕ್ತಿ ಇವಳಿಗಿತ್ತು.
ಪ್ರಕೃತಿಯ ಸೊಬಗಲ್ಲಿ ಎಮಿಲಿ ತನ್ನನ್ನು ತಾನೆ ಮರೆಯುತ್ತಿದ್ದಳು ಪ್ರಕೃತಿಯು ಅವಳೊಂದಿಗೆ ಸ್ಪಂದಿಸುವಂತೆ ಅವಳಿಗೆ ಭಾಸವಾಗುತ್ತಿತ್ತು ಭಗವದ್ಸೃಷ್ಟಿಯ ಈ ಚಾತುರ್ಯವನ್ನು ನೋಡಿ ಆನಂದಿಸಿ ಈ ಸೃಷ್ಟಿಯ ಹಿಂದಿರುವಂತಹ ದೈವೀ ಶಕ್ತಿಯನ್ನು ಅನುಭವಿಸುವ ಆಧ್ಯಾತ್ಮಿಕತೆ ಹಾಗೂ ರಸಿಕತೆ ಇವಳಲ್ಲಿತ್ತು ಇವಳ ಸಿದ್ಧಾಂತ ಒಣ ವೇದಾಂತವಾಗಿರದೇ ರಸಪೂರ್ಣ ಭಾವನೆಯಾಗಿ ಓದುಗರಿಗೆ ಆನಂದದ ಔತಣವನ್ನೇ ನೀಡುವಂತಿತ್ತು. ಎಮಿಲಿಯ ಕಲ್ಪನಾಶಕ್ತಿ ಹಾಗೂ ನಿರ್ಬಿಡೆಯ ಮನೋಭಾವನೆ ಅವಳ ಕಾವ್ಯಕ್ಕೆ ಹೊಸ ಮೆರುಗನ್ನು ತಂದಿದೆ. ಅರ್ಥವಿಲ್ಲದ ಆಡಂಬರಗಳಿಗೆ ಎಮಿಲಿ ಕಟ್ಟಾ ವಿರೋಧಿಯಗಿದ್ದಳು.ಮನಸ್ಸೊಪ್ಪದ್ದನ್ನು ಅವಳು ಮಾಡುತ್ತಿರಲಿಲ್ಲ. ತನ್ನನ್ನು ಪ್ರಾಪಂಚಿಕರಿಂದ ದೂರವಾಗಿಟ್ಟು ತನ್ನದೇ ಆದ ಒಂದು ಹೊಸ ಪ್ರಪಂಚದಲ್ಲಿ ಏಕಾಂತ ಜೀವನ ನಡೆಸಿ ಮೇಲ್ಮಟ್ಟದ ಸನ್ಯಾಸಿನಿಯಾಗಿ ಬಾಳಿದಳು.ಆದರೂ ಇವಳು ರಸಋಷಿ.ಏಕೆಂದರೆ ಇವಳ ಜೀವನದ ಸುಖದು:ಖಗಳು ಇವಳನ್ನು ಒಬ್ಬ ಭಾವಪೂರ್ಣ ಕವಯಿತ್ರಿಯಾಗಿ ಬಿಂಬಿಸಲು ಪೂರಕವಾಗಿದ್ದವೇ ವಿನಃ ರಸರಹಿತವಾಗಿರಲಿಲ್ಲ.
ವ್ಯಕ್ತಿಯ ಇರುವಿಕೆಯನ್ನು ಪರಿಗಣಿಸದೆ ಜೀವಿತಾವಧಿಯಲ್ಲಿ ಅವರ ವ್ಯಕ್ತಿತ್ವವನ್ನು ಗುರುತಿಸದೆ ಅವರ ಕಾಲಾನಂತರ ಅವರ ಮೇಲೆ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿ ಅವರಿಗಾಗಿ ಕಣ್ಣೇರು ಹರಿಸಿ ಅನೇಕ ಸ್ಮಾರಕಗಳನ್ನು ನಿರ್ಮಿಸಿ ಅವರನ್ನು ಹಾಡಿ ಹೊಗಳಿ ಅವರ ಬಗ್ಗೆ ನೂರಾರು ಪುಸ್ತಕಗಳನ್ನು ಬರೆಯುವುದು ಪ್ರಪಂಚದ ಜನರ ವಿಶೇಷತೆ.ಎಮಿಲಿ ದಿಕಿನ್ಸನ್ ರವರ ಜೀವನವೂ ಇದಕ್ಕೆ ಹೊರತಾಗಿರಲಿಲ್ಲ ನಿರ್ಲಿಪ್ತಳಾಗಿ, ನಿಸ್ಪೃಹಳಾಗಿ ಕೀರ್ತಿಯ ಆಸೆಯಿಲ್ಲದೆ ಪೆನ್ನಿಸಿದ ಡಿಕಿನ್ಸನ್ ಳಿಗೆ ತನ್ನ ಕವನಗಳನ್ನು ಜಗತ್ತು ಗುರುತಿಸದಿದ್ದಾಗ ನೋವಾದರೂ ಅವಳಲ್ಲಿ ಮನೆ ಮಾಡಿದ ಆತ್ಮವಿಶ್ವಾಸ ಅವಳ ರಚನೆಗಳ ಬಗ್ಗೆ ಅವಳಿಗಿದ್ದ ವಿಶ್ವಾಸ ಹಾಗೂ ಗೌರವ ಅವಳನ್ನು ಪುನ: ಪುನ: ಸಾವಿರಾರು ಕವನಗಳನ್ನು ಅದರಲ್ಲೂ ರಸಭರಿತ ಕವನಗಳನ್ನು ಅರ್ಥಗರ್ಭಿತವಾಗಿ ಬರೆಯುವಂತೆ ಪ್ರೇರೇಪಿಸಿದವು. ಹೀಗಾಗಿ ಪ್ರದರ್ಶನ ರಹಿತ ಕವಯಿತ್ರಿಯಾಗಿ ಒಂದಲ್ಲ ಒಂದು ದಿನ ತನ್ನ ಕವನಗಳನ್ನು ಜನ ಗುರುತಿಸುವರೆಂಬ ಮನೋಭಾವನೆಯಿಂದೇನೋ ಅವಳ ಲೇಖನಿ ಪದಪುಂಜಗಳನ್ನು ಪ್ರಾಸದ ಪರಿಧಿಯನ್ನು ಮೀರಿ ಅರ್ಥಗೌರವವನ್ನು ಮಹತ್ತಾಗಿಟ್ಟುಕೊಂಡು ಹಾಳೆಗಳ ಮೇಲೆ ಮೂಡಿಸಿತೆಂಬುದು ಉತ್ಪ್ರೇಕ್ಷೆಯಲ್ಲ.
