ಅಣ್ಣನಿಗೊಂದು ನುಡಿ ನಮನ

ಅಣ್ಣನಿಗೊಂದು ನುಡಿ ನಮನ

 

ಅಣ್ಣನಿಗೊಂದು ನುಡಿ ನಮನ


ಶತಕೋಟಿ ಭಾರತೀಯರ ಹೃದಯದಾಳದಲಿ
ಮೂಡುತಿಹ ಸಂಚಲನ ಮೂರ್ತ ರೂಪವ ಧರಿಸಿ
ಅಣ್ಣ ನಿನ್ನಲಿ ಕಾಣುತಿದೆ ಭಾವ ಕೋಟಿ
ಕಣ್ಣ ತೆರೆಸಿದೆ ಈಗ ಭಾರತದ ಪ್ರೀತಿ ||

ಸ್ವಾತಂತ್ರ್ಯ ಬಂದರೂ ಬಳಸುವರಿವಿಲ್ಲದಿರೆ
ಉಲ್ಲೋಲ ಕಲ್ಲೋಲದಲಿ ನಿರತ ನಾಯಕರೆ 
ನಾಯಿಗಿಂತಲೂ ಕೀಳು ಕೀಳಾಗಿ ನಡೆವವರು
ಜನ ಮನದ ವಿಶ್ವಾಸ ಕೆಡಿಸಿ ಗೆದ್ದವರು
ಊರೆಲ್ಲ ತುಂಬಿಹರು ಲಂಚ ಗುಳಿತನವನ್ನು
ಅಧಿಕಾರದಮಲಿನಲಿ ಮೈಮರೆತ ಲಂಫಟರು
ಗುತ್ತಿಗೆಯ ಪಡೆದು ಬದುಕುವ ಮಂದಿಗಳ ಸ್ವರ್ಗ
ಭಟರೆನಿಸಿ ಕೊಂಡವರು ಹೊಗಳಿ ಬದುಕುವ ಮಾರ್ಗ
ಕಂಡಿರುವ ಸಮಯದಲಿ ನೀ ಬಂದೆ ಅಣ್ಣಾ
 ದೇಶವಾಸಿಯ ಕನಸು ನನಸಾಗಲಣ್ಣಾ ||

 ಅಣ್ಣಾ ಹಜಾರೆ ನೀ ಬೇಕೆಮ್ಮ ನಾಡಿಗೆ
ನಾಡಾಡಿಗಳ ನಾಡಿ ಮಿಡಿಯುತಿಹ  ನುಡಿಗೆ
ನಾಳಿನಭ್ಯುಧಯಕ್ಕೆ ರೂವಾರಿ ನೀನಾಗಿ
ಹೊಸ ಬಗೆಯ ಜನತಂತ್ರ ಸಂಮಿಳಿತವಾಗಿ
ಬಲವಾಗಿ ಗೆಲುವಾಗಿ ಈ ದೇಶ ಚೆಲುವಾಗಿ
ಸಾಗುವಂತಾಗಲಿ ವಿಶ್ವತೋಮುಖವಾಗಿ
ಆ ದಿನವ ನೋಡ ಬೇಕಣ್ಣಾ
ನಿನಗಿದೋ ನುಡಿ ನಮನವಣ್ಣಾ ||


                                                             -    ಸದಾನಂದ

 

Rating
No votes yet

Comments