ಹೀಗೊಂದು ಹರಟೆ.
- ನಾಳೆ ಹೇಗೂ ಭಾನುವಾರ ನಿಮ್ಗೂ ಆಫ಼ೀಸ್ಗೆ ರಜಾ, ನಿಮ್ಮಗಳಿಗೂ ಸ್ಕೂಲ್ ಇರೋಲ್ಲ, ನಮ್ಮಮನ ಮನೆಗೆ ಹೋಗಿ ಬರೊಣ್ವಾ -
- ನೋಡು ನಿಮ್ಮಮನ ಮನೆಗಾದ್ರೂ ಹೋಗು ಇಲ್ಲ ನಮ್ಮಾವನ ಮನೇಗಾದ್ರೂ ಹೋಗು ಆದ್ರೆ ನನ್ನ ಮಾತ್ರ ಎಲ್ಲಿಗೂ ಕರಿಬೇಡ, ಬೇಕಾದ್ರೆ ನಿನ್ಮಗ್ಳು ಬರ್ತಾಳೆ ಕರ್ಕೊಂಡು ಹೋಗು -
-ಏನಿಲ್ಲ ನಾನೂ ಬರೋಲ್ಲ, ಅಪ್ಪನ ಜೊತೇನೇ ಇರ್ತಿನಿ-
- ಸರಿಬಿಡಿ ನಿಮ್ದು ನಿಂಮಗಳ್ದು ಯಾವಾಗ್ಲೂ ಒಂದೆ ರಾಗ, ಯಾವಾಗ ನಮ್ಮಪ್ಪನ ಮನೆಗೆ ಹೊರ್ಟ್ರೂ ನಾನ್ ಬರೋಲ್ಲ ನಾನ್ ಬರೋಲ್ಲ. ಬರ್ದೆ ಇದ್ರೆ ಬೇಡ ಬಿಡಿ ನಾನೊಬ್ಳೆ ಹೋಗಿ ಆರಾಮಾಗಿ ಇದ್ದು ಬರ್ತಿನಿ -
- ಹಾಗೆ ಮಾಡು ಮಾರಾಯ್ತಿ ನಂಗೂ ನೆಮ್ದಿ ಆಯ್ತು-
- ಅಂದ್ರೆ ನಾನಿಲ್ಲ ಅಂದ್ರೆ ನಿಮ್ಗೆ ನೆಮ್ದಿನಾ-
- ಹಾಗಲ್ವೆ ನೀನು ನೋಡೋ ಟೀ ವೀ ಬಂದ್ ಆಗುತ್ತಲ್ಲ ಹಾಗಾಗಿ ನೆಮ್ದಿ ಅಂದೆ -
- ಆಯ್ತು ನಂಗೆಲ್ಲ ಗೊತ್ತು, ಇನ್ನು ನಾನಿಲ್ಲ ಅಂತ ಹೋಟೆಲ್ ತಿಂಡಿ ತಂದು ತಿನ್ನಬೇಡಿ, ಹಾಳಾದ್ದು ಹೊಟ್ಟೆ ಕೆಟ್ಟುಹೋಗುತ್ತೆ -
-ಅದನ್ನ ನಿನ್ನಕೈಲಿ ಹೇಳಿಸ್ಕೊ ಬೇಕಾ ನಂಗೆಲ್ಲಾ ಗೊತ್ತು, ಎಲ್ಲಿಗೂ ಹೋಗೋಲ್ಲ ಮನೇಲೆ ತಿಂಡಿ ಮಾಡ್ಕೋತಿವಿ ಆಯ್ತಾ-
-ಒಂದ್ ಕೆಲ್ಸಮಾಡಿ ಫ಼್ರಿಜ್ ಲ್ಲಿ ಹುರ್ಳಿಕಾಯಿ ಟೊಮೊಟೊ ಆಲೂಗೆಡ್ಡೆ ಕ್ಯಾರೆಟ್ ಎಲ್ಲ ಇದೆ, ಅಚ್ ಕಟ್ಟಾಗಿ ತರ್ಕಾರಿ ಉಪ್ಪಿಟ್ಟು ಮಾಡ್ಕೊಂಬಿಡಿ ಆಯ್ತಾ -
- ಅದು ಸರಿನೆ ಉಪಿಟ್ಟಾದ್ರೆ ಮಾಡೋದು ಸುಲ್ಬ ಅದ್ನೆ ಮಾಡ್ಕೋತಿವಿ, ಆದ್ರೆ ಈ... ಇದನ್ನ ಹಾಕೋದು... -
- ಏನು ತರ್ಕಾರಿ ಯಾವಗ ಹಾಕ್ಬೇಕು ಅಂತ್ಲಾ ಅದನ್ನ ಒಗ್ಗರ್ಣೆ ಜೊತೆಗೆ ಹಾಕಿ ಫ಼್ರೈ ಮಾಡಿಬಿಡಿ -
