ವಾಕ್ಪಥ ಎರಡನೆಯ ಹೆಜ್ಜೆ : ಎರಡನೆಯ ಗೋಷ್ಠಿ ಯ ಆಹ್ವಾನ ಪತ್ರ - ಭಾನುವಾರ ಎಪ್ರಿಲ್ ೧೦ ರಂದು.
ನಲ್ಮೆಯ ಸಂಪದಿಗರೇ,
ಶ್ರೀಮಾನ್ ಪ್ರಭು ಮೂರ್ತಿಯವರ ಕಲ್ಪನೆಯ ಕೂಸಾದ ವಾಕ್ಪಥದ ಎರಡನೆಯ ಹೆಜ್ಜೆ ಯ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ. ಇದು ವಾಕ್ಪಥದ ಎರಡನೆಯ ಗೋಷ್ಠಿ. ಈ ಮೊದಲೇ ತಿಳಿಸಿದಂತೆ ಎಪ್ರಿಲ್ ೧೦ ಭಾನುವಾರ ಬೆಳಗ್ಗೆ ನಡೆಯಲಿದೆ. ಕಾರ್ಯಕ್ರಮದ ವಿವರವನ್ನು ದಯವಿಟ್ಟು ಗಮನಿಸಿ. ಉತ್ತಮ ಗೋಷ್ಠಿಗಳ ಮಟ್ಟದಲ್ಲಿ ಸತತ ಪ್ರಯತ್ನದ ಮೂಲಕ ಖಂಡಿತ ವಾಕ್ಪಥದ ಗೋಷ್ಠಿಯನ್ನೂ ಮುಂಬರುವ ದಿನಗಳಲ್ಲಿ ನಿರ್ವಹಿಸಬಹುದು. ಎಲ್ಲರ ಪ್ರೋತ್ಸಾಹ ಮತ್ತು ಉಪಯುಕ್ತ ವಿಮರ್ಶೆಗಳು ಆ ದಿಕ್ಕಿನಲ್ಲಿ ನಾವು ಮುನ್ನಡೆಯಲು ತುಂಬಾ ಸಹಾಯಕಾರಿಯಾಗಿರುತ್ತವೆ.
ಮೊದಲ ಗೋಷ್ಟಿಗೆ ಕಾರಣಾಂತರಗಳಿಂದ ಹಾಜರಾಗದಿದ್ದವರಿಗೆ ಮೊದಲೇ ತಮ್ಮ ತಾರೀಖು ಪಟ್ಟಿಯಲ್ಲಿ ಗುರುತು ಮಾಡಿಕೊಳ್ಳಲು ತಿಳಿಸಲಪೇಕ್ಷಿಸುವೆ. ಆಸಕ್ತರಿಗೆಲ್ಲಾ ಹಾರ್ದಿಕ ಸುಸ್ವಾಗತ.
ದಯವಿಟ್ಟು ನಿಮ್ಮ ಹಾಜರಿಯನ್ನು vakpatha@googlegroups.com ಇಲ್ಲಿಗೆ ಈ-ಮೇಯ್ಲ್ ಕಳಿಸಿ ದಾಖಲು ಮಾಡಿಕೊಂಡರೆ ತುಂಬಾ ಉಪಕಾರವಾಗುತ್ತದೆ.
ವಾಕ್ಪಥ : ಎರಡನೆಯ ಹೆಜ್ಜೆ
ಎಪ್ರಿಲ್ ೧೦, ಭಾನುವಾರ, ಬೆಳಗ್ಗೆ ೧೦ - ೧೨
ಸೃಷ್ಟಿ ವೆಂಚರ್ಸ್, ಪುಳಿಯೋಗರೆ ಪಾಯಿಂಟ್ ಮೇಲೆ, ಇ. ಎ. ಟಿ. ರೋಡ್, ಬಸವನಗುಡಿ
ಕಾರ್ಯಕ್ರಮದ ವಿವರ
ಆಗಮನ : ೧೦ ರಿಂದ ೧೦:೧೫
ದಯವಿಟ್ಟು ಸಮಯಕ್ಕೆ ಸರಿಯಾಗಿ ಆಗಮಿಸಿ. ಸಮಯಪಾಲನೆ ಗೋಷ್ಠಿಯ ಆದ್ಯ ಕರ್ತವ್ಯ.
