ನಿದ್ರಾದೇವಿ ಮಹಾತ್ಮೆ.
ನಿದ್ರೆ ಇರದ ಮನುಷ್ಯ, ಮನುಷ್ಯನಾಗೆ ಇರುವುದಿಲ್ಲ. ನಿದ್ರೆ ಮನುಷ್ಯನಿಗೆ ಒಂಥರಾ ಔಷಧಿ ಇದ್ದ ಹಾಗೆ. ದಣಿದಿರುವ ದೇಹಕ್ಕೆ ನಿದ್ರೆ ಒಂಥರಾ ಸಂಜೀವಿನಿ ಇದ್ದ ಹಾಗೆ. ಬೆಳಗಿನಿಂದ ದುಡಿದು, ಓಡಾಡಿ ಬಳಲಿ ಮನೆಗೆ ಬಂದು ಊಟ ಮಾಡಿ ನೆಮ್ಮದಿ ಇಂದ ನಿದ್ರೆ ಮಾಡಿಬಿಟ್ಟರೆ ಸಾಕಪ್ಪ ಅಂತ ಇರುವವರಿಗೆ ಯಾವುದೋ ಕಾರಣದಿಂದ ಸರಿಯಾದ ಸಮಯಕ್ಕೆ ನಿದ್ರೆ ಮಾಡದೆ ಇದ್ದರೆ ಅವರು ತಮ್ಮ ಸಂಯಮ ಕಳೆದುಕೊಂಡವರಂತೆ ವರ್ತಿಸುತ್ತಾರೆ. ಯಾಕೆಂದರೆ ನಿದ್ರಾದೇವಿಯ ಮಹಾತ್ಮೆ ಅಂಥಹುದ್ದು. ಅದೇ ಸರಿಯಾದ ಸಮಯಕ್ಕೆ ಮಲಗಿ ಎದ್ದರೆ ಮನಸು, ದೇಹ ಎರಡೂ ಉಲ್ಲಸಿತವಾಗಿರುತ್ತದೆ. ನನ್ನ ಪ್ರಕಾರ ಮನುಷ್ಯನಿಗೆ ಪ್ರತಿ ದಿನವೂ ಹುಟ್ಟಿದ ಹಬ್ಬ. ಏಕೆಂದರೆ ಮನುಷ್ಯ ಮಲಗಿದಾಗ ಹೆಚ್ಚುಕಮ್ಮಿ ಅವನು ಸತ್ತಂತೆ ಲೆಕ್ಕ. ಅದೊಂದೇ ಸಮಯದಲ್ಲಿ ಮನುಷ್ಯ ತನ್ನ ದೇಹದ ಎಲ್ಲ ಅಂಗಾಂಗಗಳಿಗೂ ವಿಶ್ರಾಂತಿ ಕೊಟ್ಟು ಪ್ರಪಂಚದ ಗೊಡವೆ ಇಲ್ಲದೆ ತನ್ನದೇ ಆದ ಲೋಕದಲ್ಲಿ ಮಲಗಿರುತ್ತಾನೆ. ಮಲಗಿ ಎದ್ದಾಗ ಅವನು ಮತ್ತೆ ಹುಟ್ಟುತ್ತಾನೆ. ಈಗ ನಿದ್ರೆಯಲ್ಲಿ ಎಷ್ಟು ವಿಧವಾದ ನಿದ್ರೆ ಇದೆ ಎಂದು ಯೋಚಿಸಿದಾಗ ಹೊಳೆದ ಕೆಲವು ನಿದ್ರೆಯ ಬಗೆಗಳು ಈ ಕೆಳಗಿನಂತಿವೆ.
