ಯಾರಿವಳು ನೀರೆ?

ಯಾರಿವಳು ನೀರೆ?

ಕವನ

ಯಾರಿವಳು ನೀರೆ?
ಚೂಡಿ, ಮಿಡಿ ಕಾಲದಲ್ಲೂ
ಉಟ್ಟಿರುವಳು ಸೀರೆ.
ಚಿಕ್ಕ ಚುಕ್ಕಿಯ ಬದಲು
ದೊಡ್ದ ಕುಂಕುಮ ಬೇರೆ.

ಬಾಬ್ ಯುಗದಲ್ಲೂ
ಬಿಟ್ಟಿರುವಳು ಮಾರು ಜಡೆ
ನಾಚುವಂತಿದೆ ರೂಪದರ್ಶಿಗಳೂ
ನೋಡಿ ಇವಳ ನಡೆ.

ನೆಟ್ಟರೆ ಸಾಕು ಕಣ್ಣು ಇವಳೆಡೆ
ಹೊರಳದು ದೃಷ್ಟಿ ಬೇರೆ ಕಡೆ
ಸರಳ ಸುಂದರ ಚೆಲುವೆ
ಮಾಸದ ನಗುವೇ ಇವಳೊಡವೆ.

Comments