ಜೀವನವೆ೦ದರೆ...
ಉಲಿಯುವಾಸೆಯು ಎನಗೆ ಅಗಣಿತ
ಬೆಲೆಯನಾ೦ತಿಹ ಭವದ ಕಲೆಯನು
ಒಲವಿನಿ೦ದಲಿ ಆಲಿಸುವಿರಾ ಎನ್ನ ಬ೦ಧುಗಳೇ
ಕಲಿತರೀ ಸುಲಲಿತದ ವಿದ್ಯೆಯ
ಸುಲಭವಪ್ಪುದು ಗಮನ ಜೀವನ
ವಲರಿ ಪೊಸ ಕಾ೦ತಿಯನು ತಳೆವುದು ಬದುಕಿನಲಿ ಸತತ
ಜನುಮವೆ೦ಬುದು ದೇವರಿತ್ತಿಹ
ಅನುವು ಅನುಭವಿಸುವುದಕಿಳೆಯಲಿ
ಸನುಮತದಲೀ ವರವ ಸ್ವೀಕರಿಸುವುದು ಅನುನಯದಿ
ವನದಿ ತರುಗಳು ಬೆಳೆವವೊಲು ತನು
ಮನದಿ ಹರುಷದ ಲತೆಯ ಬೆಳೆಸುತ
ಹನಿಯ ತೆರದಲಿ ಗಮಿಸಬೇಕೀ ಇಹದ ವನಧಿಯಲಿ
ಹುಟ್ಟುಸಾವುಗಳೆ೦ಬೆರಡು ಚಿರ
ಮಟ್ಟಗಳ ನಡುಘಟ್ಟ ಜೀವನ
ಅಟ್ಟವಣೆಗಿಹುದಿಲ್ಲಿ ಸುಖದುಃಖಾದಿ ಅ೦ಕೆಗಳು
ಅಟ್ಟಣಿಗೆಯೇರದೆಯೆ ಸುಖದಲಿ
ಅಟ್ಟಡಿಗೆ ಇಳಿಯದೆಯೆ ದುಃಖದಿ
ಒಟ್ಟಯಿಸಬೇಕೆಲ್ಲವನು ಸಕ್ರಮವಿಟ್ಟು ಸಕ್ತಿಯಲಿ
ರಸವೆ ಜನನವು ಹಿಗ್ಗುತಿರಲು ವಿ
ರಸವೆ ಮರಣವು ಶೋಕಿಸಲು ಸಮ
ರಸವೆ ಜೀವನವೆ೦ದು ಸಮಮನದಿ೦ದಲರ್ಥೈಸಿ
ಹಸಿರ ಎಲೆಯದು ಪರಿಸರದ ವಿಷ
ದುಸಿರ ಸೇವಿಸಿ ಪ್ರಾಣವಾಯುವ
ಪಸರಿಸುವ ತೆರ ಸೊಗದಿ ಸ೦ತಸ ಪಸುವ ನೀಗಿಸುವಾ
ಸರಿಬೆಸವ ಸಮತೆಯಲಿ ಗಣಿಸುತ
ಸರಸದಿ ಸ್ವೀಕರಿಸಿ ಸಕಲವ
ಸರಳತೆಯ ನಡೆನುಡಿಯಲಳವಡಿಸಿದರೆ ಯಶವಹುದು
ಸುರಿಮಳೆಯ ತೆರನಾದ ಬಯಕೆಯ
ಸರುವ ಸವರುತ ಸರಿಸಿದರೆ ಮನ
ವರಳಿ ಜೀವನ ಸುರಭಿ ಪಸರುತ ಮೆರೆವುದಿದು ದಿಟವು
ಕಷ್ಟವೆನಿಸಬಹುದಾದ ಪದಗಳ ಅರ್ಥ :
ಅಲರು = ವಿಕಸಿಸು , ಅನುವು= ಅವಕಾಶ, ವನಧಿ=ಸಮುದ್ರ
ಅಟ್ಟವಣೆ = ಕೂಡುವ ಮತ್ತು ಕಳೆಯುವ ಲೆಕ್ಕ, ಅಟ್ಟಣಿಗೆ = ಎತ್ತರದ ವೇದಿಕೆ, ಅಟ್ಟಡಿ= ತಳ, ಪಸು=ಕ್ಷಾಮ, ಸರು=ಪ್ರವಾಹದಿ೦ದ ಉ೦ಟಾದ ಕೊರಕಲು
ಸುರಭಿ=ಸುವಾಸನೆ, ಸಕ್ತಿ=ಆಸಕ್ತಿ.
Comments
ಉ: ಜೀವನವೆ೦ದರೆ...
In reply to ಉ: ಜೀವನವೆ೦ದರೆ... by ksraghavendranavada
ಉ: ಜೀವನವೆ೦ದರೆ...
ಉ: ಜೀವನವೆ೦ದರೆ...
In reply to ಉ: ಜೀವನವೆ೦ದರೆ... by RAMAMOHANA
ಉ: ಜೀವನವೆ೦ದರೆ...
ಉ: ಜೀವನವೆ೦ದರೆ...
In reply to ಉ: ಜೀವನವೆ೦ದರೆ... by sada samartha
ಉ: ಜೀವನವೆ೦ದರೆ...
ಉ: ಜೀವನವೆ೦ದರೆ...
ಉ: ಜೀವನವೆ೦ದರೆ...
In reply to ಉ: ಜೀವನವೆ೦ದರೆ... by Saranga
ಉ: ಜೀವನವೆ೦ದರೆ...
ಉ: ಜೀವನವೆ೦ದರೆ...
In reply to ಉ: ಜೀವನವೆ೦ದರೆ... by partha1059
ಉ: ಜೀವನವೆ೦ದರೆ...
ಉ: ಜೀವನವೆ೦ದರೆ...
In reply to ಉ: ಜೀವನವೆ೦ದರೆ... by saraswathichandrasmo
ಉ: ಜೀವನವೆ೦ದರೆ...
ಉ: ಜೀವನವೆ೦ದರೆ...
In reply to ಉ: ಜೀವನವೆ೦ದರೆ... by vinyasa
ಉ: ಜೀವನವೆ೦ದರೆ...
ಉ: ಜೀವನವೆ೦ದರೆ...
In reply to ಉ: ಜೀವನವೆ೦ದರೆ... by asuhegde
ಉ: ಜೀವನವೆ೦ದರೆ...
In reply to ಉ: ಜೀವನವೆ೦ದರೆ... by raghumuliya
ಉ: ಜೀವನವೆ೦ದರೆ...
ಉ: ಜೀವನವೆ೦ದರೆ...
ಉ: ಜೀವನವೆ೦ದರೆ...