ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨
ಲ್ಯಾಪ್ಟಾಪಿನಲ್ಲಿ ಹಾಕಿದ ಎದುರಿಗೆ ಕಂಡ ಮಲೆನಾಡಿನ ಚಿತ್ರವನ್ನು ನೋಡುತ್ತಾ ಹಾಗೆಯೇ ಹಿಂದೆ ಕುರ್ಚಿಗೆ ಒರಗಿ ಕಾಫಿಯನ್ನು ಹೀರುತ್ತಾ, ತನ್ನ ಊರು, ಮಲೆನಾಡಿನ ಸುಂದರ ಪರಿಸರ, ಅಲ್ಲಲ್ಲಿ ಒಂದೊಂದು ಮನೆ, ಸುತ್ತಲೂ ಕಾಡು, ಮನೆಯ ಪಕ್ಕ ಹರಿಯುವ ಸಣ್ಣ ಹೊಳೆ, ಅಲ್ಲೆಲ್ಲೋ ಹಕ್ಕಿಗಳ ಸದ್ದು, ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನು ಮನೆಯ ಹೊರಗಡೆ ಚಾಚಿ ಅಂಗಳಕ್ಕೆ ಬಂದಾಗ ಅಜ್ಜಿ ಕೂಗಿದರೂ ಕೇಳದೆ ಎದುರಿಗೆ ಬಂದ ಆ ಪುಟ್ಟ ಕರುವನ್ನು ತನ್ನ ಎಳೆಯ ಕೈಗಳಿಂದ ಮುಟ್ಟುವ ಬಯಕೆ, ತನ್ನ ಗೆಳೆಯರೊಡಗೂಡಿ ಆಡಿದ ಗೋಲಿ ಬುಗುರಿ ಲಗೋರಿ ಮರಕೋತಿಯಾಟಗಳು, ಹೊಳೆಗೆ ಹೋಗಿ ಗಾಣ ಹಾಕಿ ಹಿಡಿದ ಮೀನುಗಳು, ಕಾಡಿಗೆ ನುಗ್ಗಿ ಚಾಟಿಬಿಲ್ಲಿನಿಂದ ಹೊಡೆದ ಹಕ್ಕಿ, ಹಕ್ಕಿ ಬಿದ್ದಾಗ ಸಂಭ್ರಮಿಸಿದ ಕ್ಷಣ, ಅಮ್ಮನಿಗೆ ಹೋಗಿ ತೋರಿಸಿದಾಗ ಪಾಪದ ಹಕ್ಕಿಯನ್ನು ಹೊಡೆದದ್ದಕ್ಕೆ ಬೈಸಿಕೊಂಡು ತಾನು ಊಟ ಮಾಡುವುದಿಲ್ಲ ಎಂದು ಸಿಟ್ಟು ಮಾಡಿಕೊಂಡು ಹೋದದ್ದು, ಬೇರೆಯವರ ತೋಟದಲ್ಲಿ ಹಲಸಿನಹಣ್ಣು ಕದಿಯಲು ಹೋಗಿ ಮರದಿಂದ ಕೆಳಗಿಳಿಸಿ ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ಆ ತೋಟದ ಯಜಮಾನ ಬಂದಿದ್ದು, ಅವರಿಂದ ಸಿಕ್ಕಾಪಟ್ಟೆ ಬೈಸಿಕೊಂಡಿದ್ದು ಆಮೇಲೆ ಅವರೂ ಒಟ್ಟಿಗೆ ತಿಂದದ್ದು, ಶಾಲೆಗೆ ಹೋಗೋದಕ್ಕೆ ತಪ್ಪಿಸಿಕೊಳ್ಳಬೇಕು ಎಂದುಕೊಂಡು ಅಮ್ಮನಿಗೆ ಹೋಗೋ ದಾರಿಯಲ್ಲಿರೋ ಒಬ್ಬರ ಮನೆಯಲ್ಲಿ ನಾಯಿ ಇದೆ ಎಂದು ಸುಳ್ಳು ಹೇಳಿದರೂ ಅಮ್ಮ ಕೇಳದೆ ಅವಳೊಟ್ಟಿಗೆ ಕರೆದುಕೊಂಡು ಹೋಗಿ ಅದ್ಯಾವ ನಾಯಿ ತೋರಿಸು ಅಂತ ಕೇಳಿ ಅಲ್ಲಿಲ್ಲದ್ದು ಗೊತ್ತಾಗಿ ಸುಳ್ಳು ಹೇಳಿದ್ದಕ್ಕೆ ಶಾಲೆಯವರೆಗೆ ಕೋಲಿನಲ್ಲಿ ಹೊಡೆದುಕೊಂಡು ಹೋಗಿದ್ದು, ಅಮ್ಮ ಮನೆಗೆ ಬರುವ ಮೊದಲೇ ಮನೆಗೆ ಬಂದಿದ್ದು, ಶಾಲೆಯಲ್ಲಿ ಇಂಜೆಕ್ಷನ್ ಕೊಡ್ತಾರೆ ಅಂತ ತಿಳಿದ ತಕ್ಷಣ ಅಲ್ಲಿಂದ ಓಡಿ ಹೋಗಿದ್ದು, ಮಳೆ ಬರುವಾಗ ಕೊಡೆ ಹಾರಿಹೋಗುತ್ತಿದ್ದ ಕಾರಣ ಅದನ್ನು ಮಡಿಸಿ ಮಳೆಯಲ್ಲೇ ನೆನೆದುಕೊಂಡು