ಜಂಗಮನಾಗದೆ

ಜಂಗಮನಾಗದೆ

 ಬದುಕ ಜಾತ್ರೆಯ ತುಂಬಾ

ಅದೆಷ್ಟು ಮುಖಗಳು

ಯಾವ ಮುಖವೂ 

ಭರವಸೆ ಆಗದೆ 

ಉಳಿದಿರುವಾಗ 

 

ಊರಿಂದೂರಿಗೆ 

ನೋವಿನಿಂದ ನೋವಿಗೆ 

ಚಿಂತನೆಗಳೊಂದಿಗೆ 

ಕನವರಿಕೆಗಳೊಂದಿಗೆ 

ನೆನಪುಗಳೊಂದಿಗೆ 

ಜೋಳಿಗೆ ಹಿಡಿದು 

ಎದೆಯ ರಾಗಗಳಿಗೆ 

ಕಾವ್ಯದ ಬಟ್ಟೆ 

ತೊಡಿಸುತ್ತ ಇರುವಾಗ 

 

ಜಗದ ಸಕಲರನ್ನೂ 

ಪ್ರೀತಿಸುವ 

ಎಲ್ಲ ಮತಗಳಲ್ಲೂ 

ಇನ್ನೂ ಮನುಷ್ಯತ್ವ 

ಹುಡುಕುತ್ತಿರುವಾಗ 

 

ನನ್ನದೇ ಹಾದಿಯಲ್ಲಿ 

ನಡೆಯುತ್ತಾ ಇರುವಾಗ 

ಕೊನೆಗೊಮ್ಮೆ ಸಾವಿನ 

ಮನೆಯ ಒಡಲಿಂದ 

ಬಿಟ್ಟು ಹೋದವರ 

ನೆನಪಲ್ಲಿರುವಾಗ 

ಇಲ್ಲಿರಲಾರೆ ಅಲ್ಲಿ 

ಹೋಗಲಾರೆ 

ಎಂಬ ಸಂದಿಗ್ಧದಲ್ಲಿರುವಾಗ

 

ಕೇಳದ ಯಾವುದೋ 

ಮುರಳೀ ಗಾನಕ್ಕೆ

ಕಿವಿಯಾಗುವವರೆಗೆ 

ಜಂಗಮನಾಗದೆ 

ಉಳಿವಿಲ್ಲ ನನಗೆ

 

 

Rating
No votes yet

Comments