೧) ಮೈ ಮರೆತು ನಿದ್ರೆ ಮಾಡುವುದು : ಈ ನಿದ್ರೆ ಮಾಡಲು ಅದೃಷ್ಟ ಮಾಡಿರಬೇಕು. ಕೆಲವರು ಎಷ್ಟು ಚೆನ್ನಾಗಿ ನಿದ್ರೆ ಮಾಡುತ್ತಾರೆಂದರೆ ಅವರ ಪಕ್ಕದಲ್ಲಿ ನಗಾರಿ ಬಾರಿಸಿದರೂ ಕೇಳದಷ್ಟು ಪ್ರಶಾಂತವಾಗಿ ನಿದ್ರೆ ಮಾಡುತ್ತಾರೆ. ಈ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಹೀಗೆ ನಿದ್ರೆ ಮಾಡುವವರಿಗೆ ಜಾಗದ ಗೊಡವೆಯಿಲ್ಲ. ಯಾವುದೇ ಜಾಗವಾದರೂ ಸರಿ ಹಾಯಾಗಿ ಸುತ್ತಲಿನ ಪರಿವೆಯೇ ಇಲ್ಲದೆ ನಿದ್ರೆ ಮಾಡುತ್ತಾರೆ. ಹೀಗೆ ನಿದ್ರೆ ಮಾಡುವವರು ಹೆಚ್ಚು ಆರೋಗ್ಯವಾಗಿರುತ್ತಾರೆ. ಅಷ್ಟೇ ಉಲ್ಲಾಸದಿಂದಿರುತ್ತಾರೆ (ಆದರೆ ಕಾಲ್ ಸೆಂಟರ್ ನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ, ಯಾವುದೇ ರಾತ್ರಿ ಪಾಳಿ ಕೆಲಸ ಮಾಡುವವರೂ ಸಹ ಮೈ ಮರೆತೇ ನಿದ್ರೆ ಮಾಡಿದರೂ ಅವರು ಹೆಚ್ಚು ಆರೋಗ್ಯದಿಂದಿರಲ್ಲ.)
೨) ಅರ್ಧ ನಿದ್ರೆ : ಇದೊಂಥರ ವಿಚಿತ್ರ ನಿದ್ರೆ. ಮೈ ಮರೆತೇ ನಿದ್ರೆ ಮಾಡುತ್ತಿರುತ್ತಾರೆ ಆದರೆ ಇದ್ದಕ್ಕಿದ್ದಂತೆ ಎಚ್ಚರವಾಗಿಬಿಡುತ್ತಾರೆ. ಇಂಥದೇ ಕಾರಣ ಎಂದಿರುವುದಿಲ್ಲ, ಕೆಲವೊಮ್ಮೆ ಕನಸು, ಸಣ್ಣ ಶಬ್ದ, ಯಾವುದೋ ಯೋಚನೆ ಹೀಗೆ ಸರಿಯಾದ ಕಾರಣವಿರದೆ ಎದ್ದುಬಿದುತ್ತಾರೆ. ಆ ನಂತರ ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಹತ್ತಿರ ಕೂಡ ಸುಳಿಯುವುದಿಲ್ಲ. ಒಂಥರಾ ಪೇಚಾಡುತ್ತಿರುತ್ತಾರೆ. ಕಣ್ಣುಗಳು ಕೆಂಪಗೆ ಮಾಡಿಕೊಂಡು ಅರ್ಧ ಮನಸಿನಿಂದಿರುತ್ತಾರೆ.
