ಅಂಡರ್ ದ ಸೇಮ್ ಮೂನ್... ಬಗ್ಗೆ ಒಂದೆರಡು ಮಾತು..

ಅಂಡರ್ ದ ಸೇಮ್ ಮೂನ್... ಬಗ್ಗೆ ಒಂದೆರಡು ಮಾತು..

 
ಅಮ್ಮನ ಪ್ರೀತಿ ಅತ್ಯದ್ಭುತ. . . ನಿಜಕ್ಕೂ ಅದನ್ನ ಅಳಿಯಲು ಸಾಧ್ಯವೇ ಇಲ್ಲ.

ಅವತ್ತು ಭಾನುವಾರ. ಟಿವಿಯಲ್ಲಿ ಯಾವುದೇ ಒಳ್ಳೆಯ ಪ್ರೋಗ್ರಾಮ್ ಇರದೇ ಇರೋದು ನನ್ನ ಬೇಜಾರನ್ನು ಇನ್ನೂ ಇಮ್ಮಡಿಗೊಳಿಸಿತ್ತು. ಮನಸಿಗೆ ಯಾಕೋ ಬೇಜಾರು..ಒಂದು ವಾಕ್ ಹೋಗೋಣ ಅಂದ್ರೆ ಚಳಿ ಬೇರೇ..!

ಸುಮ್ನೆ ನೋಡೋಣ ಅಂತ ಸೀಡಿ ಕಿಟ್ ಓಪೆನ್ ಮಾಡಿ ನೋಡಿದ್ರೆ ಅಂಡರ್ ದ ಸೇಮ್ ಮೂನ್(ಲಾ ಮಿಸ್ಮಾ ಲೂನಾ - ಮೆಕ್ಸಿಕನ್ ಭಾಷೆಯಲ್ಲಿ) ಚಿತ್ರದ ಸೀಡಿ ಸಿಕ್ತು.. ಒಂದ್ ಫುಲ್ ಮಗ್ ಟೀ ಮಾಡಿಕೊಂಡು , ಚಿತ್ರ ನೋಡೊಕೆ ಕುಳಿತೇ ಬಿಟ್ಟೆ..

ವಾಹ್..ಆ ೧ ಗಂಟೆ ಕಳೆದಿದ್ದೇ ಗೊತ್ತಾಗ್ಲಿಲ್ಲ.. !

ರೊಸಾರೊಯೋ, ತನ್ನ ೯ ವರ್ಷದ ಮಗ ಕಾರ್ತೋಸ್ ನನ್ನು  ಮೆಕ್ಸಿಕೋದ ಹಳ್ಳಿಯಲ್ಲಿ ತನ್ನ ಮುದಿ ತಾಯಿಯ ಬಳಿ ಬಿಟ್ಟು ಅಮೇರಿಕಾಗೆ ಕಾನೂನು ಬಾಹಿರವಾಗಿ ವಲಸೆ ಬರುತ್ತಾಳೆ.. ಅಲ್ಲಿಯೇ ಮನೆಗೆಲಸ ಮಾಡಿಕೊಂಡು ಮಗನಿಗೆ ಹಣ ಕಳಿಸುತ್ತಿರುತ್ತಾಳೆ. ನಾಲ್ಕು ವರ್ಷವಾದ್ರೂ ಆಕೆ ಮರಳಿ ಬಾರದಿದ್ದಾಗ ಮಗ ಕಾರ್ತೋಸ್, ತಾಯಿಯನ್ನ ಭೇಟಿ ಮಾಡಬೇಕೆಂದು ಬಯಸುತ್ತಾನೆ. ಪ್ರತೀ ಭಾನುವಾರ ಫೋನ್ ಮಾಡುವ ತನ್ನ ತಾಯಿಯ ಕರೆಗಾಗಿ ಪಬ್ಲಿಕ್ ಟೆಲಿಫೋನ್ ಬೂತ್ ಬಳಿ ಕಾಯುತ್ತಾನೆ.ಎಂದಿನಂತೆ ಅಮ್ಮ ಫೋನ್ ಮಾಡಿದಾಗ, ಕಾರ್ತೋಸ್ ಅಮ್ಮನಿಗೆ ಬೇಗ ಬರುವಂತೆ ಹೇಳುತ್ತಾನೆ. ರೊಸಾರೊಯೋ ತಾನು ಬೇಗ ಬರುವುದಾಗಿ ಹೇಳುತ್ತಾಳೆ.. ಕಾರ್ತೋಸ್ ಕಾತುರದಿಂದ ನೀನು ಎಲ್ಲಿದ್ದಿ?? ನಿನ್ನ ಸುತ್ತ ಮುತ್ತ ಏನೇನಿದೆ ಎಂದು ಮುಗ್ದತೆಯಿಂದ ಪ್ರಶ್ನಿಸುತ್ತಾನೆ.. ಅಮ್ಮ, ತನ್ನ ಸುತ್ತಲ ವಾತಾವರಣದ ಬಗ್ಗೆ ಕಿರು ಪರಿಚಯ ಕೊಡುತ್ತಾಳೆ. . .

