ಒಮ್ಮೊಮ್ಮೆ...!

ಒಮ್ಮೊಮ್ಮೆ...!

ಒಮ್ಮೊಮ್ಮೆ...!

 

ಒಮ್ಮೊಮ್ಮೆ
ನನ್ನದೇ ಮಾತೃಭಾಷೆಯಲ್ಲಿ
ಅರ್ಥಪೂರ್ಣವಾಗಿ ಬರೆಯಲು
ನಾನೇ ಅಸಮರ್ಥನಾದಂತೆ ...

ಕೆಲವೊಮ್ಮೆ
ನಾನು ಎಣಿಸುವುದೊಂದು
ನಾನು ಬರೆಯುವುದೊಂದು
ಓದುಗ ಅರ್ಥೈಕೊಳ್ಳುವುದೊಂದು ...

ಒಮ್ಮೊಮ್ಮೆ
ಯೋಚಿಸುವೆ ನಾ ಎಣಿಸಿದಂತೆಯೇ
ಬರೆದು, ನಾ ಬರೆದಂತೆಯೇ ನನ್ನ
ಓದುಗ ಅರ್ಥೈಸಿಕೊಳ್ಳಬೇಕೆಂದು...

ಮತ್ತೊಮ್ಮೆ
ಥಟ್ಟನೇ ಮೇಲಿರುವಾತನ ನೆನಪಾಗಿ
ಒಪ್ಪಿಕೊಳ್ಳುತ್ತೇನೆ ಹೇಗದು ಸಾಧ್ಯ
ಎಲ್ಲವೂ ನಾನೆಣಿಸಿದಂತೆಯೇ ಇರಲು, ಎಂದು...!
**************************

Rating
No votes yet

Comments