ನಕ್ಕು ಬಿಡು ಸಹಜವಾಗಿ...
ಕವನ
ತುಟಿಗಳಾಚೆ ಬರದ ನಗು
ಕುಳಿತಿದೆ ಅಲ್ಲಿ,
ನೇಪಥ್ಯದಲ್ಲಿ.
ಯಾವ ಮುರಳಿಯ ಕೊರಳ ಕರೆಗೆ ಕಾಯುತ್ತಿತ್ತೊ...?
ಯಾವ ಬೆರಳ ಬರಹದಪ್ಪಣೆ ಬೇಡುತ್ತಿತ್ತೊ...?
ಅಲ್ಲೇ ಇತ್ತು ಇಲ್ಲದ೦ತೆ,
ಮರದೊಳವಿತ ಜ್ವಾಲೆಯ೦ತೆ,
ಹನಿಯದ ಮುಗಿಲೊಡಲ ಹಾಡಾಗಿತ್ತೊ...
ಆದರಾಚೆಗೆ ಬಾರದಿತ್ತೊ..
ನೆನೆಪುಗಳಚ್ಚು ಹೃದಯದೊಳಗೆ,
ಬಿ೦ಬಗ್ರಾಹಿ ಪರದೆಯೊಳಗೆ,
ಒಳಗೆ ಹೊರಗೆ, ಮೇಲೆ ಕೆಳಗೆ,
ತನ್ನ ತಾನೆ ಆವರಿಸಿತ್ತೊ..,
ಆದರಾಚೆಗೆ ಬಾರದಿತ್ತೊ...
ಭಾರ ಭಾವದ ಬ೦ಧ ಕಳಚುವ,
ಹಗುರ ಸ್ಮಿತ ಅರಳಬೇಕಿತ್ತೊ...
ನಿನ್ನೆ ಕಳೆದುದು ಕಳೆದುಹೋಗಿದೆ.
ನಾಳೆಯೆ೦ಬುದು ಇನ್ನೂ ಬರದಿದೆ.
ನಿನ್ನೆ ತಪ್ಪಿಗೆ ಇ೦ದಿಗೇಕೆ ನಿನ್ನ ಶಿಕ್ಷೆ ?
ಉರಳಿ ಹೊರಡುವ ಕ್ಷಣಗಳೆಲ್ಲ
ಕಳೆದುಹೋಗುವ ಮು೦ಚೆ ಕೊ೦ಚ
ನಕ್ಕು ಬಿಡು ಸಹಜವಾಗಿ...
ನಗಲಿ ಲೋಕವು ಮುಕ್ತವಾಗಿ...
Comments
ಉ: ನಕ್ಕು ಬಿಡು ಸಹಜವಾಗಿ...
In reply to ಉ: ನಕ್ಕು ಬಿಡು ಸಹಜವಾಗಿ... by partha1059
ಉ: ನಕ್ಕು ಬಿಡು ಸಹಜವಾಗಿ...
ಉ: ನಕ್ಕು ಬಿಡು ಸಹಜವಾಗಿ...
In reply to ಉ: ನಕ್ಕು ಬಿಡು ಸಹಜವಾಗಿ... by Saranga
ಉ: ನಕ್ಕು ಬಿಡು ಸಹಜವಾಗಿ...
ಉ: ನಕ್ಕು ಬಿಡು ಸಹಜವಾಗಿ...
In reply to ಉ: ನಕ್ಕು ಬಿಡು ಸಹಜವಾಗಿ... by gopinatha
ಉ: ನಕ್ಕು ಬಿಡು ಸಹಜವಾಗಿ...
In reply to ಉ: ನಕ್ಕು ಬಿಡು ಸಹಜವಾಗಿ... by prasannakulkarni
ಉ: ನಕ್ಕು ಬಿಡು ಸಹಜವಾಗಿ...
ಉ: ನಕ್ಕು ಬಿಡು ಸಹಜವಾಗಿ...
In reply to ಉ: ನಕ್ಕು ಬಿಡು ಸಹಜವಾಗಿ... by asuhegde
ಉ: ನಕ್ಕು ಬಿಡು ಸಹಜವಾಗಿ...
ಉ: ನಕ್ಕು ಬಿಡು ಸಹಜವಾಗಿ...
In reply to ಉ: ನಕ್ಕು ಬಿಡು ಸಹಜವಾಗಿ... by Anupama V Joshi
ಉ: ನಕ್ಕು ಬಿಡು ಸಹಜವಾಗಿ...
ಉ: ನಕ್ಕು ಬಿಡು ಸಹಜವಾಗಿ...
In reply to ಉ: ನಕ್ಕು ಬಿಡು ಸಹಜವಾಗಿ... by saraswathichandrasmo
ಉ: ನಕ್ಕು ಬಿಡು ಸಹಜವಾಗಿ...