ರಾಜ್ಯದ ಪ್ರಮುಖ ರೈಲು ನಿಲ್ದಾಣಗಳ ನಾಮಕರಣ

ರಾಜ್ಯದ ಪ್ರಮುಖ ರೈಲು ನಿಲ್ದಾಣಗಳ ನಾಮಕರಣ

Comments

ಬರಹ

ಈ ಕೆಳಗೆ ರಾಜ್ಯದ ಪ್ರಮುಖ ರೈಲು ನಿಲ್ದಾಣಗಳ ನಾಮಕರಣ ಪಟ್ಟಿ ತಯಾರಿಸಲಾಗುತ್ತಿದೆ. ಆಯಾ ಸ್ಥಳಗಳ ಪ್ರಮುಖ ಗಣ್ಯ ವ್ಯಕ್ತಿಗಳು, ಸ್ವತಂತ್ರ ಹೋರಾಟಗಾರರು,ಕವಿಗಳು,ಸಾಹಿತಿಗಳು ಹೆಸರನ್ನು ಆಧಾರವಾಗಿಸಿ ಇದನ್ನು ತಯಾರಿಸಿ ಲಾಗುತ್ತಿದೆ. ಇದನ್ನು ನಾನು ರಾಜ್ಯದ ಎಲ್ಲ ಪತ್ರಿಕೆಗಳಿಗೆ ಕಳಿಸಲು ಇಚ್ಚಿಸಿರುವೆ.ಕೆಲವು ಸ್ಥಳಗಳ ಮಾಹಿತಿ ಗೊತ್ತಿರುವವರು ಹೆಸರನ್ನು ತಾವು ಸೂಚಿಸಿ, ದಯವಿಟ್ಟು ತಮ್ಮ ಕಾಣಿಕೆ ನೀಡಿ.
 
ಕರ್ನಾಟಕ ರಾಜ್ಯದ ಪ್ರಮುಖ  ರೈಲು ನಿಲ್ದಾಣಗಳ ನಾಮಕರಣ ಪಟ್ಟಿ:
 ಬೆಂಗಳೂರು- ನಾಡಪ್ರಭು ಕೆಂಪೇಗೌಡ ,ಡಾ. ರಾಜಕುಮಾರ
ವಿಜಾಪುರ - ಜಗಜ್ಯೋತಿ ಬಸವೇಶ್ವರ  (ಬಸವೇಶ್ವರರು ಹುಟ್ಟಿದ ಸ್ಥಳ ವಿಜಾಪುರ ಜಿಲ್ಲೆಯಲ್ಲಿ ಅದಕ್ಕೆ)
ಬಳ್ಳಾರಿ - ವಿಜಯನಗರ
ಬೆಳಗಾವಿ -  ವೀರ ಸಂಗೊಳ್ಳಿ ರಾಯಣ್ಣ  ಅಥವಾ ಬೆಳವಾಡಿ ಮಲ್ಲಮ್ಮ  
ಧಾರವಾಡ - ಕನ್ನಡ ಕುಲ ತಿಲಕ ವರಕವಿ ಬೇಂದ್ರೆ
ಹುಬ್ಬಳ್ಳಿ -  ವೀರ ರಾಣಿ ಕಿತ್ತೂರು ಚೆನ್ನಮ್ಮ  ಅಥವಾ ಗಾನ ಕೋಗಿಲೆ ಗಂಗೂಬಾಯಿ ಹಾನಗಲ್
ಹೊಸಪೇಟೆ - ಶ್ರೀ ಕೃಷ್ಣ ದೇವರಾಯ
ಕಲ್ಬುರ್ಗಿ- 
ಬಾಗಲಕೋಟೆ -  ಕವಿ ಚಕ್ರವರ್ತಿ ರನ್ನ, ಬಿ.ಡಿ.ಜತ್ತಿ  
ಬೀದರ್ -
ರಾಯಚೂರು -
ಮಂಗಳೂರು -  ಕಯ್ಯಾರ ಕಿಞ್ಞಣ್ಣ ರೈ,ಎಂ.ಗೋವಿಂದ ಪೈ,ಪಂಜೆ ಮಂಗೇಶ್ ರಾಯರು
ಉಡುಪಿ -   ಕಡಲತೀರದ ಭಾರ್ಗವ ಶ್ರೀ ಶಿವರಾಂ ಕಾರಂತ
ಕೋಲಾರ್ - ಮಾಸ್ತಿ ವೆಂಕಟೇಶ್ ಅಯ್ಯಂಗಾರ 
ಮೈಸೂರು - ಜಯಚಾಮರಾಜ ಒಡೆಯರ್
ದಾವಣಗೆರೆ -
ಚಿತ್ರದುರ್ಗ - ವೀರ ವನಿತೆ ಒನಕೆ ಓಬವ್ವ
ಚಿಕ್ಕಮಗಳೂರು -
ಶಿವಮೊಗ್ಗ - ರಾಷ್ಟ್ರಕವಿ ಕುವೆಂಪು ,ಅಕ್ಕ ಮಹಾದೇವಿ
ತುಮಕೂರು - ಶ್ರೀ ಸಿದ್ಧಗಂಗ 
ಚಾಮರಾಜನಗರ -
ಹಾಸನ - ಹೊಯ್ಸಳ ,ಚನ್ನಕೇಶವ
ಮಂಡ್ಯ -
ಕಾರವಾರ -
ರಾಮನಗರ -
ಯಾದಗಿರಿ -
ಗದಗ -  ಗಾನಯೋಗಿ  ಪಂಡಿತ ಪಂಚಾಕ್ಷರಿ ಗವಾಯಿ , ಪಂಡಿತ ಭೀಮಸೇನ ಜೋಷಿ ,ಕುಮಾರವ್ಯಾಸ
ಮಡಿಕೇರಿ - ಫೀಲ್ದ ಮಾರ್ಷಲ್ ಕಾರ್ಯಪ್ಪ
ಹಾವೇರಿ - ಕನಕದಾಸ ಅಥವಾ ಸರ್ವಜ್ಞ ಅಥವಾ ಮೈಲಾರ ಮಹಾದೇವಪ್ಪ
ಕೊಪ್ಪಳ -
ಚಿಕ್ಕಬಳ್ಳಾಪುರ - ಸರ್. ಎಂ.ವಿಶ್ವೇಶ್ವರಯ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet