ಅರ್ಕನಿಂದ ರಕ್ಷಿಸಿದ ಅರ್ಕ

ಅರ್ಕನಿಂದ ರಕ್ಷಿಸಿದ ಅರ್ಕ


ಬಸ್ಸಿನಿಂದ ಇಳಿದು ಡಬಲ್ ರೋಡ್‌ನಲ್ಲಿ ಸ್ವಲ್ಪ ಮುಂದಕ್ಕೆ ಬಂದಾಗ ಬ್ರಿಡ್ಜ್ ಸಿಗುತ್ತದೆ. ಅದನ್ನು ದಾಟಿ ಫಸ್ಟ್ ಲೆಫ್ಟ್‌ನಲ್ಲಿ ಅರ್ಧ ಫರ್ಲಾಂಗ್ ಹೋದರೆ ರೈಟ್‌ಗೆ ಗುಡ್ಡ ಕಾಣಿಸುವುದು. ಆ ಗುಡ್ಡೆಯ ಮೇಲೆ ಎಡಕ್ಕೆ ಎರಡು ಕ್ರಾಸ್ ನಂತರ ನಾಲ್ಕನೇ ಸೈಟ್‌ಗೆ ಹೋಗಬೇಕಿತ್ತು.


 


ಈ ಮೆಟ್ರೋ ಕೆಲಸದಿಂದಾಗಿ ಬೆಂಗಳೂರಲ್ಲಿ ೨೦ ಕಿ.ಮೀ. ಬಸ್ ಪ್ರಯಾಣ ಎಂದರೆ ೫೦ ಕಿ.ಮೀ. ಪ್ರಯಾಣ ಮಾಡಿದ ಹಾಗೇ.. ಅಲ್ಲಿಂದ ಈ ಲೆಫ್ಟ್-ರೈಟ್ ಮಾರ್ಚ್‌ಫಾಸ್ಟ್ ಮಾಡಿ ಗುಡ್ಡದ ಬಳಿ ಬಂದಾಗ, ನಾನು ತಂದಿದ್ದ ನೀರಿನ ಬಾಟಲು, ತಿಪ್ಪಗೊಂಡನ ಹಳ್ಳಿ ಕೆರೆ ತರಹ ತಳ ಮುಟ್ಟಿತ್ತು.


 


ಇನ್ನು ಗುಡ್ಡ ಹತ್ತಬೇಕು. ಸುಡು ಬಿಸಿಲು ಬೇರೆ. ನೆರಳಲ್ಲಿ ನಿಂತು ಸುಧಾರಿಸಿಕೊಳ್ಳುವಾ ಎಂದರೆ ಒಂದೇ ಒಂದು ಮರ ಕಾಣಿಸದು. ಉದ್ದನೆಯ ರಸ್ತೆ, ಅಕ್ಕಪಕ್ಕದಲ್ಲಿ ಲೈಟುಕಂಬಗಳು ಅಷ್ಟೇ ಇದೆ. ನನ್ನ ಪುಣ್ಯಕ್ಕೆ ಅಲ್ಲೊಂದು ಪೊದೆ ಬಿ.ಡಿ..ಯವರ ಕಣ್ಣಿಗೆ ಬಿದ್ದಿರಲಿಲ್ಲ! ಅರ್ಕ(ಸೂರ್ಯ)ನಿಂದ ರಕ್ಷಣೆ ನೀಡಿದ ಆ ಗಿಡದ ಹೆಸರೂ ಸಹ "ಅರ್ಕ"!(Calatropis procera).



 ಗೊಂಚಲು ಗೊಂಚಲು ಹೂ ಬಿಟ್ಟಿತ್ತು. ಬಹಳ ಸುಂದರ ಹೂ. ಐದು ದಳಗಳ ನಡುವೆ ಕಿರೀಟ (crown flower) ಇರುವಂತೆ ಕಾಣಿಸುವುದು! ಬಂದ ಕೆಲಸ ಮರೆತು ಈ ಹೂವನ್ನು ನೋಡುವುದರಲ್ಲಿ ಮಗ್ನನಾಗಿದ್ದೆ. ಅಪರೂಪಕ್ಕೊಮ್ಮೆ ಗಾಳಿ ಬಂದಾಗ ಗಿಡ ಬಗ್ಗಿ ಬಗ್ಗಿ ಆ ಕಿರೀಟವನ್ನು ನನಗೆ ತೊಡಿಸಲು ಪ್ರಯತ್ನಿಸುತ್ತಿದೆಯೋ ಏನೋ ಎಂದು ನನಗನಿಸುತ್ತಿತ್ತು.


ಅರ್ಕ ಗಿಡದಲ್ಲಿ ಶ್ವೇತಾರ್ಕ(ಅಲರ್ಕ, ರಾಜಾರ್ಕ, Calatropis gigantia) ಎಂಬ ಒಂದು ವಿಧವಿದೆ. ಅದರ ಬೇರು "ಗಣಪತಿ"ಯ ಆಕಾರದಲ್ಲಿರುವುದರಿಂದ, ಆ ಬೇರನ್ನು ಮನೆಯಲ್ಲಿಟ್ಟುಕೊಂಡು ಪೂಜಿಸಿದರೆ ಬಡತನ, ಕಷ್ಟ, ಜಗಳ, ಭಯ ಇತ್ಯಾದಿ ತೊಂದರೆಗಳಿರುವುದಿಲ್ಲ- 


http://devshoppe.com/SwetarkGanapati.html 


http://www.youtube.com/watch?v=DGXsJnpw_vg 


ಮನೆಗೆ ಬಂದು ಅರ್ಕದ ಬಗ್ಗೆ ಗೂಗ್‌ಲ್ ಸರ್ಚ್ ಮಾಡಿದಾಗ ಈ ವಿಷಯ ಗೊತ್ತಾಯಿತು. ಮೊದಲೇ ಗೊತ್ತಿರುತ್ತಿದ್ದರೆ, ನೆರಳು ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿ, ಗಿಡವನ್ನು ಬುಡಸಹಿತ ಕಿತ್ತು ಬೇರನ್ನು ಗಮನಿಸಬಹುದಿತ್ತು..


ಅರ್ಕದ ಔಷಧೀಯ ಉಪಯೋಗದ ಬಗ್ಗೆ ಇಲ್ಲಿ ಓದಿ- 


http://kn.wikipedia.org/wiki/%E0%B2%85%E0%B2%B0%E0%B3%8D%E0%B2%95


 


 


 


 

Rating
No votes yet

Comments