ಇಕ್ಕಳದಿ ಬ್ರಹ್ಮಾಂಡ ಪಿಡಿಯಲಳವೆ?
ಎಂಥ ಚಿತ್ತಾರ ಬರೆದೆ
ಎಂಥವರೂ ಮೂಗ ಮೇಲ್ಬೆರಳಿಟ್ಟುನೋಳ್ಪಂತೆ
ರಾತ್ರಿ ತಂಪಿನ ಗೋಳ'
ಹಗಲೊಳುಷ್ಣದ ಗೋಳ
ರಾಜಿಸುವ ರತ್ನಗಳೆ ದೀಪಜಾಲ
ಆಗಸದಹೊಳೆಯಲ್ಲಿ ನೀರಿನಂಶವೆಇಲ್ಲ
ನೀಲಪಟದೊಳು ಮೂಡಿಸಿಹೆ ಇಂದ್ರಜಾಲ
ಮೇಘಮಾತೆಯ ಗರ್ಭದೊಳಗೊಂದು ಮಗು ಹುಟ್ಟಿ
ಜಗನೋಡಿ ಕ್ಷಣನಕ್ಕು ತಾಯ್ಮಡಿಲ ಸೇರುತಿದೆ
ದೇವಶಿಶುಗಳ ಸಮರದಾಟಕೆಂದೋ ಏನೋ
ರಚಿಸಿ ಬಿಲ್ಲನು ದಾರ ಮರೆತಂತಿದೆ
ದಿನದೊಳೊಬ್ಬನ ಪಹರೆ ನಿಶಿಯಳೊಬ್ಬನ ಪಹರೆ
ಅದರಿಂದ ನಿರ್ಭಯದೊಳಿಹುದೀ ಧರೆ
ಸ್ಥಾನವನು ತಪ್ಪಿಲ್ಲ ನಿಯತಿಯನು ಮೀರಿಲ್ಲ
ಅದು ನಿನ್ನ ಕುಂಚ ಕೌಶಲ್ಯವೆ ದೊರೆ?
ಗಂಧರ್ವ ನಗರದೊಳು ಚೆಂದವಹ ಮನೆಗಳನು
ಬರೆಬರೆದು ಅಳಿಸುತಿಹ ಪರಿಯನರಿಯೆ
ಮೇಘಮಾರ್ದಂಗಿಕನ ಲಯಕೆ ತಾಳವ ತಪ್ಪಿ
ನಾಲ್ದಿಂಗಳಪ್ಸರೆಯರಳುವುದರಿಯೆ
ನಿನ್ನ ಚಿತ್ತಾರ ಮೋಡಿಯನೋಡಿ ಪ್ರಖ್ಯಾತ
ಶಾಸ್ತ್ರವೇತ್ತರು ಮೇಣು ಪಂಚತಪರು
ಯೋಗಿಗಳು ವಿಜ್ಞಾನ ಹಯವೇರಿ ಮೆರೆದವರು
ತುದಿಮೊದಲ ಕಾಣದೆಲೆ ಬೆರಗಾದರು
ಚೌಷಷ್ಟಿ ಕಲೆಯ ಕಲೆಗಾರರೆಲ್ಲರ ಗುರುವೆ
ಅಂಗಯಷ್ಟಿಯ ನಿನ್ನ್ನ ಪದದಲಿಡುವೆ
ತಿರುಳನರಿಯುವ ಪರಿಯ ನೀ ತೋರಲಾಂ ತಿಳಿವೆ
ಇಕ್ಕಳದಿ ಬ್ರಹ್ಮಾಂಡ ಪಿಡಿಯಲಳವೆ?
Rating
Comments
ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ?
In reply to ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ? by Jayanth Ramachar
ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ?
ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ?
In reply to ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ? by ksraghavendranavada
ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ?
ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ?
In reply to ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ? by prasannakulkarni
ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ?
ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ?
In reply to ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ? by gopinatha
ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ?
ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ?
In reply to ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ? by asuhegde
ಉ: ಇಕ್ಕಳದಿ ಬ್ರಹ್ಮಾಂದ ಪಿಡಿಯಲಳವೆ?
ಉ: ಇಕ್ಕಳದಿ ಬ್ರಹ್ಮಾಂಡ ಪಿಡಿಯಲಳವೆ?
In reply to ಉ: ಇಕ್ಕಳದಿ ಬ್ರಹ್ಮಾಂಡ ಪಿಡಿಯಲಳವೆ? by sada samartha
ಉ: ಇಕ್ಕಳದಿ ಬ್ರಹ್ಮಾಂಡ ಪಿಡಿಯಲಳವೆ?
ಉ: ಇಕ್ಕಳದಿ ಬ್ರಹ್ಮಾಂಡ ಪಿಡಿಯಲಳವೆ?