=============== ಗೋಷ್ಠಿ : ನಿರ್ವಹಣೆ : ಬೆಳ್ಳಾಲ ಗೋಪಿನಾಥ ರಾವ್. ===============
ಪ್ರಾರಂಭ : ೧೦:೧೫
ಪ್ರಸ್ಥಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ದಾರಿಗಳ ವಿತರಣೆ, ಇತ್ಯಾದಿ: ಬೆಳ್ಳಾಲ ಗೋಪಿನಾಥ ರಾವ್ . : ೫ ನಿಮಿಷ
ಭಾಷಣಗಳು :
ಮೊದಲನೆಯ ಭಾಷಣಕಾರರ ಪರಿಚಯ : ಬೆಳ್ಳಾಲ ಗೋಪಿನಾಥ ರಾವ್ : ೨ ನಿಮಿಷ
ಮೊದಲನೆಯ ಭಾಷಣ :ಶ್ರೀಯುತ ರಘು ಎಸ್. ಪಿ : ೬ ನಿಮಿಷ
ಎರಡನೆಯ ಭಾಷಣಕಾರರ ಪರಿಚಯ : ಬೆಳ್ಳಾಲ ಗೋಪಿನಾಥ ರಾವ್ : ೨ ನಿಮಿಷ
ಎರಡನೆಯ ಭಾಷಣ: ಶ್ರೀಯುತ ಹರೀಶ್ ಅತ್ರೇಯ: ೬ ನಿಮಿಷ
ವಿಮರ್ಶೆಗಳು :
ಮೊದಲನೆಯ ಭಾಷಣದ ವಿಮರ್ಶೆ : ಹೊಳೆನರಸೀಪುರ ಮಂಜುನಾಥ : ೨ ನಿಮಿಷ
ಎರಡನೆಯ ಭಾಷಣದ ವಿಮರ್ಶೆ : ಹೊಳೆನರಸೀಪುರ ಮಂಜುನಾಥ : ೨ ನಿಮಿಷ
ಆಶುಭಾಷಣಗಳು :
೧೫ ನಿಮಿಷ : ಪ್ರತಿಯೊಬ್ಬ ಆಶುಭಾಷಣಗಾರರಿಗೂ ೨ ನಿಮಿಷ (ನಿರ್ವಹಣೆ : ಪ್ರಭು ಮೂರ್ತಿ)
ಬೆನ್ನುಡಿ, ಮುಕ್ತಾಯ : ಬೆಳ್ಳಾಲ ಗೋಪಿನಾಥ ರಾವ್. : ೨ ನಿಮಿಷ
ಮುಕ್ತಾಯ : ೧೧:೦೦ರ ಒಳಗೆ
=============== ಗೋಷ್ಠಿಯ ನಂತರ ===============
ಆಸಕ್ತರು ಇದರಲ್ಲೂ ಪಾಲ್ಗೊಳ್ಳಬಹುದು
ಪ್ರಾರಂಭ : ೧೧:೧೫
ಮುಂದಿನ ಗೋಷ್ಠಿಯ ಕುರಿತು ಸಮಾಲೋಚನೆ : ೧೫ ನಿಮಿಷ
ಸಂಘದ ಮುಂದಿನ ಹೆಜ್ಜೆಗಳ ಕುರಿತು ಚಿಂತನೆ : ೩೦ ನಿಮಿಷ
ದಯವಿಟ್ಟು ನಿಮ್ಮ ಹಾಜರಿಯನ್ನುvakpatha@googlegroups.com ಇಲ್ಲಿಗೆ ಈ-ಮೇಯ್ಲ್ ಕಳಿಸಿ ದಾಖಲು ಮಾಡಿಕೊಂಡರೆ ತುಂಬಾ ಉಪಕಾರವಾಗುತ್ತದೆ.
Comments
ಉ: ವಾಕ್ಪಥ ಎರಡನೆಯ ಹೆಜ್ಜೆ : ಎರಡನೆಯ ಗೋಷ್ಠಿ ಯ ಆಹ್ವಾನ ಪತ್ರ - ...
ಉ: ವಾಕ್ಪಥ ಎರಡನೆಯ ಹೆಜ್ಜೆ : ಎರಡನೆಯ ಗೋಷ್ಠಿ ಯ ಆಹ್ವಾನ ಪತ್ರ - ...