ಯುಗಾದಿ ಬಂದೇ ಬಂತ, ಸುಖವ ಶುಭವ ಹಾರೈಸುತ
ಕವನ
ಯುಗಾದಿ ಬಂದೇ ಬಂತ
ಸುಖವ ಶುಭವ ಹಾರೈಸುತ
ಶಿಶಿರದಾ ಚಳಿಗಂತ್ಯವ ಹಾಡುತ
ವಸಂತಗೆ ಸ್ವಾಗತ ಕೋರುತ
ಚೈತ್ರದ ಸೊಬಗಾ ಸೂಸುತ
ಯುಗಾದಿ ಬಂದೇ ಬಂತ
ಹಸುರಿನ ತೋರಣ ಕಟ್ಟುತ
ಹೊಸವರ್ಷದಾಗಮನವ ಸಾರುತ
ಬೇವು ಬೆಲ್ಲವ ಮೆಲ್ಲಿರಿ ಎನುತ
ಸಮರಸದಾ ಸಂದೇಶ ಬೀರುತ
ಯುಗಾದಿ ಬಂದೇ ಬಂತ
ಎಲ್ಲೆಡೆ ಸಂಭ್ರಮ ಹಂಚುತ
ಸಂವತ್ಸರವಿದು ಹೊಸದು ಎನುತ
ಜೊತೆಗೆ ನಲಿವಾ ಹೊತ್ತು ತರುತ
ಆಶಾಜ್ಯೋತಿಯ ಬೆಳಗುತ
ಯುಗಾದಿ ಬಂದೇ ಬಂತ
ಭರವಸೆ ಕಿರಣವ ಚೆಲ್ಲುತ.
Comments
ಉ: ಯುಗಾದಿ ಬಂದೇ ಬಂತ, ಸುಖವ ಶುಭವ ಹಾರೈಸುತ
In reply to ಉ: ಯುಗಾದಿ ಬಂದೇ ಬಂತ, ಸುಖವ ಶುಭವ ಹಾರೈಸುತ by MADVESH K.S
ಉ: ಯುಗಾದಿ ಬಂದೇ ಬಂತ, ಸುಖವ ಶುಭವ ಹಾರೈಸುತ
ಉ: ಯುಗಾದಿ ಬಂದೇ ಬಂತ, ಸುಖವ ಶುಭವ ಹಾರೈಸುತ
ಉ: ಯುಗಾದಿ ಬಂದೇ ಬಂತ, ಸುಖವ ಶುಭವ ಹಾರೈಸುತ
ಉ: ಯುಗಾದಿ ಬಂದೇ ಬಂತ, ಸುಖವ ಶುಭವ ಹಾರೈಸುತ
ಉ: ಯುಗಾದಿ ಬಂದೇ ಬಂತ, ಸುಖವ ಶುಭವ ಹಾರೈಸುತ