ಕಾವ್ಯಪ್ರಪಂಚದಲ್ಲಿ,ವಿಶಿಷ್ಟವಾಗಿ ಪ್ರಕೃತಿಯಲ್ಲಿ ಎಮಿಲಿಯ ಕಣ್ಣಿಂದ ಮರೆಯಾದ ಕವಿತಾ ವಸ್ತುಗಳು ತೀರ ಅಪರೂಪ.
ಹೂವಿರಬಹುದು, ದುಂಬಿಯಿರಬಹುದು,ಗಿಡಮರಗಳಿರಬಹುದು,ಪಕ್ಷಿ ಪ್ರಾಣಿಗಳಿರಬಹುದು ಜೇಡರಹುಳುವಾಗಿರಬಹುದು,ಬೆಕ್ಕು, ಹಾವು,ಇಲಿಗಳಾಗಿರಬಹುದು ಎಲ್ಲದರಲ್ಲೊಂದು ವಿಶೇಷತೆಯನ್ನು ಕಾಣುವ ಹೃದಯ ವೈಶಾಲ್ಯಇವಳಿಗಿತ್ತು.ಪ್ರಕೃತಿಯ ವಿಶೇಷಗಳಾದ ಸೂರ್ಯೋದಯ ಸೂರ್ಯಾಸ್ತ ಗಳು, ವರ್ಷ, ಗ್ರೀಷ್ಮ ಶರದೃತುಗಳಗಿರಬಹುದು ಇವೆಲ್ಲವೂ ಎಮಿಲಿಯ ಕಾವ್ಯಕ್ಕೆ ವಿಷಯಗಳಾಗಿದ್ದವು.ಇದಲ್ಲದೆ ಭಗವಂತನ ಅಸ್ತಿತ್ವ,ಸಾವಿನ ನಂತರದ ಬದುಕು ಪ್ರಕೃತಿಯಲ್ಲಿ ಭಗವಂತನನ್ನು ಕಾಣುವಿಕೆ ಆಧ್ಯಾತ್ಮಿಕತೆಯ ಮೂಲ,ಸಾಮಾಜಿಕ ಸಮಸ್ಯೆಗಳು,ಪ್ರೇಮ, ಸಾವು ನೋವುಗಳು ಈ ಎಲ್ಲ ವಿಷಯಗಳಮೇಲೂ ಎಮಿಲಿ ಅನೇಕ ಕವನಗಳನ್ನು ರಚಿಸಿದ್ದಾಳೆ.
ಇವಳ ಕವನಗಳ ಒಂದು ಪಕ್ಷಿನೋಟವನ್ನೀಗ ನೋಡೋಣ.
ಪ್ರಸಿದ್ಧಿ ಇವಳಿಗೆ ಒಂದು ದುಂಬಿಯಂತೆ.
ಎಮಿಲಿಯ ದೃಷ್ಟಿಯಲ್ಲಿ ಕೀರ್ತಿ ಒಂದು ದುಂಬಿಯಂತೆ. ಅದು ಹೂವಿಂದ ಹೂವಿಗೆ ಹಾರುತ್ತದೆ ಅದರಲ್ಲಿ ಮುಳ್ಳುಗಳೂ ಇರುತ್ತವೆ.
ಜಯವನ್ನು ವರ್ಣಿಸುವ ಶಕ್ತಿ ವಿಜಯಿ ಗಿಂತ ಸೋತ ವ್ಯಕ್ತಿಗೆ ವಿಶೇಷ ವಾಗಿರುತ್ತದೆ
ಏಕೆಂದರೆ ಗೆದ್ದ ವ್ಯಕ್ತಿ ಗೆದ್ದ ಅಮಲಿನಲ್ಲಿ ಕ್ಷಣ ಕಾಲ ತೇಲಿ ತನ್ನ ವಿಜಯದ ಆನಂದವನ್ನು ಮರೆತು ಬಿಡುತ್ತಾನೆ.ಆದರೆ ಸೋತ ವ್ಯಕ್ತಿ ಗೆ ತಾನು ಕಳೆದುಕೊಂಡ ಜಯದ ಆನಂದವನ್ನು ಮರೆಯುವುದು ಅಷ್ಟು ಸುಲಭವಲ್ಲ.ಅವನು ಪ್ರತಿಕ್ಷಣವೂ ವಿಜಯದ ಆನಂದದ ಬಗ್ಗೆ ಯೋಚಿಸುತ್ತಾ ತಾನು ಎಂತಹ ಸುಖವನ್ನು ಕಳೆದು ಕೊಂಡೆನೆಂದು ಮರುಗುತ್ತಾನೆ. ಹಾಗಾಗಿ ಆ ಸುಖದ ಮಹತ್ವವನ್ನು, ಆ ಸುಖದ ಸವಿಯೇನೆಂದು ಸೋಲುಂಡ ವ್ಯಕ್ತಿಯಷ್ಟು ಚೆನ್ನಾಗಿ ಯಾರು ತಾನೇ ವರ್ಣಿಸಬಲ್ಲರು.
.ಅಧ್ಯಾತ್ಮಿಕ ಜೀವನದಲ್ಲಿ ನಿಜಕ್ಕೂ ಎಮಿಲಿ ಪ್ರಬುದ್ಧಳಾಗಿದ್ದಳು
ಮೋಕ್ಷವನ್ನು ಎಮಿಲಿಯ ಶಬ್ದಗಳಲ್ಲಿ ಕಂಡಾಗ "ಮೋಹಸ್ಯ ಕ್ಷಯಃ"ಎಂಬ ಭಾರತಿಯ ಒಕ್ಕಣೆಯೊಂದು ನೆನಪಾಗುತ್ತದೆ.
ಪ್ರಕೃತಿಯನ್ನು ಭಗವಂತನ ಮಗಳೆಂದು ಕರೆದ ಇವಳ ಮಾನಸಿಕ ಸ್ತರವನ್ನು ನೋಡಿದಾಗ ಪ್ರಕೃತಿಯಲ್ಲಿ ಪರಮ ಪುರುಷನನ್ನು ನೋಡುವ ಶಕ್ತಿ ಇವಳಲ್ಲಿತ್ತೆಂಬುದು ಗೋಚರವಾಗುತ್ತದೆ.ಈ ಸಮಯದಲ್ಲಿ ಕನ್ನಡ ನಾಡಿನ ರಸಋಷಿ ರಾಷ್ಟ್ರಕವಿ ಕುವೆಂಪು ರವರ "ಭಾದೃಪದ ಸುಪ್ರಭಾತ" ಕವನದ ಕೊನೆಯ ಸಾಲುಗಳು ನೆನಪಾಗುತ್ತದೆ
ಸವಿಗೆ ಸವಿಯ ಪೇರಿಸಿತ್ತು ಭದ್ರಮಾಸಂ
ಕವಿಗೆ ಕವಿಯ ತೋರಿಸಿತ್ತು ಸುಪ್ರಭಾತಂ
ಬಹುಶ: ದೈವದತ್ತ ಕಾವ್ಯ ಶಕ್ತಿಯನ್ನು ಹೊಂದಿದ ಎಲ್ಲ ಕವಿಗಳ ಕಲ್ಪನೆಗಳೂ ಅಸಾಮಾನ್ಯವೇ.