- ಅದಲ್ಲವೆ ಅದ್ ನಂಗೊತ್ತು ಈ.... -
- ಏನು ಉಪ್ಪು ಹಾಕೋದು ತಾನೆ, ನನ್ಗೊತ್ತು ನೀವು ಯಾವಾಗ್ಲೂ ಅದನ್ನೆ ಮರೆಯೊದು, ಏಕೆಂದ್ರೆ ಮೊನ್ನೆ ಸಾರು ಮಾಡ್ದಾಗ್ಲೂ ಮರ್ತಿದ್ರ -
- ಏ... ನೀನೊಂದು ಯಾವ್ದೊ ಹಳೆ ಪುರಾಣ ಹೇಳ್ಬೇಡ, ನಾ ಕೇಳ್ತಿರೋದು ಈ.... ಇದನ್ನ ಹಾಕೋದು -
- ಮತ್ತಿನೇನು ನೀರು ಹಾಕೋದಾ ಒಗ್ಗರಣೆ ಎಲ್ಲಾ ಆದ್ಮೇಲೆ ತರ್ಕಾರೀನೂ ಫ಼್ರೈ ಆದ್ಮೇಲೆ ನೀರು ಹಾಕಿ, ಅದಕ್ಕೆ ಉಪ್ಪು ಹಾಕಿ, ತರ್ಕಾರಿ ಚೆನ್ನಾಗಿ ಬೆಂದ್ಮೇಲೆ ಬೇಕಾದ್ರೆ ಕಾಯಿ ತುರಿನೂ ಹಾಕಿ ಆಮೇಲೆ ರವೆ ಹಾಕಿ ಗೊತ್ತಯ್ತೆ, ಇನ್ನೇನು ಪೂರ್ತಿ ಉಪ್ಪಿಟ್ಟು ಮಾಡೋದೆ ಹೇಳಿದ್ದೀನಪ್ಪ. -
- ಅಯ್ಯೊ..... ನಂಗೆ ಮಾತಾಡೋಕ್ಕೆ ಅವಕಾಶ ಕೊಡ್ದಲೆ ನೀನು ಹೇಳ್ತಾನೆ ಹೋಗ್ತಾ ಇದ್ಯಲ್ಲ ಒಳ್ಳೆ ಪೂಟ್ ಲಾಯ್ರಿ ವಾದ ಮಾಡೊಹಾಗೆ. ಉಪ್ಪಿಟ್ಟು ಮಾಡೊವಾಗ ನೀನು ಹೇಳಿದ್ದೆಲ್ಲ ಹಾಕೋದು ಯಾವ್ಯಾವಾಗ ಅಂತ ನಂಗೆ ಗೊತ್ತು, ಆದ್ರೆ ನೀನು ಹಾಕ್ತಿಯಲ್ಲ ಈ... ಕೂದ್ಲು... ಅದನ್ನ ಹಾಕೋದು ಯಾವಾಗ ಅಂತ -
ಗುರಾಯಿಸಿ ನನ್ನನ್ನು ಒಮ್ಮೆ ನೋಡಿದ ನನ್ನವಳು ಅಡಿಗೆ ಮನೆಯತ್ತ ನಡೆದಳು. ಒಳಗಡೆ ಸಿಂಕ್ನಲ್ಲಿದ್ದ ಸ್ಟೀಲ್ ಪಾತ್ರೆ ಒಳಕ್ಕೆ ಕಾಫ಼ಿ ಲೋಟ ಡಳ್ ಎಂದು ಬಿದ್ದಾಗ್ಲೆ ಗೊತ್ತಾಗಿದ್ದು ಆಕೆಗೆ ಸ್ವಲ್ಪ ಸಿಟ್ಟು ಬಂದಿದೆ ಅಂತ. ನನ್ನ ಮಗಳು ನನ್ನ ನೋಡಿ ಭಾನುವಾರ ಪ್ರಾರಂಭ ಆಗೋಕ್ಕೆ ಮುಂಚೆನೆ ಪಂಚ್ ಚೆನ್ನಾಗಿದೆ ಅನ್ನೊ ತರ ತಮ್ಬ್ಸ್ ಅಪ್ ಮಾಡಿ ಮುಸಿಮುಸಿ ನಗ್ತಿದ್ಲು
Comments
ಉ: ಹೀಗೊಂದು ಹರಟೆ.
ಉ: ಹೀಗೊಂದು ಹರಟೆ.
ಉ: ಹೀಗೊಂದು ಹರಟೆ.
ಉ: ಹೀಗೊಂದು ಹರಟೆ.
ಉ: ಹೀಗೊಂದು ಹರಟೆ.