ನಾನು-ನನ್ನ ಟೀಚರ್

ನಾನು-ನನ್ನ ಟೀಚರ್

ನಮಸ್ಕಾರ ಎಲ್ಲರಿಗು 

ನಾನು ಪ್ರಾಥಮಿಕ ಶಾಲೆ ಅಲ್ಲಿದ್ದಾಗ ನಡೆದ ಒಂದು ಅನುಭವ.. ಸಂಪದ ಅಲ್ಲಿ ಇದು ನನ್ನ ಪ್ರಥಮ ಬರಹ ಅಂತ ಹೇಳಬಹುದು..

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಒಂದು ಗ್ರಾಮದ ಸರಕಾರಿ ಶಾಲೆಯಲ್ಲಿ ನಾನಾಗ 5 ನೆ ತರಗತಿ.

ಒಂದು ದಿನ ಮಧ್ಯಾನ ನಾನು ನನ್ನ ತರಗತಿ ಅಲ್ಲಿರುವವನ ಜೊತೆ ಜೋರಾಗಿ ಜಗಳ ಮಾಡಿಕೊಂಡೆ, ಇಬ್ರು ಹೊಡೆಯೋದೆಲ್ಲ ಮಾಡಿ ಆದಮೇಲೆ

ಇಬ್ರುನು ಶಿಕ್ಷಕರ ರೂಮಿಗೆ ಕರೆದರು. ಇನ್ನೊಬ್ಬ ಜೋರಾಗಿ ಅಳುತ ಇದ್ದ. ಆ ಸಮಯದಲ್ಲಿ ಮುಖ್ಯ ಶಿಕ್ಷಕರು(ಮೇಡಂ) ಇರಲಿಲ್ಲ.

ಗಣಿತ ಸರ್ ನಮ್ಮನು ವಿಚಾರಣೆಗೆ ತಗೊಂಡು ಕೋಲಿನಿಂದ ಹೊಡಿತ ಇದ್ರೂ, ಅದೇ ಸಮಯಕ್ಕೆ ಸರಿಯಾಗಿ ನಮ್ಮ   ಮುಖ್ಯ ಶಿಕ್ಷಕರು(ಮೇಡಂ) ಬಂದು

ಏನಾಯ್ತು ಅಂತ ಕೇಳಿ, ಹೊಡಿಯುವದನ್ನು ನಿಲ್ಲಿಸಿ ನಮಗೆ ಭುದ್ದಿ ಹೇಳಿ ಕಳ್ಸಿದ್ರು. ನಾ ಬದುಕಿಕೊಂಡೆ ಅಂತ ಮನಸಲ್ಲೇ ಅನ್ಕೊಂಡೆ :)

ಆ ದಿನ ಸಂಜೆ ೫.೩೦ ಗೆ ಮನೆಗೆ ಹೋದೆ, ಅಮ್ಮ ಎಲ್ಲ ರೀತಿಯಿಂದ ಸಿದ್ದವಾಗಿ ನಿಂತಿದ್ರು ಅನ್ಸುತೆ, ನಾ ಮನೆಗೆ ಹೋದ ತಕ್ಷಣ ಶಾಲೆ ಅಲ್ಲಿ ಜಗಳ ಮಾಡ್ತೀಯ ಅಂತ ಹಿಗ್ಗ ಮುಗ್ಗ ಹೊಡಿದ್ರು.

 

ಇದು ನಡೆದ ಕೆಲವು ವರ್ಷಗಳ (೧೩-೧೪ ವರ್ಷ) ನಂತರ ಅಮ್ಮಂಗೆ ಕೇಳ್ದೆ.

ನಾನು: ಅಮ್ಮ ನಾ ಶಾಲೆ ಅಲ್ಲಿದಾಗ ಈ ತರಹದ ಘಟನೆ ನಡಿದಿತು ನೆನಪಲ್ಲಿ ಇದೇನಾ ಅಂತ!!!!

ಅಮ್ಮ: ಹೌದು ನೆನಪಿದೆ.

ನಾನು: ಅವತ್ತು ಶಾಲೆ ಅಲ್ಲಿ ಹೊಡಿಯೋದ್ ತಪ್ಪಿಸಿದೆ ನೀನು, ನಾ ಖುಷಿ ಆಗಿದ್ದೆ, ಮತ್ತೆ ಮನೆಗೆ ಬಂದಮೇಲೆ ತುಂಬಾ ಹೊಡಿದೇ ಅಲ್ಲ ಯಾಕೆ??

ಅಮ್ಮ: ಶಾಲೆಲಿ ಟೀಚರ್ ಕೆಲಸ ಮಾಡ್ದೆ, ಮನೇಲಿ ಅಮ್ಮನ ಕೆಲಸ ಮಾಡ್ದೆ.

 

ಅವಾಗ ಏನೋ ಆನಂದ ಆಯಿತು ಅಮ್ಮ ಹೇಳಿದ್ದು ಕೇಳಿ, ಅದ್ಕೆ ಅಮ್ಮ ಇನ್ನು ಅದೇ ಶಾಲೇಲಿ ಟೀಚರ್ ಆಗಿ ಇನ್ನು ಕೆಲಸ ಮಾಡ್ತಿದಾರೆ. ( nearly 25 years in same school) and now am an software engineer

Comments