ಮನೆಗೆ ಬಂದದ್ದು, ಶಿವರಾತ್ರಿಯ ಪ್ರಸಾದ ತೆಗೆದುಕೊಂಡು ಬರುವಾಗ ದಾರಿಯಲ್ಲಿ ಮನೆಯ ದನ ಎಲ್ಲೋ ಓಡಿಹೋಗುತ್ತಿದ್ದದ್ದನ್ನು ನೋಡಿ ಪ್ರಸಾದವನ್ನು ಮನೆಯ ಕೆಲಸಕ್ಕ ಬರುವ ಹೆಂಗಸೊಬ್ಬಳಿಗೆ (ದಲಿತ ಮಹಿಳೆ) ಕೊಟ್ಟದ್ದನ್ನು ನೋಡಿದ ದೊಡ್ಡಮ್ಮನಿಂದ ಹಿಗ್ಗಾಮುಗ್ಗಾ ಬೈಗುಳ, ಮಳೆಗಾಲದಲ್ಲಿ ನೇಗಿಲು ಹಿಡಿದುಕೊಂಡು ಬೇಸಾಯ ಮಾಡಲು ಹೋಗಿ ಗದ್ದೆಯಲ್ಲಿ ಬಿದ್ದು ಮೈಯೆಲ್ಲಾ ಗೊಚ್ಚೆ, ಬೇಸಾಯ ಮುಗಿದ ಮೇಲೆ ಅಲ್ಲೇ ಮರದ ಕೆಳಗೆ ಗೋಣಿ ಚೀಲವನ್ನು ಮೈಮೇಲೆ ಹೊದ್ದುಕೊಂಡು ಅವುಚಿ ಕುಳಿತು ತಿಂದ ಬೆಚ್ಚನೆಯ ರೊಟ್ಟಿ, ಆ ಚಳಿಯಲ್ಲಿ ಕುಡಿದ ಬಿಸಿ ಬಿಸಿ ಬೆಲ್ಲದ ಕಾಫಿ, ತನ್ನ ಕಾಯಕ ಮುಗಿಸಿ ಮೇಯಲು ಹೊರಟ ಎತ್ತುಗಳು, ಕಾಫಿ ಕುಡಿದು ದನ ಕಾಯಲು ಹೊರಟ ಇವನು, ದೂರದಲ್ಲಿ ಗೋಲಿ ಆಡುತ್ತಿದ್ದವರನ್ನು ಕಂಡು ತಾನು ಸೇರಿ, ಇತ್ತ ಹೊಟ್ಟೆ ತುಂಬಿದ ಎತ್ತುಗಳು ಕಾಡಿಗೆ ಓಟ, ನೋಡಿದ ಇವನು ಒಂದೇ ಸಮನೆ ಕಾಡಿಗೆ ನುಗ್ಗಿ ವಾಪಸು ಕರೆತಂದ ಎತ್ತುಗಳು, ಇಲ್ಲದಿದ್ದರೆ ನಾಳಿನ ಬೇಸಾಯಕ್ಕೆ ರಜೆ, ಮಳೆಗಾಲ ಮುಗಿದು ಬೇಸಗೆ ಕಾಲಿಡುವ ಹೊತ್ತಿಗೆ ಎಲ್ಲೆಲ್ಲೂ ಭತ್ತದ ತೆನೆಗಳು , ಆಳುಗಳೊಡನೆ ತಾನೂ ಕುಡುಗೋಲು ಹಿಡಿದು ಕೊಯ್ದ ತೆನೆ, ಅಂಗಳಕ್ಕೆ ಹರಡಿದ ಭತ್ತದ ರಾಶಿ, ಒಕ್ಕಲಾಟಕ್ಕೆ ಎತ್ತುಗಳನ್ನು ತಂದು ಭತ್ತದ ರಾಶಿಯ ಮೇಲೆ ಸುತ್ತಿಸಿ ತನ್ನ ಓರಗೆಯವರೊಂದಿಗೆ ತಾನು ಪಲ್ಟಿ ಹೊಡೆದು ಸಂಭ್ರಮಿಸಿದ ಪರಿ, ಬೇಸಗೆ ರಜೆ ಮುಗಿದು ಶಾಲೆಗೆ ಹೋಗುವ ದುಃಖ, ಹೊಸ ತರಗತಿಗೆ ಹೋಗುವ ಸಂಭ್ರಮ, ಶಾಲೆ ಮುಗಿದು ನಡೆದುಕೊಂಡು ಹೋಗುತ್ತಿರುವಾಗ ಪೇಟೆಯಿಂದ ಬಂದ ಬಸ್ಸನ್ನೇ ನೋಡುತ್ತಾ ನಿಂತದ್ದು, ತನ್ನ ಅಜ್ಜ ಅದರಿಂದ ಇಳಿದಾಗ ಆದ ಸಂತೋಷ, ಅಜ್ಜ ತಂದುಕೊಟ್ಟ ವಿವಿಧ ಚಿತ್ರದ ಬಿಸ್ಕತ್ಗಳು, ಅಲ್ಲೇ ಎಲ್ಲರಿಗೂ ಹಂಚಿ ತಾನು ತಿಂದದ್ದು, ಏನೋ ಮಗಾ ಮನೆಗೆ ಹೋಗಲ್ವ ಅಂತ ಪಕ್ಕದವನು ಅಂದಾಗ ಎಚ್ಚರವಾಗಿ ತನ್ನ ಲ್ಯಾಪ್ಟಾಪನ್ನು ಮಡಿಸಿ ಬ್ಯಾಗಿಗೆ ಹಾಕಿ ಕಾರಿನಲ್ಲಿ ಕುಳಿತು ಪ್ರತಿದಿನ ಹೀಗೆ ನಡೆಯುವ ಜೀವನ, ಎಂದೂ ನಿಲ್ಲದ ಟ್ರಾಫಿಕ್ ಎಂಬ ಮಹಾ ಸಾಗರದಲ್ಲಿ ಲೀನವಾದನು.
ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೧
http://sampada.net/%E0%B2%9C%E0%B3%80%E0%B2%B5%E0%B2%A8%E0%B2%B5%E0%B3%86%E0%B2%82%E0%B2%A6%E0%B2%B0%E0%B3%86-%E0%B2%85%E0%B2%B2%E0%B3%8D%E0%B2%AA%E0%B2%B5%E0%B2%BF%E0%B2%B0%E0%B2%BE%E0%B2%AE%E0%B2%97%E0%B2%B3-%E0%B2%B8%E0%B2%82%E0%B2%A4%E0%B3%86-%E0%B2%95%E0%B3%8A%E0%B2%A8%E0%B3%86%E0%B2%97%E0%B3%8A%E0%B2%82%E0%B2%A6%E0%B3%81-%E0%B2%AA%E0%B3%82%E0%B2%B0%E0%B3%8D%E0%B2%A3%E0%B2%B5%E0%B2%BF%E0%B2%B0%E0%B2%BE%E0%B2%AE-%E0%B3%A7
Comments
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨
In reply to ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨ by kamath_kumble
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨
In reply to ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨ by ನಂದೀಶ್ ಬಂಕೇನಹಳ್ಳಿ
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨
In reply to ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨ by Chikku123
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨
In reply to ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨ by ನಂದೀಶ್ ಬಂಕೇನಹಳ್ಳಿ
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨
In reply to ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨ by kavinagaraj
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨
In reply to ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨ by gopinatha
ಉ: ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೨