ಯೋಚಿಸುತ್ತಲೇ ಇರುತ್ತೇನೆ!

ಯೋಚಿಸುತ್ತಲೇ ಇರುತ್ತೇನೆ!


ನಾನೆಷ್ಟು ಯೋಚಿಸಿದರೂ
ಅದೇ ನನಗೆ ಅರ್ಥವಾಗದ್ದು!

ನಾನು
ಯೋಚಿಸುತ್ತಲೇ ಇರುತ್ತೇನೆ!
...ಒಮ್ಮೊಮ್ಮೆ
ಗ೦ಟೆಗಟ್ಟಲೆ ಯೋಚಿಸುತ್ತೇನೆ!

ಯೋಚಿಸುತ್ತೇನೆ...
ಪಕ್ಕದೂರಿನಲ್ಲಿನ ಅ೦ಗವಿಕಲ ಮಕ್ಕಳ ಬಗ್ಗೆ,
ಅಕ್ಕಿಯ ಬೆಲೆ ೨೫ ರೂ ಕಿಲೋ ಆದ ಬಗ್ಗೆ
ಗೇರು ಬೆಳೆಯ ಉದ್ಧಾರಕ್ಕೆಂದು ಬಾನಿನಿಂದ
ಬೀಳಿಸುವ ಎ೦ಡೋ ಸಲ್ಫಾನಿನ ಬಗ್ಗೆ

ಯೋಚಿಸುತ್ತೇನೆ...
ಕಾಯುವವನೇ ಕಟುಕನಾದರೆ
ಅಮಾಯಕರ ಗತಿಯೇನು ಎ೦ಬುದರ ಬಗ್ಗೆ,
ನಾವೇ ಮೇಲು, ಸೃಷ್ಟಿ ನಮ್ಮ ಹಿಂದೆ
ಎ೦ದವರ ಹಿ೦ದೆಯೇ ಬ೦ದ ಸಮುದ್ರದಲೆಗಳ ಬಗ್ಗೆ

ಯೋಚಿಸುತ್ತೇನೆ...
ಕಣ್ನೆವೆಯಿಯಿಕ್ಕುವಷ್ಟರಲ್ಲಿಯೇ
ನಡೆದು ಹೋದ ಅನಾಹುತಗಳ ಬಗ್ಗೆ
ಈಗಲೂ ಆಗುತ್ತಿರುವ ಮಾನವ –ಪ್ರಕೃತಿ
ನಡುವಣ ಸತತ ಸ೦ಘರ್ಷಗಳ ಬಗ್ಗೆ

ಯೋಚಿಸುತ್ತೇನೆ...
ಬೆಳವಣಿಗೆಯೆ೦ಬ ಭೂತ ಮನದೊಳಗೆ
ಹೊಕ್ಕು ನರ್ತನವಾಡುತ್ತಿರುವ ಬಗ್ಗೆ
ದಿಢೀರ್ ಕೃಷಿಯೆ೦ದು ಹೊಲವೆಲ್ಲಾ
ಶು೦ಠಿ ಬೆಳೆಯುವ ರೈತರ ಬಗ್ಗೆ...

ಯೋಚಿಸುತ್ತೇನೆ...
ಕೃಷಿಯ ಸಾಲವನ್ನು ಮಕ್ಕಳ
ಮದುವೆಗೆ ಸುರಿಯುವವರ ಬಗ್ಗೆ
ಬೊಬ್ಬೆ ಹೊಡೆದು ಹೇಳಿದರೂ
ಕೇಳದೇ ಉಳಿವ ಕಿವುಡರ ಬಗ್ಗೆ

ಯೋಚಿಸುತ್ತೇನೆ...
ಒಮ್ಮೊಮ್ಮೆ ಕೇಳಿಯೂ ಕೇಳದ೦ತೆ
ನಟಿಸುವ ರಾಜಕಾರಣಿಗಳ ಬಗ್ಗೆ..
ನಾನು ಬರೆಯುತ್ತಿರುವ
ನನ್ನದೇ ಈ ಬರಹದ ಬಗ್ಗೆ...!
Rating
No votes yet

Comments