೩) ಗೊರಕೆ ನಿದ್ರೆ : ಈ ನಿದ್ರೆಯವರಂತೂ ಎಷ್ಟೋ ಜನರ ನಿದ್ರೆ, ನೆಮ್ಮದಿ ಕೆಡಿಸಿ ತಾವು ಮಾತ್ರ ಹಾಯಾಗಿ ಸುಖವಾಗಿ ಏನೋ ಆಗಿಯೇ ಇಲ್ಲವೆಂಬಂತೆ ನಿದ್ರೆ ಮಾಡುತ್ತಾರೆ. ಕೆಲವರು ಮಲಗಿ ಸುಮಾರು ಹೊತ್ತಾದ ನಂತರ ಗೊರಕೆ ಶುರು ಮಾಡಿದರೆ, ಇನ್ನು ಕೆಲವರು ಮಲಗಿದ ಕೂಡಲೇ ಗೊರಕೆ ಶುರು ಮಾಡುತ್ತಾರೆ. ಕೆಲವರು ಮೆತ್ತಗೆ ಗೊರಕೆ ಹೊಡೆದರೆ ಮತ್ತೆ ಕೆಲವರು ಡೀಸಲ್ ಆಟೋ ಏರಿನಲ್ಲಿ ಹತ್ತುವಾಗ ಬರುವ ಸದ್ದಿನಂತೆ ಕರ್ಕಶವಾಗಿ ಗೊರಕೆ ಹೊಡೆಯುತ್ತಾರೆ. ಬೆಳಿಗ್ಗೆ ಎದ್ದು ನೀವು ಅವರನ್ನು ಏನಪ್ಪಾ ಆ ಪಾಟಿ ಗೊರಕೆ ಹೊಡೆಯುವೆ ಎಂದರೆ ಅಮಾಯಕರಾಗಿ ನಾನಾ ಇಲ್ಲಪ್ಪ ಎನ್ನುತ್ತಾರೆ. ಪಾಪ ಅವರೇನು ಬೇಕಂತಲೇ ಮಾಡುತ್ತಾರ? ಆದರೆ ಪಕ್ಕದಲ್ಲಿ ಮಲಗುವವರ ಪಾಡೇ??
೪) ಅರ್ಧ ಕಣ್ಣು ನಿದ್ರೆ : ಕೆಲವರು ಮಲಗಿರುವುದನ್ನು ನೋಡಿದರೆ ಅವರು ಮಲಗಿದ್ದಾರ? ಎದ್ದಿದ್ದಾರ? ಎಂದು ಸಂಶಯ ಬರುವ ಹಾಗೆ ಮಲಗಿರುತ್ತಾರೆ. ತಮ್ಮ ಅರ್ಧ ಕಣ್ಣನ್ನು ತೆರೆದು ಮಲಗಿರುತ್ತಾರೆ. ಇದು ಕೂಡ ಅವರೇನು ಬೇಕಂತಲೇ ಹಾಗೆ ಮಾಡಿರುವುದಿಲ್ಲ. ಆದರೆ ಅವರನ್ನು ಎಬ್ಬಿಸುವವರು ಸ್ವಲ್ಪ ಹುಷಾರಾಗಿ ನೋಡಿಕೊಂಡು ಎಬ್ಬಿಸಬೇಕು.
೫) ಬಾಯಿ ತೆರೆದು ನಿದ್ರೆ : ಇನ್ನು ಕೆಲವರು ಮಲಗಿದ ಸ್ವಲ್ಪ ನಂತರ ಇದ್ದಕ್ಕಿದ್ದಂತೆ ಬಾಯಿ ತೆರೆದು ಮಲಗಿಬಿಡುತ್ತಾರೆ. ಏನಾದರೂ ಸೊಳ್ಳೆ ಅಥವಾ ಇನ್ನೇನಾದರು ಒಳಗೆ ಹೋಗಿ ನಾಲಗೆಗೆ ಸ್ವಲ್ಪ ರುಚಿ ತಾಕಿದಾಗಲೇ ಎಚ್ಚರಗೊಳ್ಳುತ್ತಾರೆ. ಆದರೆ ಹೀಗೆ ಮಲಗುವವರು ಹೆಚ್ಚುಕಮ್ಮಿ ಮೈ ಮರೆತು ಮಲಗುವುದನ್ನು ನೋಡಿದ್ದೇನೆ.