ಎಮಿಲಿಯ ಪ್ರಕೃತಿಯ ವರ್ಣನೆಯನ್ನು ನೋಡಿ
ಇವಳ ಪ್ರೇಮ ಕವನಗಳಲ್ಲೂ ಸಹ ನಿಸ್ವಾರ್ಥ,ನಿಶ್ಕಳಂಕ ಪ್ರೇಮವೇ ತುಂಬಿದೆ
ಎರಡು ಹೃದಯಗಳು ಒಂದಾಗುವ ಪರಿಯನ್ನು ಇವಳು ವರ್ಣಿಸುವ ರೀತಿಯೇ ಮಾರ್ಮಿಕ.
ಇವಳ ಪ್ರತಿಯೊಂದು ಕವನಕ್ಕೂ ನೂರಾರು ವಿಮರ್ಶೆಗಳನ್ನು ನಾವು ಇಂಟರ್ನೆಟ್ ನಲ್ಲಿ ಕಾಣಬಹುದು.ಇವಳ ಕೆಲಕವನಗಳು ಸರಳ ಸುಂದರವಾದರೆ ಇನ್ನೂ ಕೆಲವು ಕಬ್ಬಿಣದ ಕಡಲೆ.ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸೇವೆ ಗೈದ ಎಮಿಲಿ ಡಿಕಿನ್ಸನ್ ಬರವಣಿಗೆಯ ಜಗತ್ತಿನಲ್ಲಿ ಧ್ರುವತಾರೆಯಗಿದ್ದಾರೆ.ಇವರಕಲ್ಪನಾ ಶಕ್ತಿ,ಅದ್ಭುತವಾದ ಇವರ ಅವಲೋಕನೆಯ ಶಕ್ತಿ,ಪ್ರಕೃತಿಯಲ್ಲಿ ಇವರಿಗಿದ್ದ ಅನುರಕ್ತಿ ಇವರ ಕೀರ್ತಿಯನ್ನು ಅಮರವಾಗಿಸಿದೆ.ಕೀರ್ತಿಯೆಂಬ ದುಂಬಿ ಇನ್ನೂ ಎಮಿಲಿಯೆಂಬ ಹೂವಿನ ಮಕರಂದವನ್ನು ಹೀರುತ್ತಲೇ ಇದೆ.
ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
ಅಮೇರಿಕಾದ ಸಾಹಿತ್ಯ ಪ್ರಪಂಚದಲ್ಲಿ ಹೊಸ ಮೈಲಿಗಲ್ಲಾಗಿದ್ದ ಎಕೈಕ ಕವಯಿತ್ರಿ ಎಮಿಲಿ ಡಿಕಿನ್ಸನ್ ರವರ ಬಗ್ಗೆ ಸಂಪದದಲ್ಲಿ ಬರೆಯಲು ಹೆಮ್ಮೆಯೆನಿಸುತ್ತದೆ..ಇತಿಹಾಸದ ಪುಟಗಳಲ್ಲಿ ಡಿಸೆಂಬರ್ ೧೦ ೧೮೩೦ ಒಂದು ಮಹತ್ವದ ದಿನ.ಒಬ್ಬ ನ್ಯಾಯವಾದಿಯ ಮಗಳಾಗಿ ಇಡೀ ಜಗತ್ತಿನ ನ್ಯಾಯಾಧೀಶ ನಾದ ಭಗವಂತನ ಅಸ್ತಿತ್ವವನ್ನು ಅವನ ಸೃಷ್ಟಿಯಲ್ಲಿ ಕಾಣುತ್ತ ತನಗೆ ಸರಿಕಾಣದಾಗ ಅವನನ್ನೇ ಕಟಕಟೆಯಲ್ಲಿ ನಿಲಿಸುವ ಸಾಹಸ ಮಾಡಿದ ಮಹಾನ್ ಲೇಖಕಿಯ ಜನ್ಮದಿನ. ಪ್ರಾಸಕ್ಕೆ ಹೆಚ್ಚು ಒತ್ತನ್ನು ಕೊದದೆ ವಸ್ತುನಿಷ್ಠ ಅಭಿಪ್ರಾಯಗಳ ಶೃಂಖಲೆಯನ್ನು ಅರ್ಥಪೂರ್ಣವಾಗಿ ತನ್ನ ವೈಚಾರಿಕ ಹಾಗೂ ವಿಶಿಷ್ಟ ಕಾವ್ಯಶೈಲಿಯಿಂದ ಬಿಂಬಿಸುತ್ತ ಜನಮನದಲ್ಲಿ ಇವತ್ತಿಗೂ ಹೆಸರಾಗಿದ್ದಾರೆ ಎಮಿಲಿ ಡಿಕಿನ್ಸನ್.
ಎಮಿಲಿಯ ಸೃಜನಶೀಲ ಶೈಲಿ ಆಗಿನ ಸಾಂಪ್ರದಾಯಿಕ ಕಟ್ಟುನಿಟ್ಟಿನ ಸಾಹಿತ್ಯ ಪ್ರಪಂಚದಲ್ಲಿ ಗೊಂದಲವನ್ನೇ ಸೃಷ್ಟಿಸಿತು.ಕಾವ್ಯಸಾಹಿತ್ಯದ ನಿಯಮಗಳಿಗೆ ಬದ್ಧಳಾಗದೇ ತನ್ನದೇ ಆದ ಶೈಲಿಯಲ್ಲಿ ಅರ್ಥಕ್ಕೆ ಒತ್ತನ್ನು ಕೊಟ್ಟು ಹೃದಯಸ್ಪರ್ಶಿಯಾಗಿ ತನ್ನ ಮನದ ಭಾವನೆಗಳನ್ನು ಮೂಡಿಸಿದ ಇವಳಿಗೆ ತನ್ನ ಜೀವಿತಾವಧಿಯಲ್ಲಿ ಕವಯಿತ್ರಿಯಾಗಿ ಸಲ್ಲಬೇಕಾದ ಗೌರವ ಹಾಗೂ ಪ್ರಶಂಸೆ ಸಿಗಲೇ ಇಲ್ಲವೆಂಬುದು ವಿಧಿಯ ವಿಪರ್ಯಾಸ.ವಾಸ್ತವ ವಾಗಿ ಹೇಳಬೇಕೆಂದರೆ ಅವಳ ಉದಾತ್ತವಾದ, ಅರ್ಥಗರ್ಭಿತವಾದ, ಸುಂದರವಾದ, ಹಾರ್ದಿಕವಾದ ಮತ್ತು ವಿಚಾರಾತ್ಮಕವಾದ ಬರವಣಿಗೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಸ್ಪಂದಿಸುವ ಹೃದಯವಂತಿಕೆ ಮತ್ತು ಉದಾರತೆ ಸಾಂಪ್ರದಾಯಿಕ ಕಟ್ಟುಪಾಡುಗಳಿಗೆ ಒಳಗಾಗಿದ್ದ ಆಗಿನ ಸಮಾಜದಲ್ಲಿರಲಿಲ್ಲವೆಂಬುದು ನಿಜಕ್ಕೂ ದುಃಖದ ವಿಷಯ.