ರೊಸಾರೊಯೋ, “ನನ್ನ ನೆನಪಾದಾಗಲೆಲ್ಲ ಚಂದಿರನನ್ನು ನೋಡು. . . ಆ ವೇಳೆ ನಾನು ಚಂದಿರ ನನ್ನೇ ನೋಡುತ್ತಿರುತ್ತೇನೆ” ಎನ್ನುತಾಳೆ.. 

ಮನೆಗೆ ಬಂದು ಅಜ್ಜಿಯ ಬಳಿ ನಾನು ಅಮ್ಮನನ್ನು ನೋಡಲು ಹೋಗುತ್ತೇನೆ ಎಂದು ತಿಳಿಸುತ್ತಾನೆ. ಆಗ ಅಜ್ಜಿ “ನಿನ್ನ ತಾಯಿ ವಾಪಸ್ ಬಂದೇ ಬರುತ್ತಾಳೆ.. ನಿನ್ನ ಒಳ್ಳೆಯ ಭವಿಷ್ಯಕ್ಕೋಸ್ಕರ ಅವಳು ಅಲ್ಲಿ ಕಷ್ಟ ಪಡುತ್ತಿದ್ದಾಳೆ..” ಎಂದು ಅವನ ಮನವೊಲಿಸುತ್ತಾಳೆ ಅವನಮ್ಮ.

ರೊಸಾರೊಯೋ, ದಿನನಿತ್ಯ ಮನೆಗೆಲಸ ಮಾಡಿಕೊಂಡು, ಅವಮಾನ ಸಹಿಕೊಂಡು, ಪೊಲೀಸರಿಂದ ತಪ್ಪಿಸಿಕೊಂಡು ಮಗನಿಗಾಗಿ ಕಷ್ಟಪಟ್ಟು ದುಡಿಯುತ್ತಿರುತ್ತಾಳೆ..

