ಮೊರೆ
ಸರಿಸಿಬಿಡು ಮೂಢಮನ ಆವರಿತ ಪೊರೆಯಾ|
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು||
ರೂಢಿರಾಡಿಯಡಿ ಸಿಲುಕಿ ತೊಳಲಾಡುತಿಹೆ ನಾನು|
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||
ಬಲ್ಲಿದರ ನುಡಿಕೇಳಿ ನೇರಮಾರ್ಗದಿ ನಡೆದೆ|
ಬಸವಳಿದಿದೆ ಮನವು ಕಷ್ಟಗಳ ಕೋಟಲೆಗೆ ||
ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ|
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||
ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ|
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ||
ಹುಲುಮನುಜ ನಾನಾಗಿ ಭಾವಬಂಧಿಯು ನಾನು|
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||
**********************
-ಕ.ವೆಂ.ನಾಗರಾಜ್.
(ನನ್ನ ಈ ರಚನೆಯನ್ನು 'ವೇದಸುಧೆ' ಅಂತರ್ಜಾಲ ತಾಣದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀಮತಿ ಲಲಿತಾ ರಮೇಶರು ಹಾಡಿದ್ದು, ಇದನ್ನು http://vedasudhe.blogspot.com/2011/01/blog-post_06.html ಇಲ್ಲಿ ಕೇಳಬಹುದು.)
Rating
Comments
ಉ: ಮೊರೆ
In reply to ಉ: ಮೊರೆ by drmulgund
ಉ: ಮೊರೆ
ಉ: ಮೊರೆ
In reply to ಉ: ಮೊರೆ by nagarathnavina…
ಉ: ಮೊರೆ
ಉ: ಮೊರೆ
In reply to ಉ: ಮೊರೆ by Chikku123
ಉ: ಮೊರೆ
ಉ: ಮೊರೆ
In reply to ಉ: ಮೊರೆ by ನಂದೀಶ್ ಬಂಕೇನಹಳ್ಳಿ
ಉ: ಮೊರೆ
ಉ: ಮೊರೆ
In reply to ಉ: ಮೊರೆ by manju787
ಉ: ಮೊರೆ