ವೈಜ್ಞಾನಿಕ,ವಿಮರ್ಶಾತ್ಮಕ,ಅತ್ಯಾಧುನಿಕ ಮನೋಭಾವನೆಯನ್ನು ಹೊಂದಿದ್ದ ಎಮಿಲಿಗೆ ಆಗಿನ ಸಮಾಜದಲ್ಲಿ ನಿಸ್ಸಂಕೋಚವಾಗಿ ಬೆರೆಯುವದು ಅಸಾಧ್ಯವಾಗಿರಬೇಕು.ಇವಳ ಕವಲೊಡೆದ ವಿಚಾರಧಾರೆಯನ್ನು ಜನ ಸ್ವೀಕರಿಸದಿದ್ದಾಗ ಸಹಜವಾಗಿಯೇ ಎಮಿಲಿಗೆ ಜನರೊಡನೆ ಬೆರೆಯುವ ಆಸಕ್ತಿ ಕುಂದಿರಬೇಕು.ಅದಕ್ಕೋ ಎನೋ ಸಾಮಾಜಿಕರೊದನೆ ವಿಶೇಷ ತಾಳಮೇಳಗಳಿಲ್ಲದೆ ತನ್ನೊಳಗಿನ ಅಂತಃಸತ್ವವನ್ನು ಹಾಳೆಗಳಲ್ಲಿ ಮೂಡಿಸುತ್ತ,ಪ್ರಪಂಚದ ಆಕರ್ಷಣೆಗೆ ಮನ ಸೋಲದೇ ಆಡಂಬರಕ್ಕೆ ಬೆಲೆಕೊಡದೆ ಏಕಾಂತನಗರಿಯಲ್ಲಿ ಚಿಂತನ ಮಂಥನಗಳ ನಡುವೆ ತನ್ನನ್ನು ತೊಡಗಿಸಿಕೊಂಡು ಅಭಿವ್ಯಕ್ತಿಯ ಅಭೂತಪೂರ್ವ ಇಚ್ಛಾಶಕ್ತಿಯಾಗಿ ರಸಋಷಿಯೋರ್ವಳು ಉಧ್ಭವಿಸಿದಳೆಂದರೆ ತಪ್ಪಾಗಲಾರದು.
ಇವಳ ಕಾವ್ಯಶೈಲಿಯನ್ನು ಟೀಕಿಸಿದವರೆಷ್ಟೋ ಜನ.ಆದರೆ ಕಾಲದ ವಿಡಂಬನೆಯನ್ನು ನೋಡಿ.ಇವಳನ್ನು ಟೀಕಿಸಿದ ಎಷ್ಟೋ ಟೀಕಾಕಾರರ ಹೆಸರು ಇವತ್ತು ಆಂಗ್ಲಸಾಹಿತ್ಯ ಪ್ರಪಂಚದಲ್ಲಿ ಉಳಿದಿದ್ದರೆ ಅದು ಇಂತಹ ಮಹಾನ್ ಲೇಖಕಿಯನ್ನು ಟೀಕಿಸಿದ್ದಕ್ಕಾಗಿ ಮಾತ್ರ ಎಂಬ ಕಟು ಸತ್ಯ ದೃಗ್ಗೋಚರವಾದಾಗ ಅಯ್ಯೊ ಪಾಪ ಎಂದೆನಿಸುವುದು ಮತ್ತು ಇಂತಹ ಅಸಾಮಾನ್ಯ ಲೇಖಕಿಯನ್ನು ಗುರುತಿಸದಂತಹ ಅವರ ಸೃಜನಶೀಲವಲ್ಲದ ಅಭಿರುಚಿ ನಿಜಕ್ಕೂ ಅನುಕಂಪನೀಯವಾಗಿದೆ.
ಎಮ್ಹರೆಸ್ಟ್ ಎಂಬ ಸಣ್ಣ ಗ್ರಾಮದಲ್ಲಿ ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದ ಎಮಿಲಿಗೆ ಅವಳ ಕುಟುಂಬದ ಸದಸ್ಯರಿಂದ ಯಾವುದೇರೀತಿಯ ಪ್ರೋತ್ಸಾಹ ಸಾಹಿತ್ಯ ಕ್ಷೇತ್ರದಲ್ಲಿ ಸಿಗಲಿಲ್ಲ.ಎಮಿಲಿಯ ಅಂತರ್ಮುಖ ಸ್ವಭಾವವೂ ಇದಕ್ಕೆ ಕಾರಣವಾಗಿತ್ತು. ಶ್ರೇಷ್ಠ ನ್ಯಾಯವಾದಿಯಗಿದ್ದ ಇವಳ ತಂದೆ ಎಡ್ವರ್ಡ್ ಡಿಕಿನ್ಸನ್ ಕಟ್ಟುನಿಟ್ಟಿನ ಹಾಗೂ ಶಿಸ್ತಿನ ಜೀವನವನ್ನು ರೂಢಿಸಿ ಕೊಂಡಿದ್ದನು.ಎಮಿಲಿಗೆ ಬೇಕಾದಂತಹ ಅನೇಕ ಪುಸ್ತಕಗಳನ್ನು ತಂದು ಕೊಟ್ಟರೂ ಸಹ ಅದನ್ನು ಅವಳು ಓದದೇ ಇದ್ದರೆ ಒಳ್ಳೆಯದು ಎಂಬ ಮನೋಭಾವನೆ ಅವರಿಗಿತ್ತು........" ತಂದೆ ಮಕ್ಕಳಲ್ಲಿರುವ ಮಾನಸಿಕ ಅಂತರವನ್ನು ಇದು ಸೂಚಿಸುತ್ತದೆ.ಆದರೆ ಇಬ್ಬರೂ ಒಬ್ಬರನ್ನೊಬ್ಬರು ಅಪಾರವಾಗಿ ಪ್ರೀತಿಸುತ್ತಿದ್ದರೆಂಬುದು ವಾಸ್ತವಿಕತೆ.ಎಮಿಲಿಯ ಆಣ್ಣ ಆಸ್ಟಿನ್ ಡಿಕಿನ್ಸನ್ ಹಾಗೂ ತಂಗಿ ಲ್ಯಾವಿನಿಯಾ ಡಿಕಿನ್ಸನ್ ಮತ್ತು ಅತ್ತಿಗೆ ಸೂಸನ್ ಡಿಕಿನ್ಸನ್ ರೊಂದಿಗೆ ಅಪಾರವಾದ ಆತ್ಮೀಯತೆ ಇದ್ದರೂ ಸಹ ಎಮಿಲಿಯಲ್ಲಿ ಸುಪ್ತವಾಗಿದ್ದ ಕವಿತಾ ಶಕ್ತಿಯನ್ನು ಗುರುತಿಸಲು ಇವರೂ ಅಸಮಥ೯ರಾಗಿದ್ದರು.ಎಮಿಲಿಯ ಮರಣಾ ನಂತರ ಅವಳ ಕೋಣೆಯ ಕಪಾಟನ್ನು ತೆರೆದಾಗ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಕವನಗಳ ಸ್ವಲಿಖಿತ ಕರಡು ಪ್ರತಿಗಳನ್ನು ಕಂಡು ನಿಬ್ಬೆರಗಾದಳು ಅವಳ ತಂಗಿ ಲ್ಯಾವೀನಿಯಾ..ಮುಂದೆ ಅವುಗಳನ್ನು ಸಮಾಜಕ್ಕೆ ದೇಣಿಗೆಯಾಗಿ ಕೊಟ್ಟ ಶ್ರೇಯ ಇವಳಿಗೇ ಸಲ್ಲಬೇಕಾದದ್ದು.
