ಯುಗಾದಿ ಸಂಪದ
ಯುಗಾದಿ ಸಂಪದ
ಯುಗಾದಿ ಓಹೋ ಯುಗಾದಿ
ಬಂತು ಸಂಭ್ರಮ ಸಡಗರ ಈ ಜಗದಿ,
ಕಟ್ಟೋಣ ಬನ್ನಿ ತಲಿರು ತೋರಣ,
ತಿನ್ನೋಣ ಎಲ್ಲರು ಕೂಡಿ ಹೋಳಿಗೆ ಹೂರಣ
ಓಹೋ ಯುಗಾದಿ, ಓಹೋ ಯುಗಾದಿ
ಸ್ವಾಗತಿಸೋಣ ಶ್ರೀ ಖರ ಸಂವತ್ಸ ಸಂಭ್ರಮದಿ
ಬೇವು ಬೆಲ್ಲ ಹಂಚೋಣ ಎಲ್ಲ
ಕಹಿಯ ಮರೆತು, ಜೀವನವ ಸವಿಯೋಣ ಎಲ್ಲಾ
ಚ್ಯೆತ್ರ, ವ್ಯೆಶಾಖ,ಜೇಷ್ಠ
ಕಳೆಯಲಿ ಎಲ್ಲರ ಕಷ್ಟ,
ಆಷಾಡ , ಶ್ರಾವಣ, ಭಾದ್ರಪದ
ಎಲ್ಲರ ಮನೆಯಾಗಲಿ ಸು ಸಂಪದ
ಆಶ್ವೀಜ, ಕಾರ್ತೀಕ, ಮಾರ್ಗಶಿರ
ದೇಶ ಏರಲಿ ಪ್ರಗತಿಯಲಿ ಉತ್ತುಂಗದ ಶಿಖರ
ಪುಷ್ಯ, ಮಾಘ, ಪಾಲ್ಗುಣ
ದೊರವಾಗಲಿ ಪ್ರಳಯದ ಆತಂಕದ ಕ್ಷಣ
ಯುಗಾದಿ ಓಹೋ ಯುಗಾದಿ
ಒಂದಾಗಿ ಬಾಳೋಣ ಈ ನಮ್ಮ ದೇಶದಿ
ಸುಗ್ಗಿ ಹಿಗ್ಗಲಿ, ಶ್ರಮದಿ ದುಡಿಯಲಿ, ತೆನೆಯು ಜಗ್ಗಲಿ
ಎಲ್ಲಾ ಧಾನ್ಯಗಳು ಒಳ್ಳೆಯ ಫಸಲಾಗಲಿ
ಮಳೆಯು ಬೀಳಲಿ, ತುಂಬಿ ತುಳುಕಲಿ,
ನದಿಗಳು ತುಂಬಿ ಹರಿಯಲಿ, ಜಲ ಪ್ರಳಯವಾಗದಿರಲಿ
ದೀಪ ಬೆಳಗಲಿ, ಗಾಳಿ ಹರಡಲಿ
ಎಂದಿಗೂ ಪ್ರಗತಿಯ ಬೆಳಕು ಆರದಿರಲಿ
ಯುಗಾದಿ ಓಹೋ ಯುಗಾದಿ
ಬನ್ನಿ ಮುನ್ನುಗ್ಗೋಣ ವಾಕ್ಪತದಿ
ತೇಲೋಣ, ಈಜೋಣ ಈ ಜೀವನದ ಹಡಗಲಿ
ತಲುಪೋಣ, ಸೇರೋಣ ಈ ಸು ಸಂಪದ ದಡದಲಿ
-ಮಧ್ವೇಶ್.
ಯುಗಾದಿ ಹಬ್ಬದ ಶುಭಾಷಯಗಳು
ಈ ಶ್ರೀ ಖರ ನಾಮ ಸಂವತ್ಸರ ಎಲ್ಲರಗೂ ಶುಭವನ್ನುಂಟುಮಾಡಲಿ
Comments
ಉ: ಯುಗಾದಿ ಸಂಪದ
In reply to ಉ: ಯುಗಾದಿ ಸಂಪದ by ನಂದೀಶ್ ಬಂಕೇನಹಳ್ಳಿ
ಉ: ಯುಗಾದಿ ಸಂಪದ
ಉ: ಯುಗಾದಿ ಸಂಪದ
In reply to ಉ: ಯುಗಾದಿ ಸಂಪದ by siddhkirti
ಉ: ಯುಗಾದಿ ಸಂಪದ