೬) ಮಾತಿನ ನಿದ್ರೆ : ಕೆಲವರು ದಿನದಲ್ಲಿ ಎಷ್ಟು ಮಾತನಾಡಿದರೂ ಸಾಲದೆಂಬಂತೆ ನಿದ್ರೆಯಲ್ಲಿ ಕೂಡ ಕನವರಿಸುತ್ತಿರುತ್ತಾರೆ. ಆ ದಿನ ನಡೆದ ಯಾವುದೋ ಸಂಗತಿಯನ್ನು ತಲೆಯಲ್ಲಿ ತುಂಬಿಕೊಂಡು ಮಲಗಿರುತ್ತಾರೆ, ಇಲ್ಲವಾದಲ್ಲಿ ಯಾರನ್ನಾದರೂ ಜಾಸ್ತಿ ಹಚ್ಚಿಕೊಂಡವರನ್ನು ನೆನೆಯುತ್ತ ಅವರಿಗೆ ಅರಿವಿಲ್ಲದಂತೆ ಮಾತಾಡುತ್ತಿರುತ್ತಾರೆ. ಆದರೆ ಆ ಮಾತುಗಳು ಸ್ಪಷ್ಟವಿರುವುದಿಲ್ಲ. ಅದೇ ರೀತಿ ಬೆಳಿಗ್ಗೆ ಅವರು ಏನು ಕನವರಿಸಿದ್ದರೆಂದು ಮರೆತುಬಿಟ್ಟಿರುತ್ತಾರೆ. (ಈ ನಿದ್ರೆ ಕೆಲವೊಮ್ಮೆ ಪೇಚಿಗೆ ಈಡು ಮಾಡುವುದೂ ಉಂಟು)
೭) ನಡಿಗೆಯ ನಿದ್ರೆ : ಈ ನಿದ್ರೆ ಸ್ವಲ್ಪ ಅಪಾಯಕಾರಿ. ಏಕೆಂದರೆ ನಿದ್ರೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಎದ್ದು ನಡೆಯಲು ಶುರು ಮಾಡುವರು. ಒಂದು ವೇಳೆ ಮನೆಯಲ್ಲಿ ನಡೆದರೆ ಪರವಾಗಿಲ್ಲ. ಆದರೆ ಆಚೆ ಮಲಗಿದ್ದಾಗ ಹೀಗೆ ನಡೆದರೆ ಬಹಳ ಅಪಾಯ ನಡೆಯುವ ಸಾಧ್ಯತೆ ಇದೆ. ಹೇಗೆಂದರೆ ಬಾವಿಯ ಪಕ್ಕ ಮಲಗಿದ್ದಾಗ, ಮಹಡಿಯ ಮೇಲೆ ಮಲಗಿದ್ದಾಗ ಇದು ಅಪಾಯಕಾರಿ.
೮) ಪ್ರಶಾಂತ ನಿದ್ರೆ : ಈ ನಿದ್ರೆ ಹೆಚ್ಚಾಗಿ ನಿಮಗೆ ಕಂಡುಬರುವುದು ಮಕ್ಕಳಲ್ಲಿ. ಮಕ್ಕಳು ಅತ್ತು, ಆಟ ಆದಿ ಸುಸ್ತಾಗಿ ಮಲಗಿದ್ದಾಗ ಅವರ ಮುಖದಲ್ಲಿನ ಮಂದಹಾಸವೆ ಹೇಳುವುದು ಅವರು ಎಷ್ಟು ಪ್ರಶಾಂತವಾಗಿ ಮಲಗಿದ್ದರೆ ಎಂದು.
೯) ಕ್ಷಣಿಕ ನಿದ್ರೆ : ೫ ನಿಮಿಷ ನಿದ್ರೆ, ೧೦ ನಿಮಿಷ ನಿದ್ರೆ ಹೀಗೆ ಕೆಲವು ನಿಮಿಷಗಳ ಮಟ್ಟಿಗೆ ಮಲಗುವುದು ಉಂಟು. ಈ ನಿದ್ರೆ ಬಹಳ ಸಮಯ ದಿನದ ಹೊತ್ತಿನಲ್ಲಿ ಅಂದರೆ ಬೆಳಗ್ಗೆ, ಮಧ್ಯಾಹ್ನ ಬರುವ ಸಾಧ್ಯತೆ ಹೆಚ್ಚು. ಆ ಕೆಲ ನಿಮಿಷಗಳ ನಿದ್ರೆಯೂ ಕೆಲವೊಮ್ಮೆ ಎಷ್ಟೋ ಚೇತೋಹಾರಿಯಾಗಿರುತ್ತದೆ.