ಸ್ವತಂತ್ರ ಚಿಂತನೆ,ಇದ್ದುದನ್ನು ಇದ್ದ ಹಾಗೇ ಘಂಟಾಘೋಷ ವಾಗಿ ಹೇಳುವ ಮನೋಭಾವನೆ ಹಾಗೂ ಕವನಗಳಿಗೆ ಹೊಸ ಆಯಾಮ ಕೊಡುವ ನಿಟ್ಟಿನಲ್ಲಿ ಎಮಿಲಿ ಆಗಿನ ಸಮಾಜಕ್ಕೆ ರುಚಿಸಲಾಗದ ಕಗ್ಗಂಟಾಗಿದ್ದಳು.
ಸಾಹಿತ್ಯದ ನಿಯಮಗಳಿಗೆ ಬೆಲೆ ಕೊಡದ ಕಾರಣ ಇವಳ ಕೃತಿಗಳನ್ನು ಕವನಗಳೇ ಅಲ್ಲ ಎಂದು ಪರಿಗಣಿಸಿದಂತಹ ವಿಪರ್ಯಾಸಗಳನ್ನು ಕಂಡಾಗ ಬಹಳ ದುಃಖವೆನಿಸುತ್ತದೆ.ಎಮಿಲಿಯ ಜೀವನ ಕಾಲದಲ್ಲಿ ಅವಳ ಆರೇಳು ಕವಿತೆಗಳು ಮಾತ್ರ ಮುದ್ರಣ ಗೊಂಡಿದ್ದವು.ಅವಳ ಮರಣಾನಂತರ ಅವಳ ಬಗ್ಗೆ ಹಾಗೂ ಆವಳ ಕವನಗಳ ಬಗ್ಗೆ ಸಾವಿರಾರು ಪುಸ್ತಕಗಳು ಬರೆಯಲ್ಪಟ್ಟಿವೆ. ಆಂಗ್ಲ ಸಾಹಿತ್ಯ ಪ್ರಪಂಚದಲ್ಲಿ ಅದರಲ್ಲೂ ವಿಶೇಷವಾಗಿ ಅಮೆರಿಕಾದ ಸಾಹಿತ್ಯ ಪ್ರಪಂಚದ ಧ್ರುವತಾರೆಯಾಗಿ ಮೆರೆಯುತ್ತಾ ಇಡೀ ವಿಶ್ವದಲ್ಲೇ ಪ್ರಸಿದ್ಧಿಯನ್ನು ಪಡೆದು ಜನಮನದಲ್ಲಿ ಇಂದಿಗೂ ಹಚ್ಚ ಹಸಿರಾಗಿದ್ದಾರೆ ಎಮಿಲಿ ಡಿಕಿನ್ಸನ್.
ಡಿಕಿನ್ಸನಳ ಕಲ್ಪನಾಶಕ್ತಿ ಇನ್ನೊಬ್ಬರ ಸೋತ್ತಾಗಿರಲಿಲ್ಲ ಅರ್ಥಾತ್ ಆಂಗ್ಲ ಸಾಹಿತ್ಯದ ಅಧ್ಯಯನದಿಂದ ಬಂದ ದೇಣಿಗೆಯಾಗಿರಲಿಲ್ಲ.ಎಮರ್ಸನ್ ರ ವಿಚಾರಧಾರೆಗಳನ್ನು ಸ್ವಲ್ಪಮಟ್ಟಿಗೆ ಪರಿಗ್ರಹಿಸಿದರೂ ಕೂಡಾ, ಅದನ್ನು ತನ್ನದಾಗಿಸಿಕೊಂಡು ತನ್ನ ಕವನಗಳ ಅಭಿವ್ಯಕ್ತಿಯಲ್ಲಿ ಪ್ರಭಾವ ಬೀರುವಂತೆ ಮಾಡುವುದು ಎಮಿಲಿಯ ಸ್ವಭಾವಕ್ಕೆ ವಿರುದ್ಧವಾಗಿತ್ತು ಅವಳ ಸ್ವತಂತ್ರ ವಿಚಾರಧಾರೆ ಇದಕ್ಕೆಲ್ಲ ಸಿದ್ಧವಾಗಿರಲಿಲ್ಲ .ಸ್ಪಷ್ಟವಾಗಿ ಹೇಳಬೇಕೆಂದರೆ ಅವಳ ಕಾಲ್ಪನಿಕ ಶಕ್ತಿ ದೈವದತ್ತ ದೇಣಿಗೆಯಾಗಿತ್ತು ಸ್ವಲ್ಪಮಟ್ಟಿಗೆ ನಮ್ಮ ಅಧ್ಯಯನವು ನಮ್ಮ ಕಾವ್ಯಶಕ್ತಿಗೆ ಪೂರಕವಾಗಿದ್ದರೂ ಕೂಡಾ ಸ್ವತಂತ್ರ ಚಿಂತನೆ ಹಾಗು ಒಳಗಿಂದ ಚಿಮ್ಮಿ ಬರುವಂತಹ ಸ್ಫೂರ್ತಿಯುತ ವಿಚಾರಧಾರೆಗಳು ಪ್ರತಿಯೊಬ್ಬರ ಮೇಧಾಶಕ್ತಿ ಹಾಗು ಬುದ್ಧಿಶಕ್ತಿಯನ್ನು ಅವಲಂಬಿಸಿದೆ ಎಂಬುದು ವಾಸ್ತವ. "ಬುದ್ಧಿರ್ಬುದ್ಧಿಮತಾಮಸ್ಮಿ "ಎಂದೇ ಗೀತಾಚಾರ್ಯ ಗೀತೆಯಲ್ಲಿ ಹೇಳಿದ್ದಾನೆ. ಆದ್ದರಿಂದ ರಸರುಷಿಗಳ ಕಾವ್ಯರಸದೌತಣದ ಹಿಂದೆ ದೈವೀಶಕ್ತಿ ಇರುವುದನ್ನು ಅಲ್ಲಗಳೆಯಲಾಗದಲ್ಲವೇ? ತಾನು ಕಂಡ ಪ್ರತಿಯೊಂದು ವಸ್ತುವಿನ ವಿಶಿಷ್ಟತೆಯನ್ನು ವಿಶಿಷ್ಟವಾಗಿ ಉಲ್ಲೇಖಿಸುವ ಶಕ್ತಿ ಇವಳಿಗಿತ್ತು.
