ನಮ್ಮ ಮಾತೆ
ಕವನ
ನಮ್ಮ ಮಾತೆ
ಅಳುತಿರುವ ಮೊಗ ನೋಡದಿರುವ ಕಂದಮ್ಮಗಳ
ಆಟ ಪಾಠವ ಕಂಡು ನಲಿದ ಮಾತೆ
ಅಳಲನೆಲ್ಲವ ನುಂಗಿ ಅಸುರತೆಗಳನು ಸಹಿಸಿ
ನಗುತ ದಿನಗಳೆದಿರುವ ವೀರಮಾತೆ
ಹುರುಳಿರದ ಹೆರವರಿಗೆ ಹಿರಿತನದ ಕರವೀವ
ಕುರುಡು ತರಳರ ಕಂಡು ಮರುಗಿದಾಕೆ
ಸ್ವಪ್ನವಾದುದು ಭಸ್ಮ ಕಾದಿರಲು ದುಸ್ವಪ್ನ
ನಿದ್ದೆ ಬಾರದೆ ಭಯದಿ ಮಲಗಿದಾಕೆ
ಸಿರಿಯುಂಡ ನೆನಪುಗಳು ಬರುತಿರಲು ಕರುಳಿನಲಿ
ಕೊರತೆಯಾದುದು ಪ್ರೇಮದೊರತೆಯಲ್ಲಿ
ಮೂಕವಾಗಲು ಮಾತು ರೋಧನವು ಒಳಗಾಗಿ
ನರಕವೆನಿಸಲು ನಿತ್ಯದಿರುಳಿನಲ್ಲಿ
ಬೆಳೆದ ಕುವರರ ನಡೆಗೆ ರೋಚಕತೆ ಬಂದಿರಲು
ನಗೆಯನೊಮ್ಮೆಗೆ ಮೊಗದಿ ತೋರದಿಹಳೇ
ವಿಧಿಯಾಟ ತೆರೆಗಳಚಿ ಸತ್ಯದರ್ಶನವಾಗೆ
ನಗುವ ಬಯಸಿಹಳಿಂದು ನಮ್ಮ ಮಾತೆ
- ಸದಾನಂದ
Comments
ಉ: ನಮ್ಮ ಮಾತೆ
In reply to ಉ: ನಮ್ಮ ಮಾತೆ by ananthaveera
ಉ: ನಮ್ಮ ಮಾತೆ
In reply to ಉ: ನಮ್ಮ ಮಾತೆ by sada samartha
ಉ: ನಮ್ಮ ಮಾತೆ
In reply to ಉ: ನಮ್ಮ ಮಾತೆ by saraswathichandrasmo
ಉ: ನಮ್ಮ ಮಾತೆ
ಉ: ನಮ್ಮ ಮಾತೆ
In reply to ಉ: ನಮ್ಮ ಮಾತೆ by aneeshsharma
ಉ: ನಮ್ಮ ಮಾತೆ
ಉ: ನಮ್ಮ ಮಾತೆ
In reply to ಉ: ನಮ್ಮ ಮಾತೆ by gopinatha
ಉ: ನಮ್ಮ ಮಾತೆ
ಉ: ನಮ್ಮ ಮಾತೆ
In reply to ಉ: ನಮ್ಮ ಮಾತೆ by raghumuliya
ಉ: ನಮ್ಮ ಮಾತೆ