ಸ್ವರ್ಗಸುಖಕ್ಕಾಗಿ ಸ್ವರ್ಗವಾಸಿಗಳಾಗುವುದು ನರಕವಾಸವೇ - ಗಾದೆಗೊಂದು ಗುದ್ದು--೭೩
(೩೭೧) ಚಟವು ವ್ಯಸನದಿಂದ ಉಂಟಾಗುತ್ತದೆ. ವ್ಯಸನವೆಂದರೆ ಅತಿಗೆ ಹೋಗುವುದು. ನೂರು ವರ್ಷಕ್ಕಿಂತಲೂ ಹೆಚ್ಚಿಗೆ ಬದುಕುವುದೆಂದರೆ ಅತಿಗೆ ಹೋಗುವುದು, ಅಂದರೆ ವ್ಯಸನಕ್ಕೆ ದಾರಿಮಾಡಿಕೊಡುವುದು. ವ್ಯಸನಕ್ಕೆ ಮೂಲ ಚಟ. ಸುದೀರ್ಘ ಜೀವನವೆಂದರೆ ಚಟದ ಸುದೀರ್ಘಾವಸ್ಥೆಯೇ ಹೌದು!
(೩೭೨) ಚಟಕ್ಕೆ ಎಂದೂ ದಾಸನಾಗದವನ ರಸಿಕತನವು ಉಪ್ಪಿಲ್ಲದ ಊಟವನ್ನು ಸುಗ್ರಾಸ ಭೋಜನಕ್ಕೆ ಹೋಲಿಸುವ ಮಟ್ಟಕ್ಕೆ ಇಳಿದುಬಿಡುತ್ತದೆ!
(೩೭೩) ಸ್ವರ್ಗಸುಖವನ್ನು ಬಹಳ ಹೊತ್ತು ನಾವು ಪಡೆಯಲಾಗುವುದಿಲ್ಲ ಏಕೆಂದರೆ ನಾವು ಸ್ವರ್ಗವಾಸಿಗಳಾದ ಕೂಡಲೆ ಅದು ನರಕಸದೃಶ್ಯವಾಗಿಬಿಡುತ್ತದೆ!
(೩೭೪) ಹೆಣ್ಣ ಕಣ್ಣ ಬಣ್ಣಿಸುವ ಕಲಾವಿದನ ಸೃಷ್ಟಿಯನ್ನೇ ಗ್ರಹಿಸಲಾಗದ ಆಕೆಯ ಅಸಹಾಯಕತೆಗೆ ಸೃಷ್ಟಿಯೆ ಕುರುಡಾಗುವುದು ಜಾಹಿರಾತು ಜಗತ್ತಿನಲ್ಲಿ ಮಾತ್ರ!
(೩೭೫) ಮದುವೆಯೆಂಬ ತಪ್ಪನ್ನು ಎಂದೂ ಪುನರಾವರ್ತಿಸಬೇಡ. ಏಕೆಂದರೆ ಅದಕ್ಕಾಗಿ ಕಾದಿರುವ ಶಿಕ್ಷೆಯಲ್ಲಿ ಹೆಚ್ಚೇನೂ ಬದಲಾವಣೆಯಾಗಲಾರದು!
Rating
Comments
ಉ: ಸ್ವರ್ಗಸುಖಕ್ಕಾಗಿ ಸ್ವರ್ಗವಾಸಿಗಳಾಗುವುದು ನರಕವಾಸವೇ - ಗಾದೆಗೊಂದು ...