ಪ್ರಕೃತಿಯ ಸೊಬಗಲ್ಲಿ ಎಮಿಲಿ ತನ್ನನ್ನು ತಾನೆ ಮರೆಯುತ್ತಿದ್ದಳು ಪ್ರಕೃತಿಯು ಅವಳೊಂದಿಗೆ ಸ್ಪಂದಿಸುವಂತೆ ಅವಳಿಗೆ ಭಾಸವಾಗುತ್ತಿತ್ತು ಭಗವದ್ಸೃಷ್ಟಿಯ ಈ ಚಾತುರ್ಯವನ್ನು ನೋಡಿ ಆನಂದಿಸಿ ಈ ಸೃಷ್ಟಿಯ ಹಿಂದಿರುವಂತಹ ದೈವೀ ಶಕ್ತಿಯನ್ನು ಅನುಭವಿಸುವ ಆಧ್ಯಾತ್ಮಿಕತೆ ಹಾಗೂ ರಸಿಕತೆ ಇವಳಲ್ಲಿತ್ತು ಇವಳ ಸಿದ್ಧಾಂತ ಒಣ ವೇದಾಂತವಾಗಿರದೇ ರಸಪೂರ್ಣ ಭಾವನೆಯಾಗಿ ಓದುಗರಿಗೆ ಆನಂದದ ಔತಣವನ್ನೇ ನೀಡುವಂತಿತ್ತು. ಎಮಿಲಿಯ ಕಲ್ಪನಾಶಕ್ತಿ ಹಾಗೂ ನಿರ್ಬಿಡೆಯ ಮನೋಭಾವನೆ ಅವಳ ಕಾವ್ಯಕ್ಕೆ ಹೊಸ ಮೆರುಗನ್ನು ತಂದಿದೆ. ಅರ್ಥವಿಲ್ಲದ ಆಡಂಬರಗಳಿಗೆ ಎಮಿಲಿ ಕಟ್ಟಾ ವಿರೋಧಿಯಾಗಿದ್ದಳು.ಮನಸ್ಸೊಪ್ಪದ್ದನ್ನು ಅವಳು ಮಾಡುತ್ತಿರಲಿಲ್ಲ. ತನ್ನನ್ನು ಪ್ರಾಪಂಚಿಕರಿಂದ ದೂರವಾಗಿಟ್ಟು ತನ್ನದೇ ಆದ ಒಂದು ಹೊಸ ಪ್ರಪಂಚದಲ್ಲಿ ಏಕಾಂತ ಜೀವನ ನಡೆಸಿ ಮೇಲ್ಮಟ್ಟದ ಸನ್ಯಾಸಿನಿಯಾಗಿ ಬಾಳಿದಳು.ಆದರೂ ಇವಳು ರಸಋಷಿ.ಏಕೆಂದರೆ ಇವಳ ಜೀವನದ ಸುಖದು:ಖಗಳು ಇವಳನ್ನು ಒಬ್ಬ ಭಾವಪೂರ್ಣ ಕವಯಿತ್ರಿಯಾಗಿ ಬಿಂಬಿಸಲು ಪೂರಕವಾಗಿದ್ದವೇ ವಿನಃ ರಸರಹಿತವಾಗಿರಲಿಲ್ಲ.
ವ್ಯಕ್ತಿಯ ಇರುವಿಕೆಯನ್ನು ಪರಿಗಣಿಸದೆ ಜೀವಿತಾವಧಿಯಲ್ಲಿ ಅವರ ವ್ಯಕ್ತಿತ್ವವನ್ನು ಗುರುತಿಸದೆ ಅವರ ಕಾಲಾನಂತರ ಅವರ ಮೇಲೆ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿ ಅವರಿಗಾಗಿ ಕಣ್ಣೇರು ಹರಿಸಿ ಅನೇಕ ಸ್ಮಾರಕಗಳನ್ನು ನಿರ್ಮಿಸಿ ಅವರನ್ನು ಹಾಡಿ ಹೊಗಳಿ ಅವರ ಬಗ್ಗೆ ನೂರಾರು ಪುಸ್ತಕಗಳನ್ನು ಬರೆಯುವುದು ಪ್ರಪಂಚದ ಜನರ ವಿಶೇಷತೆ.ಎಮಿಲಿ ದಿಕಿನ್ಸನ್ ರವರ ಜೀವನವೂ ಇದಕ್ಕೆ ಹೊರತಾಗಿರಲಿಲ್ಲ ನಿರ್ಲಿಪ್ತಳಾಗಿ, ನಿಸ್ಪೃಹಳಾಗಿ ಕೀರ್ತಿಯ ಆಸೆಯಿಲ್ಲದೆ ಪೆನ್ನಿಸಿದ ಡಿಕಿನ್ಸನ್ ಳಿಗೆ ತನ್ನ ಕವನಗಳನ್ನು ಜಗತ್ತು ಗುರುತಿಸದಿದ್ದಾಗ ನೋವಾದರೂ ಅವಳಲ್ಲಿ ಮನೆ ಮಾಡಿದ ಆತ್ಮವಿಶ್ವಾಸ ಅವಳ ರಚನೆಗಳ ಬಗ್ಗೆ ಅವಳಿಗಿದ್ದ ವಿಶ್ವಾಸ ಹಾಗೂ ಗೌರವ ಅವಳನ್ನು ಪುನ: ಪುನ: ಸಾವಿರಾರು ಕವನಗಳನ್ನು ಅದರಲ್ಲೂ ರಸಭರಿತ ಕವನಗಳನ್ನು ಅರ್ಥಗರ್ಭಿತವಾಗಿ ಬರೆಯುವಂತೆ ಪ್ರೇರೇಪಿಸಿದವು. ಹೀಗಾಗಿ ಪ್ರದರ್ಶನ ರಹಿತ ಕವಯಿತ್ರಿಯಾಗಿ ಒಂದಲ್ಲ ಒಂದು ದಿನ ತನ್ನ ಕವನಗಳನ್ನು ಜನ ಗುರುತಿಸುವರೆಂಬ ಮನೋಭಾವನೆಯಿಂದೇನೋ ಅವಳ ಲೇಖನಿ ಪದಪುಂಜಗಳನ್ನು ಪ್ರಾಸದ ಪರಿಧಿಯನ್ನು ಮೀರಿ ಅರ್ಥಗೌರವವನ್ನು ಮಹತ್ತಾಗಿಟ್ಟುಕೊಂಡು ಹಾಳೆಗಳ ಮೇಲೆ ಮೂಡಿಸಿತೆಂಬುದು ಉತ್ಪ್ರೇಕ್ಷೆಯಲ್ಲ.