೧೦) ಬಲವಂತದ ನಿದ್ರೆ : ಇದು ಹೇಗೆ ಎಂದರೆ ನಿದ್ರೆ ಬರದೆ ಇದ್ದರೂ ಬಲವಂತವಾಗಿ ನಿದ್ರಿಸಲು ಪ್ರಯತ್ನಿಸುವುದು. ಇದು ಎಲ್ಲಾದರೂ ಆಗಿರಬಹುದು. ಮನೆ, ಬಸ್ಸು, ಟ್ರೈನ್,ಆಫೀಸ್, ಎಲ್ಲಾದರೂ ಸರಿ.
ಇವಿಷ್ಟು ನಾ ಕಂಡ ನಿದ್ರೆಯ ಬಗೆಗಳು. ಈ ಲೇಖನವನ್ನು ಓದುವುದರೊಳಗೆ ತಮಗೂ ನಿದ್ರೆ ಬಂದಿದ್ದಾರೆ ಆರಾಮಾಗಿ ನಿದ್ರೆ ಮಾಡಿ. ಯಾಕೆಂದರೆ ನಿದ್ರೆಗಿಂತ ಒಳ್ಳೆಯ ಔಷಧಿ ಯಾವುದೂ ಇಲ್ಲ. :-)
Comments
ಉ: ನಿದ್ರಾದೇವಿ ಮಹಾತ್ಮೆ.
In reply to ಉ: ನಿದ್ರಾದೇವಿ ಮಹಾತ್ಮೆ. by gopinatha
ಉ: ನಿದ್ರಾದೇವಿ ಮಹಾತ್ಮೆ.
ಉ: ನಿದ್ರಾದೇವಿ ಮಹಾತ್ಮೆ.
In reply to ಉ: ನಿದ್ರಾದೇವಿ ಮಹಾತ್ಮೆ. by partha1059
ಉ: ನಿದ್ರಾದೇವಿ ಮಹಾತ್ಮೆ.
In reply to ಉ: ನಿದ್ರಾದೇವಿ ಮಹಾತ್ಮೆ. by Jayanth Ramachar
ಉ: ನಿದ್ರಾದೇವಿ ಮಹಾತ್ಮೆ.
In reply to ಉ: ನಿದ್ರಾದೇವಿ ಮಹಾತ್ಮೆ. by partha1059
ಉ: ನಿದ್ರಾದೇವಿ ಮಹಾತ್ಮೆ.
ಉ: ನಿದ್ರಾದೇವಿ ಮಹಾತ್ಮೆ.
In reply to ಉ: ನಿದ್ರಾದೇವಿ ಮಹಾತ್ಮೆ. by gopaljsr
ಉ: ನಿದ್ರಾದೇವಿ ಮಹಾತ್ಮೆ.
ಉ: ನಿದ್ರಾದೇವಿ ಮಹಾತ್ಮೆ.
In reply to ಉ: ನಿದ್ರಾದೇವಿ ಮಹಾತ್ಮೆ. by Chikku123
ಉ: ನಿದ್ರಾದೇವಿ ಮಹಾತ್ಮೆ.
ಉ: ನಿದ್ರಾದೇವಿ ಮಹಾತ್ಮೆ.
In reply to ಉ: ನಿದ್ರಾದೇವಿ ಮಹಾತ್ಮೆ. by vinay_2009
ಉ: ನಿದ್ರಾದೇವಿ ಮಹಾತ್ಮೆ.
ಉ: ನಿದ್ರಾದೇವಿ ಮಹಾತ್ಮೆ.
In reply to ಉ: ನಿದ್ರಾದೇವಿ ಮಹಾತ್ಮೆ. by kavinagaraj
ಉ: ನಿದ್ರಾದೇವಿ ಮಹಾತ್ಮೆ.