ಅಜ್ಜಿ ನಿದ್ರಾವಸ್ಥೆಯಲ್ಲಿಯೇ ಪ್ರಾಣ ಬಿಟ್ಟಾಗ ಪುಟ್ಟ ಕಾರ್ತೋಸ್ , ಮುಂದಿನ ಭಾನುವಾರದೊಳಗೆ ತನ್ನ ತಾಯಿ ಫೋನ್ ಮಾಡುವ ಮುಂಚಿತವಾಗಿ , ಅವಳು ಬರುತ್ತಿದ್ದ ಟೆಲಿಫೋನ್ ಬೂತ ಬಳಿ ತಾನೇ ಹೋಗಬೇಕೆಂದು ನಿರ್ಧರಿಸಿ, ತಾಯಿಯನ್ನು ಹುಡುಕಿಕೊಂಡು ಅಮೇರಿಕಾಗೆ ಹೊರಡುತ್ತಾನೆ. ಇಬ್ಬರು ವಲಸಿಗರ ಸಹಾಯದಿಂದ ಪೊಲೀಸರ ಕಣ್ಣು ತಪ್ಪಿಸಿ ಗಡಿ ದಾಟೇ ಬಿಡುತ್ತಾನೆ. ಪುಟಾಣಿ ಕಾರ್ತೋಸ್ ಇನ್ನೇನು ಏರ್‌ಪೋರ್ಟ್ ಗೆ ಹೋಗಿ ಟಿಕೇಟ್ ತೆಗೆದುಕೊಳ್ಳುವಷ್ಟ್ರರಲ್ಲಿ ತನ್ನ ಪರ್ಸ್ ಕಳೆದು ಹೋಗಿರುವ ಬಗ್ಗೆ ಅರಿವಾಗುತ್ತದೆ. ಅದರ ಹಿಂದೆಯೇ ಕಾರ್ತೋಸ್ ಕಳ್ಳನೊಬ್ಬನ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ವಲಸಿಗರ ಗುಂಪಿಗೆ ಸೇರುತ್ತಾನೆ. ಪೊಲೀಸರ ಕಾಟ ಶುರುವಾದಾಗ ಅಲ್ಲಿಂದಲೂ ತಪ್ಪಿಸಿಕೊಳ್ಳುಬೇಕಾಗುತ್ತದೆ. ಎನ್ರಿಕ್ ಎನ್ನುವ ವಲಸಿಗನೊಬ್ಬನನ್ನು ಭೇಟಿ ಮಾಡುತ್ತಾನೆ..ಮೊದಮೊದಲು ಇಬ್ಬರಲ್ಲು ಜಗಳ, ಕಲಹವಾಗುತ್ತದೆ. ನಂತರ ಇಬ್ಬರ ಮಧ್ಯೆ ಒಳ್ಳೆಯ ಬಾಂದವ್ಯ ಬೆಳೆಯುತ್ತದೆ. ತನ್ನ ತಾಯಿ ಕೊಟ್ಟ ಪರಿಚಯದಂತೆ ಆಕೆ ಇರುವ ಜಾಗವನ್ನು ಹುಡೂಕುತ್ತಾರೆ. ಆದರೆ ಏನೂ ಪ್ರಯೋಜನವಾಗಲ್ಲ.

ಧೀರ ಕಾರ್ತೋಸ್ ತನ್ನ ತಾಯಿಯನ್ನು ಸಂಧಿಸಲೇಬೇಕೆಂದು ಎಲ್ಲೆಂದರಲ್ಲಿ ಕೆಲಸ ಮಾಡಿಕೊಂಡು, ದುಡ್ಡು ಸಂಪಾದಿಸುತ್ತಾನೆ. ಕೊನೆಗೊಮ್ಮೆ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾನೆ. . ಎನ್ರಿಕ್, ಅವನನ್ನು ಪೊಲೀಸರಿಂದ ತಪ್ಪಿಸುತ್ತಾನೆ, ಬದಲಿಗೆ ತಾನೇ ಸಿಕ್ಕಿಬೀಳುತ್ತಾನೆ. .  ಕೊನೆಗೆ ನಮ್ಮ ಕಥಾನಾಯಕ ಕಾರ್ತೋಸ್ ಅಲ್ಲಿಂದ ತಪ್ಪಿಸಿಕೊಂಡು ಬಸ್ ಸ್ಟಾಪ್ ಒಂದರ ಬಳಿ ಬಂದಾಗ ಟೆಲಿ ಫೋನ್ ಬೂತ್ ಒಂದನ್ನ ಕಾಣುತ್ತಾನೆ.. “ಹೌದು. . ತನ್ನ ತಾಯಿ ಕೊಟ್ಟ ಪರಿಚಯದಂತೆಯೇ ಇದೆ ಈ ಜಾಗ”ವೆಂದು ಮುಂದಾದಾಗ ತಾಯಿ ಕಾಣುತ್ತಾಳೆ. . .

 

Comments