ಕಾವ್ಯಪ್ರಪಂಚದಲ್ಲಿ,ವಿಶಿಷ್ಟವಾಗಿ ಪ್ರಕೃತಿಯಲ್ಲಿ ಎಮಿಲಿಯ ಕಣ್ಣಿಂದ ಮರೆಯಾದ ಕವಿತಾ ವಸ್ತುಗಳು ತೀರ ಅಪರೂಪ.
ಹೂವಿರಬಹುದು, ದುಂಬಿಯಿರಬಹುದು,ಗಿಡಮರಗಳಿರಬಹುದು,ಪಕ್ಷಿ ಪ್ರಾಣಿಗಳಿರಬಹುದು ಜೇಡರಹುಳುವಾಗಿರಬಹುದು,ಬೆಕ್ಕು, ಹಾವು,ಇಲಿಗಳಾಗಿರಬಹುದು ಎಲ್ಲದರಲ್ಲೊಂದು ವಿಶೇಷತೆಯನ್ನು ಕಾಣುವ ಹೃದಯ ವೈಶಾಲ್ಯಇವರಳಿಗಿತ್ತು.ಪ್ರಕೃತಿಯ ವಿಶೇಷಗಳಾದ ಸೂರ್ಯೋದಯ ಸೂರ್ಯಾಸ್ತ ಗಳು, ವರ್ಷ, ಗ್ರೀಷ್ಮ ಶರದೃತುಗಳಗಿರಬಹುದು ಇವೆಲ್ಲವೂ ಎಮಿಲಿಯ ಕಾವ್ಯಕ್ಕೆ ವಿಷಯಗಳಾಗಿದ್ದವು.ಇದಲ್ಲದೆ ಭಗವಂತನ ಅಸ್ತಿತ್ವ,ಸಾವಿನ ನಂತರದ ಬದುಕು ಪ್ರಕೃತಿಯಲ್ಲಿ ಭಗವಂತನನ್ನು ಕಾಣುವಿಕೆ ಆಧ್ಯಾತ್ಮಿಕತೆಯ ಮೂಲ,ಸಾಮಾಜಿಕ ಸಮಸ್ಯೆಗಳು,ಪ್ರೇಮ, ಸಾವು ನೋವುಗಳು ಈ ಎಲ್ಲ ವಿಷಯಗಳಮೇಲೂ ಎಮಿಲಿ ಅನೇಕ ಕವನಗಳನ್ನು ರಚಿಸಿದ್ದಾಳೆ.
ಇವಳ ಕವನಗಳ ಒಂದು ಪಕ್ಷಿನೋಟವನ್ನೀಗ ನೋಡೋಣ.
ಪ್ರಸಿದ್ಧಿ ಇವಳಿಗೆ ಒಂದು ದುಂಬಿಯಂತೆ.
Fame is a bee.
It has a song—
It has a sting—
Ah, too, it has a wing.
ಇದನ್ನು ಕನ್ನಡಿಸಿದಾಗ-
ಕೀರ್ತಿಯೊಂದು ತುಂಬಿಯಂತೆ
ಅದರ ಗಾನ ಚುಂಬಕ
ಅದನು ಆಸೆಯಿಂದ ಬಯಸೆ
ಮುಳ್ಳಿನಂತೆ ಕಂಟಕ
ಅಷ್ಟೆ ಅಲ್ಲ ಅದಕೆ ಎರಡು
ರೆಕ್ಕೆಯಿಹುದು ಹಾರಲು
ತೊರೆದುನಿನ್ನ ಬೇಕೆಂದರೆ
ದೂರ ದೂರ ಹೋಗಲು
- ಹರಿದಾಸ ನೀವಣೆ ಗಣೇಶ ಭಟ್ಟ
ಎಮಿಲಿಯ ದೃಷ್ಟಿಯಲ್ಲಿ ಕೀರ್ತಿ ಒಂದು ದುಂಬಿಯಂತೆ. ಅದು ಹೂವಿಂದ ಹೂವಿಗೆ ಹಾರುತ್ತದೆ ಅದರಲ್ಲಿ ಮುಳ್ಳುಗಳೂ ಇರುತ್ತವೆ.
ಜಯವನ್ನು ವರ್ಣಿಸುವ ಶಕ್ತಿ ವಿಜಯಿ ಗಿಂತ ಸೋತ ವ್ಯಕ್ತಿಗೆ ವಿಶೇಷ ವಾಗಿರುತ್ತದೆ
Success is counted sweetest
By those who ne'er succeed.
To comprehend a nectar
Requires sorest need.
