ವಂಶೋದ್ದಾರಕ
ಮದುವೆಯಾಗಿ ಒಂದು ವರುಷದಾಗೆ
ನಂಗೆ ಮಗ ಹುಟ್ದ ಕಣ್ರಿ
ನಂಗೆ ಮಗ ಹುಟ್ದ ಕಣ್ರಿ
ಅಣ್ಣ ತಮ್ಮಂದಿರ್ಯಾರಿಗು ಇಲ್ಲದ
ಗಂಡು ಮಗ ಕಣ್ರಿ ನಮ್ಮನೆ ವಂಶೋದ್ದರಕ ರಿ
ನನಗೆ ಎಂಥ ಖುಷಿ ನೋಡ್ರಿ.
ಲಕ ಲಕ ಬೆಳೆದು ಮಗುವಿಗಾಗಲೆ
ತಿಂಗ್ಳು ತುಂಬಿತಲ್ರಿ ಮಗುವಿಗೆ ತಿಂಗ್ಳು ತುಂಬಿತಲ್ರಿ
ತಿಂಗಳಾದರೂ ಮಗುವಿನ ಬಲಗೈ
ಮಷ್ಠಿ ಬಿಡದೆ ಒಲ್ರಿ ಮುಂಗೈ ಮುಷ್ಠಿ ಬಿಡದೆ ಒಲ್ರಿ
ಬಿಡದ ಮುಷ್ಠಿಯ ಕಂಡು ನನ್ನವಳು
ಗಾಬರಿಯಾಗವಳ್ರಿ ಬಾಳ ಗಾಬರಿಯಾಗವಳ್ರಿ
ಹಿಡಿದ ಮುಷ್ಠಿಯ ಮುಂದೆಯು ಬಿಡದಿರೆ ಏನು ಮಾಡೊದೇಳ್ರಿ
ಅಂತ ನಾನ ಕೇಳ್ತಾವ್ಳಲ್ರಿ
ಕಾಡು ಮಲ್ಲೇಶಗೆ ಉರುಳು ಸೇವೆಯ
ಹರಕೆ ಹೊತ್ತೆ ಕಣ್ರಿ ದೇವ್ರಿಗೆ
ಹರಕೆ ಹೊತ್ತೆ ಕಣ್ರಿ
ಹರಕೆ ತೀರಿತು ವ್ರತವು ಮುಗಿಯಿತು
ಮುಷ್ಠಿ ಗಟ್ಟಿಯಲ್ರಿ ಮುಂಗೈ ಮುಷ್ಠಿ
ಗಟ್ಟಿಯಲ್ರಿ
ತಿಂಗಳಾರಾತು ಮಗುವು ಇನ್ನು
ಮುಷ್ಠಿ ಬಿಡದೆ ಒಲ್ರಿ ಹಿಡಿದಾ
ಮುಷ್ಠಿ ಬಿಡದೆ ಒಲ್ರಿ
ಏನು ಕಾಯಲೆಯೊ ಏನು ತೊಂದರೆಯೊ
ಗಾಬರಿಯಾಗಯ್ತ್ರಿ ನನಗೀಗ
ಗಾಬರಿಯಾಗಯ್ತ್ರಿ
ಮನೆಯ ಹಿರಿಯಬ್ಬೆ ಸಾಕಜ್ಜಿ ನುಡಿದಳು
ಸುಟುಕಿ ಹಾಕಿ ನೋಡ್ರಿ ಮುಂಗೈಗೆ
ಸುಟುಕಿ ಹಾಕಿ ನೋಡ್ರಿ
ಅಮಾಸ್ಯೆ ಬುದುವಾರ ಮಗುವಿನ ಮುಂಗೈಗೆ
ಸುಟುಕಿ ಹಾಕ್ದೆ ಕಣ್ರಿ
ಸುಡುಬಳೆ ಸುಟುಕಿ ಹಾಕ್ದೆ ಕಣ್ರಿ
ಕೀರಲು ದನಿಯಲಿ ಅಳುತಾ ಮಗನು
ಮುಷ್ಠಿ ಬಿಟ್ಟ ಕಣ್ರಿ
ಹಿಡಿದಾ ಮುಷ್ಠಿ ಬಿಟ್ಟ ಕಣ್ರಿ
ಬಿಡಿಸಿದ ಬೆಳ್ಳಿನ ಸಂದಿಯ ಹಿಂದೆ
ಉಂಗುರ ಐತಲ್ರಿ ಚಿನ್ನದ ಉಂಗುರ ಐತಲ್ರಿ
ಹೆರಿಗೆಯ ದಿನದ ಸೂಲಗಿತ್ತಿಯ
ದಾವಂತ ನೆನಪಾತ್ರಿ ನನಗೀಗ ದಾವಂತ ನೆನಪಾತ್ರಿ
ಆಕೆಯ ಬೆರಳಿನ ಚಿನ್ನದ ಉಂಗುರು ತುಡುವಾಗಿತ್ತಲ್ರಿ
ಆ ದಿನ ತುಡುವಾಗಿತ್ತಲ್ರಿ
ಮದುವೆಯಾಗಿ ಒಂದು ವರುಷದಾಗೆ
ನಂಗೆ ಮಗ ಹುಟ್ದ ಕಣ್ರಿ
ನಮ್ಮನೆ ವಂಶೋದ್ದಾರಕ ರಿ
ಉಂಗುರ ಕದ್ದ ಕಳ್ಳನಿವ ರಿ
ನನ್ನ ಖುಷಿಯು ಮುಗಿಯಿತಲ್ರಿ
Comments
ಉ: ವಂಶೋದ್ದಾರಕ
In reply to ಉ: ವಂಶೋದ್ದಾರಕ by prasannakulkarni
ಉ: ವಂಶೋದ್ದಾರಕ
ಉ: ವಂಶೋದ್ದಾರಕ
ಉ: ವಂಶೋದ್ದಾರಕ
ಉ: ವಂಶೋದ್ದಾರಕ
ಉ: ವಂಶೋದ್ದಾರಕ