ನೀ ಇದ್ದರೆ ನಗುವಿನ ಸ್ಪರ್ಧೆಯಲಿ
ಕವನ
ಮಧುರ ಮಧುರವೀ ತಂಗಾಳಿಯು ಬೀಸುತಿರಲು
ಹುಣ್ಣಿಮೆ ಹೊಂಬೆಳಕಿನಲಿ ನೀ ನನ್ನೊಡನಿರಲು
ಬೀಸುವ ಗಾಳಿಗೆ ನಿನ್ನ ಮುಂಗುರುಳು ಹಾರುತಿರಲು
ತುಂಬಿ ಹರಿಯುತಿದೆ ಸವಿ ಪ್ರೀತಿಯ ಹೊನಲು...
ನೀ ಇದ್ದರೆ ನಗುವಿನ ಸ್ಪರ್ಧೆಯಲಿ..
ಸಾಟಿಯುಂಟೆ ನಿನಗೆ ಸೌಂದರ್ಯವಲ್ಲಿ
ತೇಲುತಿಹೆನು ಅನುರಾಗದ ಅಲೆಯಲಿ
ಹೃದಯ ತಣಿಸುತಿದೆ ನಿನ್ನೊಲವಿನಲಿ
ಆಗಸದಲಿ ಚುಕ್ಕಿ ಚಂದ್ರಮರ ಸಮ್ಮಿಲನ
ಚಂದ್ರಮನು ನಾಚುತಿಹನು ಕಂಡು ನಿನ್ನ ವದನ
ನಿನ್ನ ಮೆಲ್ಲುಸಿರೇ ನನ್ನ ಕರ್ಣಗಳಿಗೆ ಸವಿಗಾನ
ಎಂದೂ ಮರೆಯಲಾರೆನು ಈ ಸುದಿನ
Comments
ಉ: ನೀ ಇದ್ದರೆ ನಗುವಿನ ಸ್ಪರ್ಧೆಯಲಿ
In reply to ಉ: ನೀ ಇದ್ದರೆ ನಗುವಿನ ಸ್ಪರ್ಧೆಯಲಿ by siddhkirti
ಉ: ನೀ ಇದ್ದರೆ ನಗುವಿನ ಸ್ಪರ್ಧೆಯಲಿ
ಉ: ನೀ ಇದ್ದರೆ ನಗುವಿನ ಸ್ಪರ್ಧೆಯಲಿ
In reply to ಉ: ನೀ ಇದ್ದರೆ ನಗುವಿನ ಸ್ಪರ್ಧೆಯಲಿ by Chikku123
ಉ: ನೀ ಇದ್ದರೆ ನಗುವಿನ ಸ್ಪರ್ಧೆಯಲಿ
ಉ: ನೀ ಇದ್ದರೆ ನಗುವಿನ ಸ್ಪರ್ಧೆಯಲಿ
In reply to ಉ: ನೀ ಇದ್ದರೆ ನಗುವಿನ ಸ್ಪರ್ಧೆಯಲಿ by partha1059
ಉ: ನೀ ಇದ್ದರೆ ನಗುವಿನ ಸ್ಪರ್ಧೆಯಲಿ
ಉ: ನೀ ಇದ್ದರೆ ನಗುವಿನ ಸ್ಪರ್ಧೆಯಲಿ
In reply to ಉ: ನೀ ಇದ್ದರೆ ನಗುವಿನ ಸ್ಪರ್ಧೆಯಲಿ by saraswathichandrasmo
ಉ: ನೀ ಇದ್ದರೆ ನಗುವಿನ ಸ್ಪರ್ಧೆಯಲಿ