ಏಕೆಂದರೆ ಗೆದ್ದ ವ್ಯಕ್ತಿ ಗೆದ್ದ ಅಮಲಿನಲ್ಲಿ ಕ್ಷಣ ಕಾಲ ತೇಲಿ ತನ್ನ ವಿಜಯದ ಆನಂದವನ್ನು ಮರೆತು ಬಿಡುತ್ತಾನೆ.ಆದರೆ ಸೋತ ವ್ಯಕ್ತಿ ಗೆ ತಾನು ಕಳೆದುಕೊಂಡ ಜಯದ ಆನಂದವನ್ನು ಮರೆಯುವುದು ಅಷ್ಟು ಸುಲಭವಲ್ಲ.ಅವನು ಪ್ರತಿಕ್ಷಣವೂ ವಿಜಯದ ಆನಂದದ ಬಗ್ಗೆ ಯೋಚಿಸುತ್ತಾ ತಾನು ಎಂತಹ ಸುಖವನ್ನು ಕಳೆದು ಕೊಂಡೆನೆಂದು ಮರುಗುತ್ತಾನೆ. ಹಾಗಾಗಿ ಆ ಸುಖದ ಮಹತ್ವವನ್ನು, ಆ ಸುಖದ ಸವಿಯೇನೆಂದು ಸೋಲುಂಡ ವ್ಯಕ್ತಿಯಷ್ಟು ಚೆನ್ನಾಗಿ ಯಾರು ತಾನೇ ವರ್ಣಿಸಬಲ್ಲರು.
.ಅಧ್ಯಾತ್ಮಿಕ ಜೀವನದಲ್ಲಿ ನಿಜಕ್ಕೂ ಎಮಿಲಿ ಪ್ರಬುದ್ಧಳಾಗಿದ್ದಳು
Behind Me -- dips Eternity --
Before Me -- Immortality --
Myself -- the Term between --
Death but the Drift of Eastern Gray,
Dissolving into Dawn away,
Before the West begin --
ಮೋಕ್ಷವನ್ನು ಎಮಿಲಿಯ ಶಬ್ದಗಳಲ್ಲಿ ಕಂಡಾಗ "ಮೋಹಸ್ಯ ಕ್ಷಯಃ"ಎಂಬ ಭಾರತಿಯ ಒಕ್ಕಣೆಯೊಂದು ನೆನಪಾಗುತ್ತದೆ.
ಪ್ರಕೃತಿಯನ್ನು ಭಗವಂತನ ಮಗಳೆಂದು ಕರೆದ ಇವಳ ಮಾನಸಿಕ ಸ್ತರವನ್ನು ನೋಡಿದಾಗ ಪ್ರಕೃತಿಯಲ್ಲಿ ಪರಮ ಪುರುಷನನ್ನು ನೋಡುವ ಶಕ್ತಿ ಇವಳಲ್ಲಿತ್ತೆಂಬುದು ಗೋಚರವಾಗುತ್ತದೆ.ಈ ಸಮಯದಲ್ಲಿ ಕನ್ನಡ ನಾಡಿನ ರಸಋಷಿ ರಾಷ್ಟ್ರಕವಿ ಕುವೆಂಪು ರವರ "ಭಾದೃಪದ ಸುಪ್ರಭಾತ" ಕವನದ ಕೊನೆಯ ಸಾಲುಗಳು ನೆನಪಾಗುತ್ತದೆ
ಸವಿಗೆ ಸವಿಯ ಪೇರಿಸಿತ್ತು ಭದ್ರಮಾಸಂ
ಕವಿಗೆ ಕವಿಯ ತೋರಿಸಿತ್ತು ಸುಪ್ರಭಾತಂ
ಬಹುಶ: ದೈವದತ್ತ ಕಾವ್ಯ ಶಕ್ತಿಯನ್ನು ಹೊಂದಿದ ಎಲ್ಲ ಕವಿಗಳ ಕಲ್ಪನೆಗಳೂ ಅಸಾಮಾನ್ಯವೇ.
ಎಮಿಲಿಯ ಪ್ರಕೃತಿಯ ವರ್ಣನೆಯನ್ನು ನೋಡಿ
"Nature" is what we see—
The Hill—the Afternoon—
Squirrel—Eclipse—the Bumble bee—
Nay—Nature is Heaven—
Nature is what we hear—
The Bobolink—the Sea—
Thunder—the Cricket—
Nay—Nature is Harmony—
Nature is what we know—
Yet have no art to say—
So impotent Our Wisdom is
To her Simplicity.
ಇವಳ ಪ್ರೇಮ ಕವನಗಳಲ್ಲೂ ಸಹ ನಿಸ್ವಾರ್ಥ,ನಿಶ್ಕಳಂಕ ಪ್ರೇಮವೇ ತುಂಬಿದೆ
Forever at His side to walk --
The smaller of the two!
Brain of His Brain --
Blood of His Blood --
Two lives -- One Being -- now --
Forever of His fate to taste --
If grief -- the largest part --
If joy -- to put my piece away
For that beloved Heart --
ಎರಡು ಹೃದಯಗಳು ಒಂದಾಗುವ ಪರಿಯನ್ನು ಇವಳು ವರ್ಣಿಸುವ ರೀತಿಯೇ ಮಾರ್ಮಿಕ.
ಇವಳ ಪ್ರತಿಯೊಂದು ಕವನಕ್ಕೂ ನೂರಾರು ವಿಮರ್ಶೆಗಳನ್ನು ನಾವು ಇಂಟರ್ನೆಟ್ ನಲ್ಲಿ ಕಾಣಬಹುದು.ಇವಳ ಕೆಲಕವನಗಳು ಸರಳ ಸುಂದರವಾದರೆ ಇನ್ನೂ ಕೆಲವು ಕಬ್ಬಿಣದ ಕಡಲೆ.ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸೇವೆ ಗೈದ ಎಮಿಲಿ ಡಿಕಿನ್ಸನ್ ಬರವಣಿಗೆಯ ಜಗತ್ತಿನಲ್ಲಿ ಧ್ರುವತಾರೆಯಗಿದ್ದಾರೆ.ಇವರಕಲ್ಪನಾ ಶಕ್ತಿ,ಅದ್ಭುತವಾದ ಇವರ ಅವಲೋಕನೆಯ ಶಕ್ತಿ,ಪ್ರಕೃತಿಯಲ್ಲಿ ಇವರಿಗಿದ್ದ ಅನುರಕ್ತಿ ಇವರ ಕೀರ್ತಿಯನ್ನು ಅಮರವಾಗಿಸಿದೆ.ಕೀರ್ತಿಯೆಂಬ ದುಂಬಿ ಇನ್ನೂ ಎಮಿಲಿಯೆಂಬ ಹೂವಿನ ಮಕರಂದವನ್ನು ಹೀರುತ್ತಲೇ ಇದೆ.
Comments
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
In reply to ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್. by haridasaneevan…
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
In reply to ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್. by haridasaneevan…
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
In reply to ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್. by shivaram_shastri
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
In reply to ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್. by abdul
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
In reply to ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್. by nagarathnavina…
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
In reply to ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್. by karababu
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
In reply to ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್. by nagarathnavina…
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
In reply to ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್. by ksraghavendranavada
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.
In reply to ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್. by ravi kumbar
ಉ: ಅಮೇರಿಕಾದ ರಸಋಷಿ ಎಮಿಲಿ ಡಿಕಿನ್ಸನ್.